ಕೊರೋನಾ ಹಿನ್ನಲೆ ದೇಶದಾದ್ಯಂತವೂ ಲಾಕ್ ಡೌನ್ ಜಾರಿಯಲ್ಲಿದ್ದುಕೇವಲ ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಮಾತ್ರ ಜನ ಹೊರಹೋಗಬಹುದಾಗಿದೆ. ಆದರೆ ವ್ಯಕ್ತಿಯೊಬ್ಬ ದಿನಸಿ ವಸ್ತುಗಳನ್ನ ತರಲು ಮನೆಯಿಂದ ಹೊರಗಡೆ ಹೋದವನು ಮತ್ತೆ ಮನೆಗೆ ವಾಪಾಸ್ ಬಂದಿದ್ದು ಪತ್ನಿ ಜೊತೆಗೆ.

ಹೌದು, ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ. ಮನೆಗೆ ದಿನಸಿ ವಸ್ತುಗಳನ್ನ ತರಲು ಮನೆಯಿಂದ ಹೊರಹೋದ ೨೬ ವರ್ಷದ ಗುಡ್ಡು ಎಂಬ ವ್ಯಕ್ತಿ ಮನೆಗೆ ಪತ್ನಿಯನ್ನ ಕರೆದುಕೊಂಡು ಬಂದಿದ್ದಾನೆ. ಇನ್ನು ದಿನಸಿ ತರಲು ಹೋದ ಮಗನು ಪತ್ನಿ ಜೊತೆ ಬಂದಿದ್ದನ್ನ ನೋಡಿದ ಆತನ ತಾಯಿ, ಧಿಡೀರನೆ ಮದ್ವೆಯಾದ ಮಗನನ್ನ ನೋಡಿ ಆಘತಗೊಂಡಿದ್ದಾರೆ. ಜೊತೆಗೆ ಈ ಮದುವೆಯನ್ನ ನಾನು ಒಪ್ಪಿಕೊಳ್ಳೋದಿಲ್ಲ ಎಂದು, ಮಗ ಸೊಸೆಯನ್ನ ಮನೆಗೆ ಸೇರಿಸದೆ, ತನ್ನ ಮಗನ ಬಗ್ಗೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಆತನ ತಾಯಿ ಹೇಳುವ ಪ್ರಕಾರ, ನಾನು ನನ್ನ ಮಗನನ್ನ ಮನೆಗೆ ದಿನಸಿ ಸಾಮಾನುಗಳನ್ನ ತರಲು ಹೊರಗೆ ಕಳುಹಿಸಿದ್ದೆ, ಆದರೆ ಸ್ವಲ್ಪ ಸಮಯದ ಬಳಿಕ ಆತನ ಹೆಂಡತಿಯ ಜೊತೆಗೆ ಮನೆಗೆ ಬಂದಿದ್ದಾನೆ. ಆದರೆ ಧಿಡೀರನೆ ನಡೆದ ಈ ಮದುವೆಯನ್ನ ನಾನು ಒಪ್ಪಿಕೊಳ್ಳುವುದಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.
And here is a video of This 😂😂😂🤣🤣🤣👇👇👇 pic.twitter.com/f4rwywXlKP
— नीलेश दुबे 🙏🇮🇳 (@OnlyOneDubey) April 29, 2020
ಇನ್ನು ಗುಡ್ದು ಹೇಳುವ ಪ್ರಕಾರ ಎರಡು ತಿಂಗಳ ಹಿಂದೆಯೇ ನಮ್ಮ ಮದ್ವೆಯಾಗಿದೆ. ಇನ್ನು ಗುಡ್ದು ಮದ್ವೆಯಾಗಿದ್ದ ಸವಿತಾ ದೆಹಲಿಯ ಬಾಡಿಗೆ ಮನೆಯಲಿ ಇದ್ದಳು. ಇನ್ನು ನಾವು ಮದ್ವೆಯಾದ ಸಮಯದಲ್ಲಿ ಸರಿಯಾದ ಸಾಕ್ಷಿಗಳು ಇಲ್ಲದ ಕಾರಣ ನಮಗೆ ಮ್ಯಾರೇಜ್ ಸರ್ಟಿಫಿಕೇಟ್ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ನಾನು ಮತ್ತೆ ಹರಿದ್ವಾರಕ್ಕೆ ಹೋಗಬೇಕು ಎಂದುಕೊಂಡಿದ್ದರೂ ಲಾಕ್ ಡೌನ್ ಇದ್ದ ಕಾರಣ ಹೋಗಲು ಆಗಿರಲಿಲ್ಲ. ಈಗ ದೆಹಲಿಯಲ್ಲಿರುವ ಬಾಡಿಗೆ ಮನೆಯನ್ನು ಖಾಲಿ ಮಾಡಿ, ನನ್ನ ಪತ್ನಿಯನ್ನ ಮನೆಗೆ ಕರೆತರಲು ನಿರ್ಧಾರ ಮಾಡಿದ್ದೆ ಎಂದು ಗುಡ್ಡು ಹೇಳಿದ್ದಾರೆ.