ದ್ವಾರಕಾ ರಹಸ್ಯ.ಸಮುದ್ರದಾಳದಲ್ಲಿ ಸಿಕ್ಕಿದೆ ಶ್ರೀ ಕೃಷ್ಣನ ಸಾಕ್ಷ್ಯ..

Kannada News

ಮಹಾಭಾರತದ ಸೂತ್ರಧಾರಿ ಶ್ರೀಕೃಷ್ಣ ವಾಸ ಮಾಡುತ್ತಿದ್ದದ್ದು ದ್ವಾರಕಾ ನಗರದಲ್ಲಿ. ಮಹಾಭಾರತ ಯುದ್ದ ಮುಗಿದು ಪಾಂಡವರಿಗೆ ಅಧಿಕಾರ ಸಿಕ್ಕ ಬಳಿಕ ವಿಷ್ಣು ಅವತಾರಿಯಾದ ಶ್ರೀಕೃಷ್ಣನ ಅವತಾರ ಸಮಾಪ್ತಿಯಾಗುತ್ತದೆ. ಬಳಿಕ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಆದರೆ ಮಹಾಭಾರತ ಅನ್ನೋದು ಒಂದು ಕಟ್ಟುಕತೆ ಅಂತ ವಾದ ಮಾಡೋರು ನಮ್ಮಲ್ಲಿ ಅನೇಕರಿದ್ದಾರೆ. ಇನ್ನು ಭಾರತದ ಭವ್ಯ ಪರಂಪರೆಯನ್ನ ಎತ್ತಿ ಇಡಿಯುವಂತಹ, ಮುತ್ತು ರತ್ನಗಳಿದ್ದ, ಭವ್ಯ ಅರಮನೆಗಳಿದ್ದ ದ್ವಾರಕಾ ನಗರ ಶ್ರೀಕೃಷ್ಣ ಇದ್ದ ಅಂತ ಹೇಳೋದಕ್ಕೆ ಒಂದು ದೊಡ್ಡ ಸಾಕ್ಷಿ.

ಇನ್ನು ಭಾರತದ ವಿಜ್ಞಾನಿಗಳ ಜೊತೆಗೆ ಅಂತರಾಷ್ತ್ರೀಯ ಭೂಗರ್ಭ ಶಾಸ್ತ್ರಜ್ಞರು ಈ ಸ್ಥಳದಲ್ಲಿ ಸಂಶೋಧನೆ ಮಾಡಿದ್ದು ಸಾವಿರಾರು ವರ್ಷಗಳ ಹಿಂದೆ ಮಾನವ ನಿರ್ಮಿತವಾದ ನಗರವೊಂದು ಇಲ್ಲಿತ್ತು ಎಂದು ಹೇಳಿದ್ದಾರೆ. ಇನ್ನು ಬರೋಬ್ಬರಿ 5ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ನಗರದಲ್ಲಿ ಆಧುನಿಕ ನಗರಕ್ಕೆ ಇರಬೇಕಾಗಿದ್ದ ಎಲ್ಲಾ ವ್ಯವಸ್ಥೆಗಳು ಅಚ್ಚುಕಟ್ಟಾಗಿದ್ದವು ಎಂದು ಹೇಳಿದ್ದಾರೆ. ಆದರೆ ಆ ಅದ್ಭುತವಾದ ಇಡೀ ನಗರ ಸಮುದಾರದಲ್ಲಿ ಮುಳುಗಿಹೋಗಿರುವುದರಿಂದ ಇಂದು ನಾವು ಆ ಅದ್ಭುತ ನಗರವನ್ನ ಕಣ್ತುಂಬಿಕೊಳ್ಲಲು ಸಾಧ್ಯವಿಲ್ಲ. ಇನ್ನು ಶ್ರೀಕೃಷ್ಣನ ವಾಸಸ್ಥಳವಾಗಿದ್ದ ದ್ವಾರಕಾ ನಗರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿತಿಳಿಯಲು ಈ ವಿಡಿಯೋ ನೋಡಿ..