ಶಾಕಿಂಗ್ ಟ್ವಿಸ್ಟ್..ಸುಬ್ರಮಣಿ ಪತ್ನಿ ಜೀ’ವ ಕಳೆದುಕೊಂಡಿದ್ದು ಕೊ’ರೋನಾದಿಂದಲ್ಲ..ಅಸಲಿ ಕಾರಣವೇ ಬೇರೆ ?

Kannada News
Advertisements

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸಿಂಗಿಂಗ್ ಶೋ ಮೂಲಕ ಖ್ಯಾತರಾದ ಪೊಲೀಸ್ ಕಾನ್ಸ್ಟೇಬಲ್ ಸುಬ್ರಮಣಿ ಅವರು ಈಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇನ್ನು ಇವರ ಪತ್ನಿ ಕೊ’ರೊನದಿಂದಾಗಿ ಜೀವ ಕಳೆದುಕೊಂಡರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಈಗ ಈ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಆಗಿದ್ದು ಸುಬ್ರಮಣಿ ಅವರ ಪತ್ನಿ ಮೃ’ತಪಟ್ಟಿದ್ದು ಸೋಂ’ಕಿನ ಕಾರಣದಿಂದಲ್ಲ..ಅಸಲಿ ಕಾರಣವೇ ಬೇರೆ ಎಂಬ ವಿಚಾರ ಈಗ ಬಹಿರಂಗವಾಗಿದೆ. ಸುಬ್ರಮಣಿಯವರು ಮುಖ್ಯ ಪೇದೆಯಾಗಿ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಪತ್ನಿಯ ಹೆಸರು ಜ್ಯೋತಿ ಎಂದು.

[widget id=”custom_html-4″]

ಆದರೆ, ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಸುಬ್ರಮಣಿ ಅವರು ಕಳೆದ ಎರಡು ತಿಂಗಳುಗಳಿಂದ ಕೆಲಸಕ್ಕೆ ಹೋಗಿಲ್ಲ ಎಂದು ಹೇಳಲಾಗಿದೆ. ಇನ್ನು ಪತ್ನಿ ಜ್ಯೋತಿ ಸುಬ್ರಮಣಿಯವರು ಕೋಲಾರದಲ್ಲಿ ವಾಸವಾಗಿದ್ದು, ಮೇ ೭ನೇ ತಾರೀಖಿನಂದು ಜಿಲ್ಲೆಯ ಧರ್ಮರಾಯ ನಗರದಲ್ಲಿರುವ ತಮ್ಮ ನಿವಾಸದಲ್ಲೇ ೩೩ ವರ್ಷದ ಜ್ಯೋತಿ ತಮ್ಮ ಪ್ರಾ’ಣ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದು ಅವರನ್ನ ತತ್ಕ್ಷಣವೇ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿತ್ತು. ಆದರೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪ್ರೈವೇಟ್ ಆಸ್ಪತ್ರೆಯೊಂದರಲ್ಲಿ ದಾಖಲು ಮಾಡಲಾಗಿದ್ದು ಅಲ್ಲಿ ಸಮಯಕ್ಕೆ ಸರಿಯಾಗಿ ಬೆಡ್ ಹಾಗೂ ಆಕ್ಸಿಜೆನ್ ಸಿಗದ ಕಾರಣ, ನಗರದ ಹೊರಹೊಲಯದಲ್ಲಿರುವ ಹೊಸಕೋಟೆಯ ಆಸ್ಪತ್ರೆಯೊಂದರಲ್ಲಿ ಜ್ಯೋತಿ ಅವರನ್ನ ದಾಖಲು ಮಾಡಲಾಗಿತ್ತು.

[widget id=”custom_html-4″]

Advertisements

ಆದರೆ ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಸುಬ್ರಮಣಿ ಪತ್ನಿ ಜ್ಯೋತಿ ಅವರು ಸಾ’ವನ್ನಪ್ಪಿದರು ಎಂದು ಹೇಳಲಾಗಿದೆ. ಕೊರೋನಾ ಕಾರಣದಿಂದಾಗಿ ಜ್ಯೋತಿ ಅವರ ಜೀ’ವ ಹೋಗಿದ್ದು ಎಂಬ ಸುದ್ದಿ ಹರಿದಾಡಿತ್ತು. ಆದರೆ ಕೌಟಂಬಿಕ ಕಲಹವೇ ಜ್ಯೋತಿ ಅವರು ಇಹಲೋಕ ತ್ಯಜಿಸಲು ಕಾರಣ ಎಂದು ಹೇಳಲಾಗಿದೆ. ಇನ್ನು ಈ ಪ್ರಕರಣ ಕೋಲಾರದ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.