ಬಾಲಿವುಡ್ ನ ಸಿದ್ದಾರ್ಥ್ ಬದ್ಲು ತಮಿಳು ನಟ ಸಿದ್ದಾರ್ಥ್ ಗೆ ಸಾ’ವಾಗಬೇಕಿತ್ತು ಎಂದ ನೆಟ್ಟಿಗರು..ನಿಮ್ಮ ಪ್ರಕಾರ ಇದು ಸರಿಯೇ..ನಟ ಸಿದ್ದಾರ್ಥ್ ಹೇಳಿದ್ದೇನು ಗೊತ್ತಾ?

Cinema

ಬಿಗ್ ಬಾಸ್ ಸ್ಪರ್ಧಿ, ಬಾಲಿವುಡ್ ನಟ ಸಿದ್ದಾರ್ಥ ಅವರು ನಾಲ್ಕು ದಿನಗಳ ಹಿಂದಷ್ಟೇ ಮುಂಬೈನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ತೀರಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲೆ ಸಾ’ವಿಗೀಡಾದ ಸಿದ್ದಾರ್ಥ್ ಅವರ ಸಾ’ವಿಗೆ ಸಿನಿಮಾರಂಗ ಸೇರಿದಂತೆ ಅಭಿಮಾನಿಗಳು ಸಿದ್ದಾರ್ಥ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಕೋರಿದ್ದಾರೆ. ಆದರೆ ಇಲ್ಲಿ ವಿಚಿತ್ರ ಎಂದರೆ ಒಂದೇ ಹೆಸರಿನ ಸೆಲೆಬ್ರೆಟಿಗಳು ಇದ್ದಾಗ ಸಹಜವಾಗಿ ಗೊಂದಲವಾಗುತ್ತದೆ. ಇದೆ ಕಾರಣದಿಂದ ಹಲವರು ತಮಿಳಿನ ಖ್ಯಾತ ನಟ ಸಿದ್ದಾರ್ಥ್ ಅವರಿಗೆ ಅವರ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಿರುವುದು ವರದಿಯಾಗಿದೆ. ಆದರೆ ಇದು ಕಣ್ಣತಪ್ಪಿನಿಂದಾಗಿ ಆಗಿರುವುದಲ್ಲ.

ಹೌದು, ಕೆಲವರು ಬೇಕಂತಲೇ ತಮಿಳು ನಟ ಸಿದ್ದಾರ್ಥ್ ಅವರ ಫೋಟೋ ಹಾಕಿ ಶ್ರದ್ಧಾಂಜಲಿ ಕೋರಿದ್ದಲ್ಲದೆ ಕಾಮೆಂಟ್ ಗಳನ್ನ ಕೂಡ ಮಾಡಿದ್ದಾರೆ. ನಟ ಸಿದ್ದಾರ್ಥ್ ಅವರು ತಾವು ರಾಜಕೀಯವಾಗಿ ಕೊಡುವ ಹೇಳಿಕೆಗಳಿಂದಾಗಿ ಸಾವಿರಾರು ಜನರ ವಿ’ರೋಧ ಕಟ್ಟಿಕೊಂಡಿರುವುದು ಎಲ್ಲರಿಗು ಗೊತ್ತಿರುವ ವಿಷಯವೇ..ಇದೆ ಕಾರಣಕ್ಕಾಗಿ ಸಿದ್ದಾರ್ಥ್ ಅವರನ್ನ ಹೀಗೆ ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಾಜಕೀಯ ವಾದಗಳು ಏನೇ ಇರಲಿ ಮನುಷ್ಯರಾಗಿರುವ ನಾವುಗಳು ಸಾ’ವಿನ ವಿಚಾರದಲ್ಲಿ ಸಂಭ್ರಮ ಪಡುವುದು ತಪ್ಪು ಎಂದು ಅನೇಕರ ಅಭಿಪ್ರಾಯವಾಗಿದೆ. ಆದರೆ ಕೆಲವರಂತೂ ಅತಿ ರೇಖದ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.

ಅದು ಯಾವ ಮಟ್ಟಕ್ಕೆ ಎಂದರೆ ದೇವರು ಆ ಸಿದ್ದಾರ್ಥ್ ಬದಲಿಗೆ ಈ ಸಿದ್ದಾರ್ಥ್ ಗಾದರು ಸಾ’ವು ನೀಡಬಹುದಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಸ್ವತಃ ನಟ ಸಿದ್ದಾರ್ಥ್ ಅವರೇ ತಮ್ಮ ಬಗ್ಗೆ ಈ ರೀತಿಯಾಗಿ ಫೋಟೋ ಅಪ್ಲೋಡ್ ಮಾಡಿ ಕಾಮೆಂಟ್ ಮಾಡುವವರ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ನೇಹಿತರೇ, ಹೀಗೆ ಗೊತ್ತಿದ್ದೂ, ಗೊತ್ತಿದ್ದೂ ಬದುಕಿರುವ ಒಬ್ಬ ವ್ಯಕ್ತಿಯ ಫೋಟೋ ಅಪ್ಲೋಡ್ ಮಾಡಿ ಶ್ರದ್ಧಾಂಜಲಿ ಅರ್ಪಿಸವುದು ತಪ್ಪೋ, ಸರಿಯೋ ಎಂಬುದರ ಬಗ್ಗೆ ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ..