1ತಿಂಗಳ ಮಗುವನ್ನ ಕೈನಲ್ಲಿ ಹಿಡಿದುಕೊಂಡು ಈ ಮಹಿಳೆ ಮಾಡುತ್ತಿರುವುದೇನು ಗೊತ್ತಾ.?ಅಸಲಿಗೆ ಈ ಮಹಿಳೆ ಯಾರು ಗೊತ್ತಾ.?

News
Advertisements

ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ವೈದ್ಯರು, ನರ್ಸ್ ಗಳು, ಪೊಲೀಸರು, ಪೌರ ಕಾರ್ಮಿಕರು ಹೀಗೆ ಹಲವು ಇಲಾಖೆಯ ಅಧಿಕಾರಿಗಳು ನಮ್ಮ ಜೀವನವನ್ನ ಕಾಪಾಡುವ ಸಲುವಾಗಿ ಅವರ ಕುಟುಂಬದಿಂದ ದೂರವಿದ್ದು ಹಗಲು ರಾತ್ರಿ ನಮಗೋಸ್ಕರ ದುಡಿಯುತ್ತಿದ್ದಾರೆ.

Advertisements

ಈಗ IAS ಮಹಿಳಾ ಅಧಿಕಾರಿಯೊಬ್ಬರು ಕೇವಲ ಒಂದು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಮಾತೃತ್ವ ರಜೆ ತೆಗೆದುಕೊಳ್ಳುವ ಅವಕಾಶವಿತ್ತು. ಆದರೆ ಕೊರೋನಾ ವಿರುದ್ಧ ಹೋರಾಡಲು ತಮ್ಮ ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಸೃಜನರವರೇ ಈ IAS ಅಧಿಕಾರಿ.

ಇನ್ನು ಈ ಮಹಿಳಾ ಅಧಿಕಾರಿಗೆ ಕೇವಲ ೨೨ ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ನು ಅವರಿಗೆ ಮಾತೃತ್ವ ರಜೆಯಾಗಿ ಆರು ತಿಂಗಳು ರಜೆ ತೆಗೆದುಕೊಳ್ಳುವ ಅವಕಾಶವಿದೆ. ಆದರೆ ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ವಿಧಿಸಿರುವ ಕಾರಣ ಉಂಟಾಗಿರುವ ಪರಿಸ್ಥಿತಿಯನ್ನ ನಿಭಾಯಿಸುವ ಸಲುವಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಒಂದು ತಿಂಗಳ ಮಗುವನ್ನ ಕೈನಲ್ಲೇ ಹಿಡಿದುಕೊಂಡು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ.

ಇನ್ನು ಇದರ ಬಗ್ಗೆ ಮಾತನಾಡಿದ ಅಧಿಕಾರಿ ಸೃಜನರವರು ನಾನು ಜವಾಬ್ದಾರಿಯುತ ಅಧಿಕಾರಿ ಸ್ಥಾನದಲ್ಲಿರುವ ಕಾರಣ ಇಂತಹ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ. ಇನ್ನು ನನ್ನ ತಾಯಿ ಮತ್ತು ಪತಿ ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ. ನಾಲ್ಕು ಗಂಟೆಗೊಮ್ಮೆ ಮನೆಗೆ ಹೋಗಿ ನನ್ನ ಮಗುವಿಗೆ ಹಾಲುಣಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇನೆ. ಬಳಿಕ ನನ್ನ ತಾಯಿ ಪತಿ ಮಗುವನ್ನ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಇನ್ನು ಆರು ತಿಂಗಳು ಮಾತೃತ್ವ ರಜೆಯನ್ನ ತೆಗೆದುಕೊಳ್ಳುವ ಅವಕಾಶ ಇದ್ದರೂ, ಒಂದು ತಿಂಗಳ ಮಗುವಿನ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಸೃಜನಾರವರ ಕರ್ತವ್ಯ ನಿಷ್ಠೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಒಟ್ಟಿನಲ್ಲಿ ನಿಜಕ್ಕೂ ನೀವು ತುಂಬಾ ಗ್ರೇಟ್ ಮೇಡಂ.