ವೋಟಿಗಾಗಿ ಯುವತಿಯರ ಕಾಲಿಗೆ ಬಿದ್ದ ಯುವಕ.!ವಿಡಿಯೋ ಸಖತ್ ವೈರಲ್..

Entertainment
Advertisements

ನಮಸ್ತೇ ಸ್ನೇಹಿತರೇ, ಚುನಾವಣೆಗಳು ಹತ್ತಿರ ಬಂದಾಗ ರಾಜಕಿಯ ವ್ಯಕ್ತಿಗಳು ತಮ್ಮನ್ನ ಬೆಂಬಲಿಸಿ ಮತ ನೀಡುವಂತೆ ಹೇಗೆಲ್ಲಾ ಸಾಮಾನ್ಯ ಜನರ ಬಳಿ ಬಂದು ಬೇಡಿಕೊಳ್ಳುತ್ತಾರೆ, ಇಲ್ಲ ಸಲ್ಲದ ಆಶ್ವಾಸನೆಗಳನ್ನ ನೀಡುತ್ತಾರೆ, ಕಾಲಿಗೂ ಕೂಡ ಬೀಳಲು ಹಿಂದೆ ಮುಂದೆ ನೋಡುವುದಿಲ್ಲ ಎಂಬುದನ್ನ ನಾವೆಲ್ಲಾ ನೋಡಿದ್ದೇವೆ. ಇನ್ನು ಕಾಲೇಜುಗಳಲ್ಲೂ ಕೂಡ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುವುದನ್ನ ನಾವು ನೋಡಿದ್ದೇವೆ. ನೀವೇನಾದರೂ ಕಾಲೇಜಿಗೂ ಹೋಗುವ ವಿದ್ಯಾರ್ಥಿಗಳು ಆಗಿದ್ದಲ್ಲಿ ಕಾಲೇಜಿನಲ್ಲಿ ನಡೆಯುವ ಚುನಾವಣೆ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಈಗ ಅದೇ ರೀತಿ ಜೈಪುರದ ಕಾಲೇಜೊಂದರಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದ್ದು, ಮತ ಕೇಳುವ ಸಲುವಾಗಿ ಈ ವಿದ್ಯಾರ್ಥಿ ಮಾಡಿದ್ದೇನು ಎಂಬುದನ್ನ ನೋಡಿದ್ರೆ ಅಚ್ಚರಿಯಾಗುತ್ತೆ..

ಹೌದು, ನನಗೆ ಮತ ನೀಡಿ ಎಂದು ವಿದ್ಯಾರ್ಥಿ ಸಂಘದ ಚುನಾವಣೆ ಅಂಡೆಯುವ ಮುನ್ನ ರಸ್ತೆಯಲ್ಲೇ ವಿದ್ಯಾರ್ಥಿನಿ ಯುವತಿಯರನ್ನ ನಿಲ್ಲಿಸಿ ಹಿಂದೂ ಮುಂದೆ ನೋಡದೆ, ಅವರ ಕಾಲಿಗೆ ಬೀಳುತ್ತಾ ನನಗೆ ಮತ ನೀಡಿ ಎಂದು ಬೇಡಿಕೊಳ್ಳುತ್ತಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಆ ವಿದ್ಯಾರ್ಥಿ ಯುವಕ ವಿದ್ಯಾರ್ಥಿನಿಯರ ಕಾಲಿಗೆ ಬೀಳುತ್ತಿದ್ದಂತೆ, ಹೀಗೆಲ್ಲಾ ಮಾಡಬೇಡಿ ಎನ್ನುತ್ತಾ ಯುವತಿಯರು ನಾಚಿನೀರಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇನ್ನು ಈ ಅಪರೂಪದ ಘಟನೆ ನಡೆದಿರುವುದು ರಾಜಸ್ಥಾನಕ್ಕೆ ಸೇರಿದ ಬರಾನ್ ಎಂಬ ಕಾಲೇಜಿನಲ್ಲಿ. ಇನ್ನು ಇದೆ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಅಭ್ಯಾರ್ಥಿಯಾಗಿ ಸ್ಪರ್ಧಿಸಿದ್ದ ಯುವಕ ವಿದ್ಯಾರ್ಥಿ ಮತ ಕೇಳುವ ಸಲುವಾಗಿ ಈ ರೀತಿ ಪ್ರತಿಯೊಬ್ಬ ಯುವತಿಯರ ಕಾಲಿಗೆ ಬಿದ್ದು ಮತ ನೀಡುವಂತೆ ಅಂಗಲಾಚಿ ಬೇಡಿಕೊಂಡಿದ್ದಾನೆ. ಇನ್ನು ಯುವಕ ಮತಕ್ಕಾಗಿ ಹುಡುಗಿಯರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಓಟಿಗಾಗಿ ಯುವತಿಯರ ಕಾಲಿಗೆ ಬಿಳುತ್ತಿರುವುದನ್ನ ನೋಡಿ ಫನ್ನಿ ಫನ್ನಿಯಾಗಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಇನ್ನು ವೈರಲ್ ಆಗುತ್ತಿರುವ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಮಾಡಿ ತಿಳಿಸಿ..