IAS ಅಧಿಕಾರಿಯಾದ ಬುಡುಕಟ್ಟು ಜನಾಂಗದ 26ವರ್ಷದ ಮೊದಲ ಮಹಿಳೆ

News

ಅತೀ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ ಎನ್ನಲಾಗುವ ಕೇಂದ್ರ ಲೋಕಸೇವಾ ಆಯೋಗದ IAS ಪರೀಕ್ಷೆ ಪಾಸ್ ಮಾಡಿ ಐಎಎಸ್ ಅಧಿಕಾರಿಯಾಗಬೇಕೆಂಬುವುದು ಅನೇಕರ ಕನಸಾಗಿರುತ್ತದೆ. ಆದರೆ ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ಅದರದ್ದೇ ಆದ ಕಠಿಣ ಪರಿಶ್ರಮ, ಗುರಿ ಇದ್ದರೆ ಮಾತ್ರ ಸಾಧ್ಯ.

ಈಗ ಸಮಾಜದಲ್ಲಿ ಹಿಂದುಳಿದಿರುವ ವರ್ಗವಾದ ಬುಡುಕಟ್ಟು ಜನಾಂಗದ ಮಹಿಳೆಯೊಬ್ಬರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, IAS ಅಧಿಕಾರಿಯಾದ ಬುಡುಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರೇ ಕೇರಳದ ಶ್ರೀಧನ್ಯ ಸುರೇಶ್ ಎಂದು. ೨೦೧೮ರಲ್ಲಿ ನಡೆದಿದ್ದ ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಉತ್ತರ ಖಂಡದ ಮಸ್ಸೂರಿಯಲ್ಲಿರುವ ಐಎಎಸ್ ಅಧಿಕಾರಿಗಳ ತರಭೇತಿ ಕೇಂದ್ರದಲ್ಲಿ ತರಭೇತಿ ಪಡೆದುಕೊಂಡಿದ್ದು, ಈಗ ತರಭೇತಿ ಪೂರ್ತಿಗೊಂಡಿದ್ದು, ಕೇರಳದ ಕಲ್ಲಿಕೋಟೆ ಜಿಲ್ಲೆಗೆ ಉಪ ಜಿಲ್ಲಾಧಿಕಾರಿಯಾಗಿ 26 ವರ್ಷ ವಯಸ್ಸಿನ ಶ್ರೀಧನ್ಯ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ನು ಬುಡುಕಟ್ಟು ಜನಾಂಗದ ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದ ಶ್ರೀಧನ್ಯವರ ಜನ್ಮಸ್ಥಳ ವಯನಾಡ್‌ನಲ್ಲಿರುವ ಪೊಳುಥನಾ ಎಂಬ ಪಂಚಾಯತ್ ನ ಕುರಿಚಿಯಾ ಎಂಬ ಸಮುದಾಯಕ್ಕೆ ಸೇರಿದವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಶ್ರೀ ಧನ್ಯ, ಮಲಯಾಳಂ ಭಾಷೆಯಲ್ಲೇ ತಮ್ಮ ಪ್ರೌಢ ಶಿಕ್ಷಣವನ್ನ ಮಾಡಿದ್ದಾರೆ.

ಇನ್ನು ಐಎಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಲೇಬೇಕು ಎಂಬ ಗುರಿಯನ್ನು ಹೊಂದಿದ್ದ ಶ್ರೀಧನ್ಯ IAS ಪರೀಕ್ಷೆಯನ್ನ ಮಲಯಾಳಂ ಭಾಷೆಯಲ್ಲೇ ಬರೆದು, ತಮ್ಮ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದು 410ನೇ ರಾಂಕ್ ಗಳಿಸಿದ್ದು, ಇವರ ಸಾಧನೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.

ಇನ್ನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದರೂ,ಕಡುಬಡತನದಲ್ಲೇ ಹುಟ್ಟಿ ಬೆಳೆದ ಶ್ರೀಧನ್ಯರವರಿಗೆ ಸಂದರ್ಶನಕ್ಕಾಗಿ ದೆಹಲಿಗೆ ಹೋಗಲು ಅವರ ಬಳಿ ಹಣ ಕೂಡ ಇರಲಿಲ್ಲ. ಅಂತಹ ಸಮಯದಲ್ಲಿ ತಮ್ಮ ಹತ್ತಿರದವರಿಂದ 40ಸಾವಿರ ಹಣ ಸಾಲವಾಗಿ ಪಡೆದು IAS ಸಂದರ್ಶನಕ್ಕಾಗಿ ದೆಹಲಿಗೆ ಹೋಗಿದ್ದರು.ಹಣವಿಲ್ಲದಿದ್ದರೂ ಪರಿಶ್ರಮ, ಗುರಿ ಹೊಂದಿದ್ದರೆ ಯಾರೂ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ, ಈಗ ಬುಡಕಟ್ಟು ಜನಾಂಗದ ಮೊದಲ ಮಹಿಳಾ ಐಎಎಸ್ ಅಧಿಕಾರಿಯಾಗಿರುವ ಶ್ರೀ ಧನ್ಯರವರೆ ಸಾಕ್ಷಿ.