ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಸೃಜನ್ ಲೋಕೇಶ್..ಯಾವ ಶೋ ಗೊತ್ತಾ.?

Entertainment
Advertisements

ಕನ್ನಡ ಚಿತ್ರರಂಗದ ಹಿರಿಯ ನಟ ಲೋಕೇಶ್ ರವರ ಮಗನಾಗಿರುವ ನಟ, ನಿರೂಪಕ ಸೃಜನ್ ಲೋಕೇಶ್ ‘ಮಜಾ ಟಾಕೀಸ್’ ಕಾಮಿಡಿ ಶೋ ಮೂಲಕ ಇಡೀ ಕರ್ನಾಟಕದ ಜನರಿಗೆ ನಗೆಯ ರಸದೌತಣವನ್ನ ನೀಡಿದವರು. ಇನ್ನು ಟಾಕಿಂಗ್ ಸ್ಟಾರ್ ಎಂಬ ಹೆಸರು ಕೂಡ ಬಂದಿದ್ದು ಈ ಶೋ ಮೂಲಕವೇ.

Advertisements

ಇನ್ನು ಈಗಾಗಲೇ ಕನ್ನಡದ ಕಲರ್ಸ್ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಆದರೆ ಸೃಜನ್ ಲೋಕೇಶ್ ಮತ್ತೆ ಯಾವುದಾದರೂ ಶೋ ಮೂಲಕ ಕರುನಾಡ ಜನರನ್ನ ಮನರಂಜಿಸಲು ಕಿರುತೆರೆಗೆ ಹಿಂದಿರುಗುತ್ತಾರಾ ಎಂದು ವೀಕ್ಷಕರು ಕಾಯುತ್ತಿದ್ದರು.

ಈಗ ಮತ್ತೊಂದು ಹೊಸ ಶೋವೊಂದರ ಮೂಲಕ ಸೃಜನ್ ಲೋಕೇಶ್ ಕಿರುತೆರೆಗೆ ಹಿಂದಿರುಗುತ್ತಿದ್ದಾರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹೊಸ ಶೋವೊಂದನ್ನ ನಡೆಸಿಕೊಡಲು ಸೃಜನ್ ಲೋಕೇಶ್ ಮತ್ತೆ ಬರುತ್ತಿದ್ದಾರೆ. ಇದನ್ನ ಸ್ವತಃ ಜೀ ವಾಹಿನಿಯ ಬಿಜಿನೆಸ್ ಹೆಡ್ ಆಗಿರುವ ರಾಘವೇದ್ರ ಹುಣಸೂರ್ ಅವರೇ ವೇದಿಕೆಯಲ್ಲಿ ಹೇಳಿದ್ದಾರೆ.

ಇನ್ನು ಇದೇ ಜೀ ವಾಹಿನಿಯಲ್ಲಿ ಚೋಟಾ ಚಾಂಪಿಯನ್ ಕಾರ್ಯಕ್ರಮವನ್ನ ಸೃಜನ್ ನಡೆಸಿಕೊಡುತ್ತಿದ್ದರು. ಇನ್ನು ಈಗ ಜೀ ವಾಹಿನಿಯಲ್ಲಿ ಚೋಟಾ ಚಾಂಪಿಯನ್ ಕಾರ್ಯಕ್ರಮಕ್ಕೆ ಆಡಿಷನ್ ಕೂಡ ನಡೆಯಲಿದೆ. ಆದರೆ ಇದರ ಜೊತೆಗೆ ಮತ್ತೊಂದು ಹೊಸದಾದ ರಿಯಾಲಿಟಿ ಷೋ ಜೀ ಕನ್ನಡದಲ್ಲಿ ಬರಲಿದೆ. ಆದರೆ ಯಾವ ಕಾರ್ಯಕ್ರಮವನ್ನ ಸೃಜನ್ ನಡೆಸಿಕೊಡುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ.