ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ಕೊಟ್ಟು ಜಗತ್ತಿಗೆ ಅಚ್ಚರಿ ಮೂಡಿಸಿದ ಮಹಾತಾಯಿ !

Kannada Mahiti

ಸ್ನೇಹಿತರೇ, ಒಬ್ಬ ತಾಯಿ ಒಮ್ಮೆ ಒಂದು ಮಗುವನ್ನ ಹೆರುವಷ್ಟರಲ್ಲಿ ಮತ್ತೊಂದು ಜನ್ಮ ಹುಟ್ಟಿಬಂದಂತೆ ಆಗುತ್ತದೆ. ಅಂತದರಲ್ಲಿ ಒಬ್ಬ ಮಹಿಳೆ ಒಂದೇ ಬಾರಿಗೆ ಬರಿಬ್ಬರಿ ಹತ್ತು ಮಕ್ಕಳಿಗೆ ಜನ್ಮ ನೀಡುತ್ತಾಳೆ ಎಂದರೆ ಆಕೆ ಮಹಾತಾಯಿಯೇ ಸರಿ. ಹೌದು, ಒಮ್ಮೆಲೇ ಹತ್ತು ಮಕ್ಕಳನ್ನ ಹೆರುವ ಮೂಲಕ ಇಡೀ ಜಗತ್ತಿಗೆ ಅಚ್ಚರಿಉಂಟು ಮಾಡುವಂತೆ ಮಾಡಿದ್ದಾಳೆ ಈ ಮಹಿಳೆ. ಇನ್ನು ಇದು ಗಿನ್ನಿಸ್ ದಾಖಲೆಗೂ ಕೂಡ ಸೇರ್ಪಡೆಯಾಗಲಿದೆ ಎಂದು ಹೇಳಲಾಗಿದೆ. ಇನ್ನು ಒಂದೇ ಬಾರಿಗೆ ಹತ್ತು ಮಕ್ಕಳನ್ನ ಹೆತ್ತ ಈ ಮಹಿಳೆಯ ಹೆಸರು ಗೋಸಿಯಾಮೆ ಸಿಥೋಲ್ ಎಂದು. ೩೭ ವರ್ಷದ ಈಕೆ ದಕ್ಷಿಣ ಆಫ್ರಿಕಾದ ಮಹಿಳೆ.

ಇನ್ನು ಒಂದೇ ಹತ್ತು ಮಕ್ಕಳ ಜನನಕ್ಕೆ ಕಾರಣರಾದ ದಂಪತಿಯ ಹೆಸರು ಗೋಸಿಯಾಮೆ ಸಿಥೋಲ್ ಮತ್ತು ಟಿಬೊಹೊ. ಇನ್ನು ಈ ದಂಪತಿಗೆ ಈಗಾಗಲೇ ಆರು ವರ್ಷದ ಅವಳಿ ಜವಳಿ ಮಕ್ಕಳಿದ್ದಾರೆ. ಇದರ ಬಳಿಕವೂ ಕೂಡ ಗೋಸಿಯಾಮೆ ಸಿಥೋಲ್ ಮತ್ತೆ ಗರ್ಭಿಣಿಯಾಗಿದ್ದು ಚೆಕಪ್ ಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಚೆಕಪ್ ಮಾಡಿದ ವೈದ್ಯರು ಗೋಸಿಯಾಮೆ ಸಿಥೋಲ್ ಹೊಟ್ಟೆಯಲ್ಲಿ ೮ ಮಕ್ಕಳಿರುವ ಬಗ್ಗೆ ಹೇಳಿದ್ದರು. ಇನ್ನು ಅಷ್ಟು ಮಕ್ಕಳನ್ನ ಒಂದೇ ಬಾರಿಗೆ ಹೇರಬೇಕಾದ ಕಾರಣ ಕಾಲುನೋವು ಸೇರಿದಂತೆ ಕೆಲವೊಂದು ಸಮಸ್ಯೆಗಳು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ ಗೋಸಿಯಾಮೆ ಸಿಥೋಲ್ ದಂಪತಿ ಹೇಳಿದ್ದಾರೆ.

ಆದರೆ ಗೋಸಿಯಾಮೆ ಸಿಥೋಲ್ ಅವರು ಗರ್ಭಿಣಿಯಾದಾಗ ವೈದ್ಯರು ೮ ಮಕ್ಕಳ ಜನ್ಮ ಆಗುವ ಬದಲು ಹತ್ತು ಮಕ್ಕಳ ಜನ್ಮ ವಾಗಿದೆಯಂತೆ. ಇನ್ನು ಇದು ಆ ದೇವರ ಕೊಡುಗೆಯಾಗಿದ್ದು ನಮ್ಮ ಸಂತೋಷಕ್ಕೆ ಕಡಿಮೆ ಇನ್ನೇನಿದೆ ಎಂದು ಆ ದಂಪತಿ ಹೇಳಿದ್ದಾರೆ. ಇನ್ನು ಇದಕ್ಕೂ ಮುಂಚೆ ೨೦೦೯ರಲ್ಲಿ ಒಮ್ಮೆಗೆ ೮ ಮಕ್ಕಳಿಗೆ ಜನ್ಮ ಕೊಟ್ಟಿದ್ದರು. ಬಳಿಕ ೩೦ ದಿನಗಳ ಹಿಂದಷ್ಟೇ ಮಾಲಿ ದೇಶದ ೨೫ವರ್ಷದ ಮಹಿಳೆಯೊಬ್ಬರು ೯ ಮಕ್ಕಳಿಗೆ ಜನ್ಮ ನೀಡಿದ್ದರು. ಇದು ಗಿನ್ನಿಸ್ ದಾಖಲೆಗೆ ಸೇರುವುದರಲ್ಲಿತ್ತು. ಈಗ ದಕ್ಷಿಣ ಆಫ್ರಿಕಾದ ಗೋಸಿಯಾಮೆ ಸಿಥೋಲ್ 10 ಮಕ್ಕಳಿಗೆ ಜನ್ಮ ನೀಡಿರುವ ಕಾರಣ ಜಗತ್ತಿನಲ್ಲಿ ಇದೆ ಮೊದಲಿನದಾಗಿದ್ದು ಗಿನ್ನಿಸ್ ದಾಖಲೆ ಸೇರಲಿದೆ ಎಂದು ಹೇಳಲಾಗಿದೆ.