ಸ್ನೇಹಿತನ ಭೇಟಿ ಮಾಡಲು ಕೇರಳಕ್ಕೆ ಹೋದ ಮಂಡ್ಯ ಹೈದನಿಗೆ ಕಾದಿತ್ತು ಅದೃಷ್ಟ ! ರಾತ್ರೋ ರಾತ್ರಿ ಕೋಟ್ಯಧಿಪತಿಯಾದ ಯುವಕನ ಹಿಂದಿದೆ ರೋಚಕ ಕಹಾನಿ..

Kannada News

ಸ್ನೇಹಿತರೇ, ಒಂದು ರೂಪಾಯಿಗೂ ಪರದಾಡುವ ವ್ಯಕ್ತಿಗೆ ಅದೃಷ್ಟ ಆತನ ಹಣೆಬರಹ ಚೆನ್ನಾಗಿತ್ತು ಎಂದರೆ ರಾತ್ರೋ ರಾತ್ರಿ ಶ್ರೀಮಂತನಾಗಿಬಿಡುತ್ತಾನೆ. ಕೆಲಸ ಮಾಡಿನೇ ಹಣವಂತನಾಗಬೇಕು ಎಂದೇನಿಲ್ಲ. ಅದೃಷ್ಟ ದೇವತೆಯ ಕೃಪಾಕಟಾಕ್ಷ ವ್ಯಕ್ತಿಯೊಬ್ಬನ ಮೇಲೆ ಬಿತ್ತು ಎಂದರೆ ಒಳ್ಳೆಯ ರೀತಿಯಲ್ಲೇ ರಾತ್ರೋ ರಾತ್ರಿ ಶ್ರೀಮಂತರಾದವರನ್ನ ನಾವು ನೋಡಿದ್ದೇವೆ, ಕೇಳಿದ್ದೇವೆ. ಅದಕ್ಕೆ ಹೇಳೋದು..ಅದೃಷ್ಟ ಯಾರನ್ನ ಯಾವಾಗ ಹೇಗೆ ಹುಡುಕಿಕೊಂಡು ಬರುತ್ತದೆ ಅಂತ. ಈಗ ಅದೇ ರೀತಿಯ ಪ್ರಸಂಗವೊಂದು ಸಕ್ಕರೆ ನಾಡು ಮಂಡ್ಯದ ಯುವಕನೊಬ್ಬನ ಜೀವನದಲ್ಲಿ ನಡೆದಿದೆ.

ಹೌದು, ಫೇಸ್ಬುಕ್ ನಲ್ಲಿ ಪರಿಚಯವಾದ ಸ್ನೇಹಿತನನ್ನ ಭೇಟಿ ಮಾಡುವ ಸಲುವಾಗಿ ಕೇರಳಕ್ಕೆ ಹೋಗಿದ್ದ ಮದ್ದೂರಿನ ಸೋಮನಹಳ್ಳಿಯ ಸೋಹನ್ ಬಲರಾಮ್ ಎನ್ನುವ ಯುವಕ ಈಗ ಕೋಟ್ಯಧಿಪತಿಯಾಗಿದ್ದಾನೆ. ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಕೇರಳದ ಪುಥನಾಥಣಿ ಸ್ನೇಹಿತನನ್ನ ನೋಡಲು ಹೋಗಿದ್ದ ಬಲರಾಮ್ ಮರಳಿ ಕರ್ನಾಟಕಕ್ಕೆ ಬರುವಾಗ ಅಲ್ಲಿನ ಅಂಗಡಿಯೊಂದರಲ್ಲಿ ನೂರು ರೂಪಾಯಿಯ ಲಾಟರಿ ಟಿಕೆಟ್ ಕೊಂಡಿದ್ದಾನೆ. ಅದು ಅವನ ಸ್ನೇಹಿತನ ಒತ್ತಾಯದ ಮೇರೆಗೆ.

ಈಗ ಮಂಡ್ಯದ ಉದ್ಯಮಿಯ ಮಗನಾಗಿರುವ ಬಲರಾಮ್ ಗೆ ಅದೃಷ್ಟ ದೇವತೆಯು ಒಲಿದಿದ್ದಾಳೆ. ಹೌದು, ಬಲರಾಮ್ ಕೊಂಡಿದ್ದ ಭಾಗ್ಯಧರ ಲಾಟರಿ ಸಂಖ್ಯೆಗೆ ಬರೋಬ್ಬರಿ 1 ಕೋಟಿ ಬಂಪರ್ ಬಹುಮಾನ ಒಡೆದಿದೆ. ಇದರಿಂದ ಅವರ ಕುಟುಂಬದಲ್ಲಿ ದೊಡ್ಡ ಸಂಭ್ರಮವೇ ಮನೆ ಮಾಡಿದೆ. ನೋಡಿದ್ರಾ, ಸ್ನೇಹಿತನನ್ನ ನೋಡಲು ಕೇರಳಗೆ ಹೋಗಿದ್ದವನಿಗೆ ಲಾಟರಿ ಮೂಲಕ ಅದೃಷ್ಟ ದೇವತೆ ಹೇಗೆ ಹುಡುಕೊಂಡು ಬಂದಿದ್ದಾಳೆ ಅಂತ. ಇದೆ ಅಲ್ಲವಾ ಅದೃಷ್ಟ ಹಣೆಬರಹ ಎಂದರೆ..