ಸೋನುಗೌಡ ಯೋಗ್ಯತೆ ಏನೆಂದು ಗರಂ ಆದ ನೆಟ್ಟಿಗರು ಎಲ್ಲಾ ಬಿಚ್ಚಿಟ್ಟಿದ್ದಾರೆ ನೋಡಿ ಈಗ.!

Entertainment
Advertisements

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಬಿಗ್ ಬಾಸ್ ಎಲ್ಲರ ಮನೆಗೆದ್ದಿತ್ತು. ಕನ್ನಡದಲ್ಲಿ ಒಂದು ವಿಭಿನ್ನವಾದ ಶೈಲಿಯ ಬಿಗ್ ಬಾಸ್ ಮನೆಯ ಅವತಾರಣಿಕೆಯು ಹೆಚ್ಚು ಜನರಿಗೆ ರಸಮಂಜರಿ ಕಾರ್ಯಕ್ರಮದಂತೆ ಮನರಂಜನೆ ನೀಡುತ್ತಿತ್ತು ಎಂದು ಹೇಳಬಹುದು. ಸಾಕಷ್ಟು ಜನರು ಬಿಗ್ ಬಾಸ್ ಕಾರ್ಯಕ್ರಮವನ್ನ ಮುಂಚೆಯಿಂದಲೂ ಫಾಲೋ ಮಾಡುತ್ತಿದ್ದರು. ಇನ್ನೊಂದು ಕಡೆ ನಟ ಕಿಚ್ಚ ಸುದೀಪ್ ಅವರಿಗಾಗಿಯೇ ನಾವು ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುವುದು, ಅವರ ಮಾತುಗಳು ನಮ್ಮ ಜೀವನಕ್ಕೂ ಬದಲಾವಣೆ ತರುತ್ತವೆ ಎಂಬ ನಂಬಿಕೆಯಿಂದ, ಅಥವಾ ನಾವು ತಪ್ಪು ದಾರಿ ಹಿಡಿದಾಗ ಆ ಮಾತುಗಳು ನಮಗೂ ಸಹಾಯ ಮಾಡುತ್ತವೆ ಎಂಬ ಅಭಿಲಾಷೆಯಿಂದ ಕಾರ್ಯಕ್ರಮವ ನೋಡುತ್ತೇವೆ ಎಂದು ಹೇಳಿಕೊಂಡಿದ್ದರು.

ಆದರೆ ಈ ಬಾರಿ ಬಿಗ್ ಬಾಸ್ ಸ್ವಲ್ಪ ಬದಲಾವಣೆಯಾಗಿದೆ. ಬಿಗ್ಬಾಸ್ ಸೀಸನ್ ಒಂಬತ್ತು ಆರಂಭವಾಗುವ ಮುನ್ನ ಒಟಿಟಿ ಮೂಲಕ ಬಿಗ್ ಬಾಸ್ ಸೀಸನ್ ಒಂದು ಇತ್ತೀಚಿಗೆ ಪ್ರಾರಂಭ ಮಾಡಲಾಯಿತು. ಹೌದು 6 ನೇ ತಾರೀಕು ಒಟಿಟಿ ಸೀಜನ್ ಒಂದರ ಬಿಗ್ ಬಾಸ್ ಪ್ರಾರಂಭವಾಗಿದೆ. ಹಾಗೆ ಇದು ಯಾವ ಚಾನೆಲ್ನಲ್ಲಿಯೂ ಪ್ರಸಾರ ಆಗುವುದಿಲ್ಲ, ಬದಲಿಗೆ ವೂಟ್ ಅಪ್ಲಿಕೇಶನ್ ನಲ್ಲಿ 24 ಗಂಟೆ ಪ್ರಸಾರ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ಬಾರಿಯ ಬಿಗ್ ಬಾಸ್ ಆಯ್ಕೆ ಸಮಿತಿ ವಿರುದ್ಧ ಹಾಗೆ ಸೋನು ಶ್ರೀನಿವಾಸ ಗೌಡ ವಿರುದ್ದ ನೆಟ್ಟಿಗರು ಇದೀಗ ಗರಂ ಆಗಿದ್ದಾರೆ. ಕಾರ್ಯಕ್ರಮಕ್ಕೆ ಸೋನು ಗೌಡ ಅವರನ್ನು ಯಾಕೆ ಕರೆತಂದಿದ್ದೀರಿ, ಯಾವ ಯೋಗ್ಯತೆಯೂ ಇಲ್ಲದ ವ್ಯಕ್ತಿಗಳನ್ನ, ತಪ್ಪು ದಾರಿ ಹಿಡಿದು ಸಾಕಷ್ಟು ಜನರ ದಾರಿಯನ್ನು ತಪ್ಪಿಸುವ ಇಂತಹ ವ್ಯಕ್ತಿತ್ವದ ಮನುಷ್ಯರನ್ನು ಯಾಕೆ ನೀವು ಸೆಲೆಬ್ರಿಟಿ ಎಂದು ಬಿಗ್ಬಾಸ್ ಮನೆಗೆ ಕರೆ ತಂದಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Advertisements

ಸೋನು ಶ್ರೀನಿವಾಸ ಗೌಡ ಟಿಕ್ ಟಾಕ್ ಮೂಲಕ ಪರಿಚಯ ಆದವರು. ವಿದ್ಯಾಭ್ಯಾಸದಲ್ಲಿ ಡಿಪ್ಲೋಮಾ ಮಾಡಿದ್ದಾರಂತೆ. ಕನ್ನಡ ಶಾಲೆಗಳ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ್ದ ಸೋನು ಎಷ್ಟು ಟ್ರೋಲ್ ಆಗಿದ್ದರು ಎಂದು ನಿಮಗೂ ಗೊತ್ತು. ಕೆಲವೊಂದು ವಿಡಿಯೋಗಳ ಮೂಲಕ ಟ್ರೋಲ್ ಆಗಿದ್ದಾರೆ. ಮತ್ತೆ ಇವರ ಖಾಸಗಿ ವಿಡಿಯೋಗಳು ಕೂಡ ಹೊರ ಬಂದಿದ್ದು ತುಂಬಾನೇ ಕೆಟ್ಟದಾದ ರೀತಿಯಲ್ಲಿ ಜನರಿಗೆ ತೋರಿಸಿಕೊಂಡಿದ್ದಾರೆ. ಹೀಗಿರುವಾಗ ಬಿಗ್ ಬಾಸ್ ಇವರನ್ನ ಏನು ನೋಡಿ ಆಯ್ಕೆ ಮಾಡಿದ್ದು, ಬಿಗ್ ಬಾಸ್ ನಡೆಸುವ ಆಯೋಜಕರಿಗೆ ಬುದ್ಧಿ ಇಲ್ಲವ, ಸಮಾಜಕ್ಕೆ ನೀವು ಏನು ಸಂದೇಶ ಕೊಡುತ್ತಿರಿ ಎಂದು ನೆಟ್ಟಿಗರು ಹಾಗೇನೇ ಕನ್ನಡಿಗರ ಪ್ರಶ್ನೆ ಮಾಡುತ್ತಿದ್ದಾರೆ..ಈ ವಾರವೇ ಈಕೆ ಬಿಗ್ ಬಾಸ್ ಮನೆಯಿಂದ ಹೊರಬರಬೇಕು, ಇಲ್ಲವಾದಲ್ಲಿ ಈ ಬಿಗ್ ಬಾಸ್ ಕಳಚಿ ಬೀಳುವುದು ಪಕ್ಕಾ ಎಂದು ಆಕ್ರೋಶ ಗಹೊರಗಡೆ ಹಾಕಿದ್ದಾರೆ.

ಈ ರೀತಿ ಮಾಡಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುವುದಾದರೆ ಇನ್ನು ಸಾಕಷ್ಟು ಹೆಣ್ಣು ಮಕ್ಕಳು ಸೋನು ರೀತಿಯೇ ತಪ್ಪು ದಾರಿ ಹಿಡಿಯುವ ಸಾಧ್ಯತೆ ಇರುತ್ತದೆ ಎನ್ನುವ ಒಂದು ಸಣ್ಣ ಅಂಶ ನಿಮ್ಮ ತಲೆಗೆ ಬರಲಿಲ್ಲವಾ ಎಂದು ಬಿಗ್ ಬಾಸ್ ಷೋ ಆಯೋಜಕರಿಗೆ ನೆಟ್ಟಿಗರು ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ನಿಮ್ಮ ಪ್ರಕಾರ ಈ ಸೋನು ಶ್ರೀನಿವಾಸ ಗೌಡ ಬಿಗ್ಬಾಸ್ ಮನೆಗೆ ಹೋಗಿದ್ದು ಸರಿ ಇದೆಯಾ ತಪ್ಪಿದೆಯಾ ಎಂದು ತಪ್ಪದೇ ಕಾಮೆಂಟ್ ಮಾಡಿ ಹಾಗೆ ಈ ಮಾಹಿತಿಯನ್ನು ಶೇರ್ ಮಾಡಿ…