ಇವರಿಗೆ ಸಿಗೋದು ನಮಗೇಕೆ ಸಿಗುತ್ತಿಲ್ಲ ! ನಮ್ಮ ಜೀವಕ್ಕೆ ಬೆಲೆಯಿಲ್ಲವೇ ಎಂದು ನೆಟ್ಟಿಗರು ಆಕ್ರೋಶ..

Kannada News
Advertisements

ಸ್ನೇಹಿತರೇ, ಶುರುವಿನಲ್ಲಿ ಕೊ’ರೋನಾ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಅಸಡ್ಡೆ ತೋರಿದ್ದ ಜನರು, ಈಗ ಸೋಂಕು ಹೆಚ್ಚಾದ ಕಾರಣ ಈಗ ಜನರು ಬೆಳ್ಳಿಗ್ಗೆಯಿಂದ ಸಂಜೆಯವರೆಗೂ ಆಸ್ಪತ್ರೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಆದರೆ ಈಗ ಲಸಿಕೆ ಅಭಾವ ಹೆಚ್ಚಾದ ಕಾರಣ ಸರ್ಕಾರ ೧೮ ರಿಂದ ೪೪ ವರ್ಷದವರೆಗೆ ನೀಡುತ್ತಿದ್ದ ಲಸಿಕೆಗೆ ತಾತ್ಕಾಲಿಕವಾಗಿ ತಡೆ ನೀಡಿದೆ. ಆದರೂ ಕೂಡ ಕೆಲ ಸೆಲೆಬ್ರೆಟಿಗಳು ಲಸಿಕೆ ಪಡೆಯುತ್ತಿರುವುದನ್ನ ಕಂಡು ನೆಟ್ಟಿಗರು ಆ’ಕ್ರೋಶಗೊಂಡಿದ್ದಾರೆ. ನಿಮಗೆ ಸಿಗೋ ಲಸಿಕೆ ನಮಗೇಕೆ ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

[widget id=”custom_html-4″]

Advertisements

ಹೌದು, ಮೊನ್ನೆ ಬುಧವಾರದಂದು ಕನ್ನಡ ಚಿತ್ರರಂಗದ ಹಿರಿಯ ನಟ ಲೋಕೇಶ್ ಅವರ ಹುಟ್ಟು ಹಬ್ಬವಿದ್ದು, ಪುತ್ರ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಅವರು ತಮ್ಮ ತಂದೆಯ ಹುಟ್ಟುಹಬ್ಬದಂದು ನೆನಪಿರಲಿ ಎಂದು ಲಸಿಕೆ ಪಡೆದಿದ್ದು, ತಾವು ಕೊ’ರೋನಾ ಲಸಿಕೆ ಪಡೆಯುತ್ತಿರುವ ಫೋಟೋವೊಂದನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಈ ಪೋಸ್ಟ್ ನೋಡುತ್ತಿದ್ದಂತೆ ನೆಟ್ಟಿಗರು, ನಮಗೆ ಸಿಗದೇ ಇರೋ ಲಸಿಕೆ, ನಿಮಗೆ ಮಾತ್ರ ಹೇಗೆ ಸಿಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ನೆಟ್ಟಿಗರ ಪ್ರಶ್ನೆಗಳಿಗೆ ಸೃಜನ್ ಲೋಕೇಶ್ ಉತ್ತರ ಬಂದಿಲ್ಲ.

[widget id=”custom_html-4″]

ಇನ್ನು ಸೃಜನ್ ಅವರಿಗೂ ಮುಂಚೆ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳಾದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ಅವರೂ ಕೂಡ ಲಸಿಕೆ ಪಡೆದಿದ್ದು, ನೆಟ್ಟಿಗರು ಕೇಳಿದ ಪ್ರಶ್ನೆಗೆ, ನಾವು ಲಸಿಕೆ ಪಡೆದ ನಮ್ಮ ಊರಿನಲ್ಲಿ ಹೆಚ್ಚು ಜನರಿಲ್ಲದ ಕಾರಣ ನಮಗೆ ಕೊ’ರೋನಾ ಲಸಿಕೆ ದೊರೆತಿದೆ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದರು. ಇನ್ನು ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಕೂಡ ಲಸಿಕೆ ಪಡೆದಿದ್ದು, ಜಾಲತಾಣಗಳಲ್ಲಿ ಕೇಳಿದ ಪ್ರಶ್ನೆಗೆ ನಾವು ಮೀಡಿಯಾ ಫ್ರೆಂಟ್ ಲೈನರ್ ಆದ ಕಾರಣ ನಮಗೆ ಲಸಿಕೆ ಸಿಕ್ಕಿದೆ ಎಂದು ಉತ್ತರ ನೀಡಿದ್ದರು. ಆದರೆ ಸೃಜನ್ ಲೋಕೇಶ್ ಅವರೂ ಮಾತ್ರ ನೆಟ್ಟಿಗರ ಪ್ರಶ್ನೆಗೆ ಉತ್ತರ ಕೊಡದೆ ವಿವಾದಕ್ಕೆ ಸಿಲುಕಿದ್ದಾರೆ. ಇನ್ನು ಜನ ಕೇವಲ ಸೆಲೆಬ್ರೆಟಿಗಳು ಎನಿಸಿಕೊಂಡವರ ಜೀವ ಮಾತ್ರ ಮುಖ್ಯವೇ..ಸಾಮಾನ್ಯ ಜನರ ಪ್ರಾಣ ಲೆಕ್ಕಕ್ಕಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಕಾರಿದ್ದಾರೆ. ಸ್ನೇಹಿತರೇ, ಇದರಲ್ಲಿ ಯಾರದ್ದು ತಪ್ಪು ನೀವೇ ಹೇಳಿ..