10ನೇ ತರಗತಿ ಪರೀಕ್ಷೆ ನಡೆಯೋದು ಯಾವಾಗ.?ಸ್ಪಷ್ಟನೆ ಕೊಟ್ಟ ಸುರೇಶ್ ಕುಮಾರ್

News

ಕೊರೋನಾ ಹಿನ್ನಲೆಯಲ್ಲಿ ಮೇ 3ರ ತನಕ ಲಾಕ್ ಡೌನ್ ನ್ನ ಮುಂದುವರಿಸಲಾಗಿದೆ. ಆದರೆ ಹತ್ತನೇ ತರಗತಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲದ ಪರಿಸ್ಥಿತಿ ಇದೆ. ಈಗ ಇದಕ್ಕೆಲ್ಲಾ ತೆರೆ ಎಳೆದಿರುವ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಲಾಕ್ ಡೌನ್ ಮುಗಿದ ತಕ್ಷಣ SSLC ಪರೀಕ್ಷೆ ಮಾಡಲಾಗುತ್ತೆ, ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಹತ್ತನೇ ತರಗತಿ ಪರೀಕ್ಷೆಗಿಂತ ಕೊರೋನಾ ಸೋಂಕಿನ ವಿರುದ್ಧ ಹೊರಡುವ ಪರೀಕ್ಷೆ ದೊಡ್ಡದು. ಲಾಕ್ ಡೌನ್ ಮುಗಿದ ಬಳಿಕ ಅಂದರೆ ಮೇ ೩ರ ನಂತರ 10ನೇ ತರಗತಿ ಪರೀಕ್ಷೆ ಬಗ್ಗೆ ಯೋಚನೆ ಮಾಡಲಿದ್ದು, ಪರೀಕ್ಷೆ ಯಾವ ಸಮಯದಲ್ಲಿ ಮಾಡಬೇಕು, ವಿದ್ಯಾರ್ಥಿಗಳಿಗೆ ಎಷ್ಟು ಸಮಯ ಕೊಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಕೆಲವರು SSLC ಪರೀಕ್ಷೆ ಕುರಿತು ಗೊಂದಲದ ವಾತಾವರಣ ಹುಟ್ಟುಹಾಕುತ್ತಿದ್ದಾರೆ. ಆದರೆ ಹತ್ತನೇ ತರಗತಿ ಪರೀಕ್ಷೆ ನಡೆಯುತ್ತದೆ ಇದರಲ್ಲಿ ಯಾವುದೇ ಗೊಂದಲ ಬೇಡ. ಪರೀಕ್ಷೆ ಕುರಿತು ಪೋಷಕರಲ್ಲಿ ಆತಂಕ ಇದೆ. ಆದರೆ ವಿದ್ಯಾರ್ಥಿಗಳಲ್ಲಿ ಇಲ್ಲ. ಮೇ ೩ರ ಬಳಿಕ ಪರೀಕ್ಷೆ ಕುರಿತಂತೆ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿರುವ ಶಿಕ್ಷಣ ಸಚಿವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.