5ದಿನ ಆದ್ರೂ ಮನೆ ಬಾಗಿಲು ತೆಗೆಯದ ಸಹೋದರಿಯರು! ಆದ್ರೆ ಬಾಗಿಲು ತೆಗೆದಾಗ ಕಂಡಿದ್ದೆ ಬೇರೆ..

Kannada News Uncategorized

ನಮಸ್ತೇ ಸ್ನೇಹಿತರೇ, ನಮ್ಮ ಸುತ್ತ ಮುತ್ತ ನಡೆಯುವ ಕೆಲವೊಂದು ಘಟನೆಗಳು ಎಂತಹವರಿಗೂ ಕಣ್ಣೀರು ತರಿಸುತ್ತವೆ. ಹೌದು, ಈಗ ಅದೇ ರೀತಿಯ ಘಟನೆಯೊಂದು ಅಕ್ಕ ತಂಗಿಯರ ಜೀವನದಲ್ಲಿ ನಡೆದಿದ್ದು ಇಂತಹ ಪರಿಸ್ಥಿತಿ ಯಾರಿಗೂ ಕೂಡ ಬರಬಾರದು ಎಂದು ಜನರು ಕಣ್ಣೀರಿಟ್ಟಿದ್ದಾರೆ. ಇನ್ನು ಈ ಘಟನೆ ಬಗ್ಗೆ ಕೇಳಿದ್ರೆ ಇಂತಹವರ ಕಲ್ಲು ಹೃದಯ ಕೂಡ ಕರುಗುತ್ತೆ. ಇನ್ನು ಆ ಅಕ್ಕ ತಂಗಿಯರ ಬಗ್ಗೆ ಹೇಳುವುದಾದರೆ ಇಬ್ಬರು ಒಂದೇ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಾ ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಊರಿಂದ ಊರಿಗೆ ಬಂದು ಗೌರವಯುತವಾಗಿ ಜೀವನ ನಡೆಸುತ್ತಿದ್ದ ಸಹೋದರಿಯರು ಇದು ದಿನಗಳಿಂದ ಮನೆಯ ಬಾಗಿಲನ್ನೇ ತೆರೆದಿರಲಿಲ್ಲ.

ಮನಕಲುಕುವ ಈ ಘಟನೆ ನಡೆದಿರುವುದು ಬೆಣ್ಣೆನಗರಿ ದಾವಣಗೆರೆಯಲ್ಲಿ ನಡೆದಿದ್ದು ಅಕ್ಕ ತಂಗಿಯರ ಹೆಸರು ಗೌರಮ್ಮ ಮತ್ತು ತಂಗಿ ರಾಧಮ್ಮ ಎಂದು. ಗೌರಮ್ಮನಿಗೆ ೩೪ವರ್ಷ ವಯಸ್ಸಾದರೆ, ರಾಧಮ್ಮನಿಗೆ ೩೨ವರ್ಷ ವಯಸ್ಸಾಗಿತ್ತು. ಕೆಲಸಕ್ಕೆಂದು ಹಳ್ಳಿ ಬಿಟ್ಟು ಹೊರಬಂದಿದ್ದು ಇವರು ಬಳ್ಳಾರಿ ಜಿಲ್ಲೆಗೆ ಸೇರಿದ ಕೂಡ್ಲಗಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದವರು. ಇನ್ನು ಗೌರಮ್ಮ ಎನ್ನುವವರಿಗೆ ಮದ್ವೆಯಾಗಿತ್ತು ಎಂದು ಹೇಳಲಾಗಿದ್ದು, ಸಾಂಸಾರಿಕ ಜೀವನದಲ್ಲಾದ ತೊಂದರೆಯಿಂದ ದೂರವಿದ್ದವರು ತಂಗಿಯ ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ಹೀಗೆ ಒಂದೇ ಮನೆಯಲಿ ಜೀವನ ನಡೆಸುತ್ತಿದ್ದ ಸಹೋದರಿಯರು ೫ ದಿನಗಳ ಕಾಲ ಮನೆ ಬಾಗಿಲು ತೆಗೆಯದ ಕಾರಣ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದರೂ ಸುಮ್ಮನಾಗಿದ್ದಾರೆ.

ಆದರೆ ಹೀಗೆ ದಿನಗಳು ಕಳೆದ ಬಳಿಕ ಆ ಮನೆಯಿಂದ ಕೆಟ್ಟ ವಾಸನೆ ಬರಲಾರಂಭಿಸಿದೆ. ಇನ್ನು ಮಾಮೂಲಿಯಂತೆ ಆ ಊರಿನ ಜನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ತನಿಖೆಗೆ ಬಂದ ಆರಕ್ಷಕರು ಬಾಗಿಲು ತೆಗೆಯಿರಿ ಎಂದು ಕೂಗುತ್ತಾರೆ. ಕೊನೆಗೆ ಪೊಲೀಸರೇ ಬಾಗಿಲು ಒ’ಡೆದು ನೋಡಿದಾಗ ಆಗಿದ್ದಾರೆ. ಹೌದು, ಗೌರಮ್ಮ ರಾಧಮ್ಮ ಅವರ ದೇ’ಹಗಳು ಕೊ’ಳೆತ ಸ್ಥಿತಿಯಲ್ಲಿದ್ದವು. ಅಕ್ಕ ತಂಗಿಯರ ಈ ಸ್ಥಿತಿಯನ್ನ ಕಂಡು ಆ ಊರಿನ ಜನ ಮರುಗಿ ಕಣ್ಣೀರು ಹಾಕಿದ್ದಾರೆ. ಇನ್ನ್ನು ಸಹೋದರಿಯರ ಕಡೆಯ ಸಂಬಂಧಿಗಳು ಗೌರಮ್ಮ ಅವರ ಗಂಡನ ಮೇಲೆ ಅ’ನುಮಾನಗೊಂಡಿದ್ದು ದೂರು ನೀಡಿದ್ದಾರೆ ಎನ್ನಲಾಗಿದೆ.