ಶ್ರೀರಾಮುಲು ಪುತ್ರಿಯ ಅದ್ದೂರಿ ವಿವಾಹ..9ದಿನದ ಬಟ್ಟೆಗೆ ಖರ್ಚಾಗಿದ್ದೆಷ್ಟು ಗೊತ್ತಾ?ಯಾರೆಲ್ಲಾ ಬಂದಿದ್ರು.?

News

ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾಗಿರುವ ಶ್ರೀರಾಮುಲು ಅವರ ಹಿರಿಯ ಪುತ್ರಿಯಾಗಿರುವ ರಕ್ಷಿತಾ ಅವರ ಮದುವೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮಾಡಲಾಗುತ್ತಿದೆ. ಇನ್ನು ೯ ದಿನಗಳಿಂದ ಮಗಳ ಮದುವೆಯನ್ನ ಸಂಪ್ರದಾಯ ಬದ್ದ ಮತ್ತು ಶಾಸ್ತ್ರೋಕ್ತವಾಗಿ ಮಾಡಲಾಗುತ್ತಿದ್ದು ಕೋಟಿಗಳಲ್ಲಿ ಹಣವನ್ನ ಖರ್ಚು ಮಾಡಲಾಗುತ್ತಿದೆ.

ಇನ್ನು ಸಚಿವ ಶ್ರೀರಾಮುಲು ಅವರ ಸ್ನೇಹಿತರೂ ಆಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ಮದುವೆಗೆ ಬಂದು ನವ ವಧು ವರರಿಗೆ ಶುಭ ಕೋರಿದ್ದಾರೆ. ಇನ್ನು ಶ್ರೀಮಂತರು ಮಾಡುವ ವೈಭವೋಪೇತ ಮದುವೆಗಳನ್ನ ನೋಡಲು ಈ ಎರಡು ಕಣ್ಣುಗಳು ಸಾಲುವುದಿಲ್ಲ. ಇವರ ಆಡಂಬರದ ಮದುವೆಯನ್ನ ಕಂಡು ಸ್ವರ್ಗವೇ ನಾಚುತ್ತೇನೋ ಅನ್ನುವಷ್ಟರ ಮಟ್ಟಿಗೆ ಅದ್ದೂರಿಯಾಗಿರುತ್ತದೆ.

ಹೌದು, ಶ್ರೀರಾಮುಲು ಪುತ್ರಿ ರಕ್ಷಿತಾ ಹೈದರಬಾದ್ ಮೂಲದ ಉದ್ಯಮಿಯೊಬ್ಬರ ಪುತ್ರನಾಗಿರುವ ಸಂಜೀವ್ ರೆಡ್ಡಿಯನ್ನ ಪ್ರೀತಿಸಿ ಮದುವೆಯಾಗುತ್ತಿದ್ದು, ವಿವಾಹದ ಆಮಂತ್ರಣ ಪತ್ರಿಕೆಯಿಂದ ಹಿಡಿದು ಧರಿಸುವ ಬಟ್ಟೆಗಳವರೆಗೂ ಪ್ರತಿಯೊಂದರಲ್ಲೂ ವಿಶೇಷದ ಜೊತೆಗೆ ಆಡಂಬರವೂ ಅಡಗಿದೆ.

ಇನ್ನು ಸಚಿವರ ಮಗಳ ಮದುವೆಯೆಂದರೆ ಕೇಳಬೇಕೆ..ಮದುವೆಯ ಲಗ್ನಪತ್ರಿಕೆಗಳನ್ನ ಕರ್ನಾಟಕದಲ್ಲಿ ಖ್ಯಾತರಾಗಿರುವ ವೆಡ್ಡಿಂಗ್ ಮ್ಯಾನ್ಷನ್ ಧ್ರುವ ಅವರ ಸಾರಥ್ಯದಲ್ಲಿ ಡಿಸೈನ್ ಮಾಡಲಾಗಿದೆ.ಜೊತೆಗೆ ಶ್ರೀರಾಮುಲು ಆರೋಗ್ಯ ಸಚಿವರಾಗಿರುವ ಕಾರಣ ಆಮಂತ್ರಣ ಪತ್ರಿಕೆಯಲ್ಲಿ ಏಲಕ್ಕಿ ಕೇಸರಿ ಜೊತೆಗೆ ಅರಿಶಿನ ಕುಂಕುಮ ಇಟ್ಟು ಹಂಚಲಾಗಿದೆ.

ಇನ್ನು ಮದುವೆಯ ಶಾಸ್ತ್ರಗಳು ೯ ದಿನಗಳಿದ್ದು, ಫೆಬ್ರುವರಿ ೨೭ರಿಂದಲೇ ಶಾಸ್ತ್ರಗಳನ್ನ ಅದ್ದೂರಿಯಾಗಿ ಮಾಡಲಿಗಿದೆ. ಇನ್ನು ಬಳೆ ಶಸ್ತ್ರ ಮೆಂದಿ ಶಾಸ್ತ್ರವನ್ನ ನಡೆಸಲಾಗಿದೆ. ಹಾಗೆಯೆ ರಕ್ಷಿತಾ ಅವರ ಸ್ನೇಹಿತರಿಗಾಗಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಮೇಹಂದಿ ಶಾಸ್ತ್ರದ ಕಾರ್ಯಕ್ರಮ ಮಾಡಲಾಗಿತ್ತು. ಇನ್ನು ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರಿಗೆ ಅವರ ಮದುವೆಯಲ್ಲಿ ಮೇಕಪ್ ಮಾಡಿದ ಸಂಧ್ಯಾ ಶೇಖರ್ ಅವರೇ ರಕ್ಷಿತಾ ಅವರಿಗೂ ಮೇಕಪ್ ಮಾಡಿದ್ದಾರೆ.

ಇನ್ನು ಹೆಣ್ಣಿನ ಬಟ್ಟೆಗಳ ವಿಚಾರಕ್ಕೆ ಬಂದರೆ ನವ ವಧುವಿನ ಬಟ್ಟೆಗಳ ಡಿಸೈನ್ ಮಾಡಿದ್ದು ಬಾಲಿವುಡ್ ನ ಖ್ಯಾತ ಡಿಸೈನರ್ ಸಾನಿಯಾ ಸರ್ದಾರಿಯಾ.ಇನ್ನು ಕೇವಲ ಮದುವೆ ಹೆಣ್ಣಿನ ಬಟ್ಟೆಗಳಿಗಾಗಿ ಖರ್ಚು ಮಾಡಿದ ಹಣದ ಬಗ್ಗೆ ನೀವು ಕೇಳಿದ್ರೆ ಶಾಕ್ ಆಗೋದು ಖಂಡಿತಾ. ಹೌದು, ಬರೋಬ್ಬರಿ ೯ದಿವಸಗಳ ಕಾಲ ನಡೆದ ಶಾಸ್ತ್ರಗಳು ನಡೆದಿದ್ದು ಮದುವೆ ಹೆಣ್ಣು 9 ದಿವಸ ಧರಿಸಿದ ಬಟ್ಟೆಗಳಿಗೆ ಬರೋಬ್ಬರಿ 1 ಕೋಟಿ 50 ಲಕ್ಷ ರುಗಳನ್ನ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.