ಈ ಹಳ್ಳಿಯಲ್ಲಿ ಪ್ರತಿ ಮನೆ ಮನೆಗೊಂದು ವಿಮಾನ ಇದೆ !ತರಕಾರಿ ತರೋದಕ್ಕೂ ಹಳ್ಳಿಗರು ಫ್ಲೈಟ್ ನಲ್ಲೇ ಹೋಗ್ತಾರೆ !

Kannada Mahiti
Advertisements

ಅಮೆರಿಕಾ ಅಂದ್ರೆ ವಿಶ್ವದ ದೊಡ್ಡಣ್ಣ ಅಂತಾನೇ ಕರೆಯಿಸಿಕೊಳ್ಳುತ್ತೆ. ಶ್ರೀಮಂತಿಕೆಯಲ್ಲಿ, ಮಿಲಿಟರಿ ಶಕ್ತಿಯಲ್ಲಿ, ಅಲ್ಲಿನ ಆಧುನಿಕ ಸೌಕರ್ಯಗಳ ವಿಚಾರದಲ್ಲಿ ಯಾರೂ ಕೂಡ ಅಮೆರಿಕವನ್ನು ಮೀರಿಸಲು ಸಾಧ್ಯವಿಲ್ಲ. ಅಮೆರಿಕ ವಿಶ್ವದ ನಂಬರ್ 1 ದೇಶ. ಈ ಅಮೆರಿಕದಲ್ಲಿ ಒಂದು ವಿಭಿನ್ನವಾದ ಊರಿದೆ. ಆ ಊರಿನ ವೈಶಿಷ್ಟ್ಯತೆ ,ಶ್ರೀಮಂತಿಕೆಯ ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ಹೇಳ್ತೀವಿ ನೋಡಿ. ಇಲ್ಲಿ ವಿಮಾನಗಳು ಬಂದಿಳಿಯುತ್ತಲೇ ಇರ್ತಾವೆ. ಈ ನಿಲ್ದಾಣದಿಂದ ಬೇರೆಡೆಗೆ ಹೋಗುತ್ತಲೆ ಇರ್ತಾವೆ. ಹಾಗಂತ ಇದ್ಯಾವ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಅಲ್ಲ. ಆದ್ರೆ ಇಲ್ಲಿ ವಿಮಾನಗಳ ಹಾರಾಟ ನಿತ್ಯ ನಿರಂತರ. ಅಂದ್ಹಾಗೆ, ಇದೊಂದು ದೊಡ್ಡ ಊರು. ಅಮೆರಿಕದ ಶ್ರೀಮಂತ ಊರು ಎಂದೇ ಪ್ರಸಿದ್ಧಿ ಪಡೆದ ಈ ಊರಿನಲ್ಲಿ ಪ್ರತಿಯೊಬ್ಬರು ವಿಮಾನ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಲ್ಲೊಂದು ಸಣ್ಣ ಏರ್‍ಪೋರ್ಟ್ ಕೂಡ ಇದೆ. ಸುಮಾರು ಐದು ಸಾವಿರ ಜನ ಇರುವಂತಹ ಒಂದು ಊರು ಇದು. ಆದರೆ ಇಲ್ಲಿ ಎಲ್ಲರ ಮನೆಗಳಲ್ಲೂ ವಿಮಾನಗಳಿವೆ. ಸಾಮಾನ್ಯವಾಗಿ ಭಾರತದಂತಹ ದೇಶದಲ್ಲಿ ನಮ್ಮ ಮನೆಲೊಂದು ಬೈಕ್ ಇದ್ರೆ ಸಾಕು, ಕಾರು ಇದ್ರೆ ಸಾಕು ಅಂತ ಆಲೋಚಿಸ್ತೇವೆ.

[widget id=”custom_html-4″]

Advertisements

ಜಿಲ್ಲೆಗೊಬ್ಬರು ಇಬ್ಬರು ಹೆಲಿಕಾಪ್ಟರ್‍ಗಳನ್ನೂ ಇಟ್ಟುಕೊಂಡಿರುವ ಉದಾಹರಣೆ ನಮ್ಮಲ್ಲಿವೆ. ಕೆಲವು ಉದ್ಯಮಿಗಳು, ರಾಜಕಾರಣಿಗಳು ಸ್ವಂತ ಹೆಲಿಕಾಪ್ಟರ್, ಫ್ಲೈಟ್‍ಗಳನ್ನು ಇಟ್ಟುಕೊಂಡು ಓಡಾಡ್ತಾರೆ. ಆದ್ರೆ ಅಮೆರಿಕಾದ ಈ ಊರಿನಲ್ಲಿ ಎಲ್ಲರೂ ಒಂದೊಂದು ವಿಮಾನ ಇಟ್ಟುಕೊಂಡಿದ್ದಾರೆ. ಈ ಹಳ್ಳಿಯಲ್ಲಿ ಪ್ರತಿಯೊಬ್ಬರ ಮನೆ ಮುಂದೆ ಕಾರಿನ ಬದಲು ವಿಮಾನ ನಿಲ್ಲುತ್ತದೆ ಎಂದು ಕೇಳಿದರೆ ಆಶ್ಚರ್ಯವಾದ್ರೂ ಸತ್ಯ. ಈ ಹಳ್ಳಿಯ ಜನ ತಮ್ಮ ಕೆಲಸಕ್ಕಾಗಿ ಕಾರುಗಳು ಅಥವಾ ಬೈಕುಗಳನ್ನು ಬಳಸುವುದಿಲ್ಲ, ಬದಲಿಗೆ ವಿಮಾನವನ್ನು ಬಳಸುತ್ತಾರೆ. ಅಮೆರಿಕಾದ ಶ್ರೀಮಂತ ರಾಜ್ಯ ಫ್ಲೋರಿಡಾದ ಒಂದು ಹಳ್ಳಿ ಈ ಸ್ಪ್ರೂಸ್ ಕ್ರೀಕ್. ಈ ಹಳ್ಳಿ ವಿಮಾನಗಳ ಊರು ಅಂತಾನೆ ಪ್ರಸಿದ್ಧಿ. ಇಲ್ಲಿರುವ ವಿಮಾನಗಳ ಸಂಖ್ಯೆಗೆ ತಕ್ಕಂತೆ ರನ್‍ವೇಗಳು, ಮತ್ತು ಏರ್‍ಪೋರ್ಟ್ ಕೂಡ ಇದೆ. ಇನ್ನು ಸಣ್ಣ ಸಣ್ಣ ವಿಮಾನಗಳನ್ನು ನಿಲ್ಲಿಸಲು ಮನೆಗಳಲ್ಲೇ ಚಿಕ್ಕ ಚಿಕ್ಕ ನಿಲ್ದಾಣಗಳನ್ನೂ ಮಾಡಿಕೊಂಡಿದ್ದಾರೆ ಇಲ್ಲಿನ ಜನ. ಅಲ್ಲಿ 1 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಮನೆಗಳ ಸಾಮಾನ್ಯ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ ಸುಮಾರು 700 ಮನೆಗಳಲ್ಲಿ ಕಾರ್ ಗ್ಯಾರೇಜ್‍ಗಳ ಬದಲಿಗೆ ಖಾಸಗಿ ಹ್ಯಾಂಗರ್‍ಗಳಿವೆ. ವಿಮಾನ ಮತ್ತು ಚಾಪರ್‍ಗಳನ್ನು ನಿಲ್ಲಿಸಿರುವ ಸ್ಥಳಕ್ಕೆ ಹ್ಯಾಂಗರ್ ಎಂದು ಕರೆಯಲಾಗುತ್ತೆ.

[widget id=”custom_html-4″]

ಇಲ್ಲಿ ಜನರು ಗ್ಯಾರೇಜ್‍ಗಳನ್ನು ನಿರ್ಮಿಸುವ ಬದಲು ಹ್ಯಾಂಗರ್‍ಗಳನ್ನು ನಿರ್ಮಿಸಲು ಬಯಸುತ್ತಾರೆ. ಹ್ಯಾಂಗರ್ ಗಳಿಂದ ವಿಮಾನಗಳನ್ನು ಹೊರತೆಗೆದು ಹತ್ತಿರದ ರನ್‍ವೇ ಮೂಲಕ ಅವರ ವಿಮಾನಗಳು ನೆಗೆಯುತ್ತವೆ. ಯಾಕೆ ಈ ಗ್ರಾಮದ ನಿವಾಸಿಗಳೆಲ್ಲ ವಿಮಾನ ಇಟ್ಟುಕೊಂಡಿದ್ದಾರೆ. ಇವರೆಲ್ಲ ಅಷ್ಟೊಂದು ಶ್ರೀಮಂತರಾ ಅನ್ನೋ ಪ್ರಶ್ನೆ ಕಾಡುತ್ತೆ. ಆದ್ರೆ ಇವರೇನು ಹೇಳಿಕೊಳ್ಳುವಷ್ಟು ಶ್ರೀಮಂತರಲ್ಲ. ಆದ್ರೆ ಇಲ್ಲಿನ ಹೆಚ್ಚಿನ ಜನ ಪೈಲಟ್ ವೃತ್ತಿಯಲ್ಲಿದ್ದವರು. ಹೀಗಾಗಿ ಇವರಿಗೆ ಕಾರುಗಳ ಬದಲು ಸಣ್ಣ ಸಣ್ಣ ವಿಮಾನಗಳಂದ್ರೆನೇ ಇಷ್ಟ. ವಿಮಾನ ಸಣ್ಣ ಪುಟ್ಟ ರಿಪೇರಿಗೆ ಬಂದ್ರೆ ಇವರೇ ಅದನ್ನು ಮಾಡಿಕೊಳ್ತಾರೆ. ವೀಕೆಂಡ್ ಬಂದ್ರೆ ಈ ಗ್ರಾಮದ ಜನ ಒಂದೆಡೆ ಸೇರ್ತಾರೆ. ಆಗಾಗ ತಮ್ಮ ತಮ್ಮ ಫ್ಲೈಟ್‍ಗಳಲ್ಲಿ ಪ್ರವಾಸಕ್ಕೆ ಹೋಗೋದಲ್ಲದೆ, ಸುತ್ತಮುತ್ತಲಿನ ಪರ್ವತ ಪ್ರದೇಶಗಳಲ್ಲಿ ವಿಹಾರಾರ್ಥ ಹಾರಾಟವನ್ನು ನಡೆಸುತ್ತಾರೆ. ಈ ಗ್ರಾಮದಲ್ಲಿರುವ ಕಲರ್ ಕಲರ್ ವಿಮಾನಗಳನ್ನು ನೋಡಲು ಬೇರೆ ಊರುಗಳಿಂದ ಪ್ರವಾಸಿಗರೂ ಬರ್ತಾರೆ. ಇಲ್ಲಿನ ಜನರಿಗೆ ಶ್ರೀಮಂತಿಕೆಯ ದರ್ಪವಿಲ್ಲ. ಆದರೆ ತಮ್ಮ ಗ್ರಾಮವನ್ನು ಸುಂದರವಾಗಿಟ್ಟುಕೊಳ್ಳಬೇಕೆಂಬ ಕಾಳಜಿ ಇದೆ. ಅಷ್ಟೇ ಅಲ್ಲ, ತಮಗೆ ಬೇಕಾಗಿದ್ದನ್ನು ತಾವೇ ಸ್ವಂತವಾಗಿ ನಿರ್ಮಾಣ ಮಾಡಿಕೊಳ್ಳುತ್ತಾರೆ. ಈ ಗ್ರಾಮದ ಜನರ ಉತ್ಸಾಹ ನೋಡಿ ಸರ್ಕಾರವೂ ಇವರಿಗೆ ಪ್ರೋತ್ಸಾಹದಾಯಕವಾದ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ.

[widget id=”custom_html-4″]

ಈ ಗ್ರಾಮದಲ್ಲಿ ಒಬ್ಬನನ್ನು ನೋಡಿ ಮತ್ತೊಬ್ಬ ಹೊಟ್ಟೆ ಉರಿದುಕೊಳ್ಳುವ ಸಂದರ್ಭವೇ ಇಲ್ಲ. ಅವರ ಮನೆಲಿ ಫ್ಲೈಟ್ ಇದೆ, ಅವರ ಮನೆಲಿ ಕಾರಿದೆ ಅಂತ ಹುಬ್ಬೇರಿಸುವ ಪ್ರಶ್ನೆಯೇ ಇಲ್ಲ. ಎಲ್ಲರ ಮನೆಗಳಲ್ಲೂ ವಿಮಾನ ಇರೋದ್ರಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಯಾರದ್ದೇ ಮನೆಯ ಫ್ಲೈಟ್ ಕೆಟ್ಟು ಹೋದರು ಸಹಾಯ ಹಸ್ತ ಚಾಚುತ್ತಾರೆ. ಈ ರೀತಿಯ ಸಹಬಾಳ್ವೆಯಿಂದಲೂ ಈ ಗ್ರಾಮ ಅಮೆರಿಕಾದಲ್ಲಿ ಹೆಸರು ಮಾಡಿದೆ. ಮಜಾ ಅಂದ್ರೆ ಈ ಗ್ರಾಮದವರೇ ಒಟ್ಟಾಗಿ ಸೇರಿ ಏರ್ ಶೋ ಕೂಡ ಆಯೋಜಿಸುತ್ತಾರೆ. ಎಲ್ಲರೂ ಒಂದೆಡೆ ಸೇರಿ ಕಲ್ಚರಲ್ ಪ್ರೋಗ್ರಾಂಗಳನ್ನೂ ಕೂಡ ಮಾಡ್ತಾರೆ. ಇಲ್ಲಿ ಸಾಲು ಸಾಲಾಗಿ ನಿಂತಿರುವ ಈ ಕಲರ್ ಕಲರ್ ವಿಮಾನಗಳನ್ನು ನೋಡೋದೇ ಕಣ್ಣಿಗೆ ಒಂದು ಹಬ್ಬ. ಹಾಗಂತ ಇಲ್ಲಿನ ಜನ ವಿಲಾಸಿಗಳಲ್ಲ. ಎಲ್ಲರೂ ದುಡಿಯುತ್ತಾರೆ. ಶ್ರಮವಹಿಸಿ ಕೈಗಾರಿಕೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ತಾವೇ ಒಗ್ಗಟ್ಟಾಗಿ ಮಾಡಿಕೊಳ್ತಾರೆ. ಬೇರೆಯವರ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಬೇರೆ ಊರಿಗೆ, ರಾಜ್ಯಕ್ಕೆ ಪ್ರಯಾಣ ಮಾಡುವಾಗಲೂ ಇವರಿಗೆ ಬೇರೆಯವರ ಅವಲಂಬನೆ ಇಲ್ಲ. ತಮ್ಮದೇ ಕಲರ್ ಕಲರ್ ಫ್ಲೈಟ್‍ನಲ್ಲಿ ಸಂಚಾರ ಮಾಡ್ತಾ ತಮ್ಮ ಊರಿನ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಕಾಣುವಂತೆ ಮಾಡಿದ್ದಾರೆ ಇಲ್ಲಿನ ಜನ. ಕಾರ್ ಕಾರ್ ಕಾರ್ ಎಲ್ನೋಡಿ ಕಾರ್ ಅಂತ ಹಾಡು ಕೇಳಿದ್ವಿ. ಈಗ ಫ್ಲೈಟ್ ಫ್ಲೈಟ್ ಅಂತ ಹಾಡೋ ತರ ಆಗಿದೆ ಅಮೆರಿಕಾ.