ನನಗೆ ಗಂಡನನ್ನಾಗಿ ಇವರನ್ನೇ ಕರೆಸಿ ಎಂದ ಸ್ಟಾರ್ ನಟಿ.! ಇದೇನಿದು ಹೊಸ ವಿಷಯ ನೋಡಿ..

Cinema

ಸ್ನೇಹಿತರೆ ಇದೀಗ ಸಿನಿಮಾರಂಗದಲ್ಲಿ ಸಾಕಷ್ಟು ಸುದ್ದಿಗಳು ಆಗಾಗ ಹೆಚ್ಚು ಚರ್ಚೆಯಾಗುತ್ತವೆ. ಸಿನಿಮಾ ಕ್ಷೇತ್ರದಲ್ಲಿ ಸಿನಿಮಾಗಳ ವಿಚಾರವಾಗಿ ಗಾಸಿಪ್ ನಂತಹ ಸುದ್ದಿ ಕೂಡ ಕೇಳಿಬರುತ್ತವೆ. ಹೌದು ಟಾಲಿವುಡ್’ ನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಚಿತ್ರ ಗಾಡ್ ಫಾದರ್ ಬರುತಿದೆ ಎಂಬುದು ಚಿರಂಜೀವಿ ಅವರ ಅಭಿಮಾನಿಗಳಿಗೆ ಗೊತ್ತಿದೆ. ಈ ಗಾಡ್ ಫಾದರ್ ನಲ್ಲಿ ನಟಿ ನಯನತಾರಾ ಕೂಡ ಅಭಿನಯಿಸಲಿದ್ದಾರೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಗಾಡ್ ಫಾದರ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ನಟಿ ನಯನತಾರಾ ಅವರು ಕೇಳಿದ ಸಂಭಾವನೆ ವಿಚಾರ ತುಂಬಾ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಹೌದು ನಾಲ್ಕು ಕೋಟಿ ಸಂಭಾವನೆ ಕೇಳಿರುವುದಾಗಿ ನಟಿಸಲು ಕೇಳಿಬಂದಿತ್ತು.

ಹೌದು ಇದೆಲ್ಲಾ ಒಂದು ಕಡೆಯಾದರೆ, ಇನ್ನೊಂದು ಕಡೆ ಇದೀಗ ಇನ್ನೊಂದು ವಿಷಯ ಗಾಡ್ಫಾದರ್ ಚಿತ್ರತಂಡದ ಮೂಲಕ ಹೊರಬಿದ್ದಿದೆ. ನಟ ಚಿರಂಜೀವಿ ಅವರ ಈ ಗಾಡ್ಫಾದರ್ ಸಿನಿಮಾ ಈ ಮುಂಚೆಯೇ ಮಲಯಾಳಂ ನಲ್ಲಿ ನಟ ಮೋಹನ್ ಲಾಲ್ ಅಭಿನಯಿಸಿದ ಲೂಸಿಫರ್ ಚಿತ್ರದ ರಿಮೇಕ್ ಎನ್ನಲಾಗಿದೆ. ಮಲಯಾಳಂನಲ್ಲಿ ನಯನತಾರಾ ಅವರ ಪಾತ್ರವನ್ನು ಮಂಜು ವಾರಿಯರ್ ಅವರು ನಿಭಾಯಿಸಿದ್ದರು. ನಟಿ ಮಂಜು ಅವರ ಪತಿಯ ಪಾತ್ರದಲ್ಲಿ ಬಾಲಿವುಡ್ನ ಖ್ಯಾತ ನಟ ವಿವೇಕ್ ಒಬೆರಾಯ್ ಅವರು ಅಭಿನಯಿಸಿ ಸೈ ಎನಿಸಿಕೊಂಡಿದ್ರು. ಹೌದು ಇದೀಗ ನಟಿ ನಯನತಾರಾ ಪತಿಯ ಪಾತ್ರಕ್ಕೆ ಟಾಲಿವುಡ್ನ ಯುವ ನಟ ಸತ್ಯದೇವ್ ಎಂಬುವವರು ಆಯ್ಕೆಯಾಗಿದ್ದಾರೆ.

ಆದರೆ ನಟಿ ನಯನ ತಾರಾ ಇದೀಗ ಮತ್ತೊಂದು ಕ್ಯಾತೆ ತೆಗೆದಿದ್ದಾರಂತೆ. ನನ್ನ ಗಂಡನ ಪಾತ್ರಕ್ಕೆ ಇವರ ಬದಲಿಗೆ ಬೇರೆಯವರನ್ನು ಕರೆ ತನ್ನಿ ಎಂದಿದ್ದಾರಂತೆ. ಗಾಡ್ ಫಾದರ್ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕರ ಬಳಿ ಈ ವಿಷಯ ಕೇಳಿಕೊಂಡಿದ್ದಾರೆ ನಯನತಾರಾ ಎನ್ನಲಾಗಿದೆ. ಈ ಎಲ್ಲ ಚರ್ಚೆಯ ನಡುವೆ ಕಿಚ್ಚ ಸುದೀಪ್ ಅವರನ್ನೇ ನಟಿ ನಯನತಾರಾ ಅವರ ಗಂಡನ ಪಾತ್ರಕ್ಕೆ ಕರೆತರುವ ಪ್ಲಾನ್ ನಡೆಸಿದ್ದಾರೆ ಎಂದು ಕೇಳಿಬಂದಿದೆ. ಇದು ನಿಜವೇ ಆದಲ್ಲಿ ಮತ್ತೊಮ್ಮೆ ಕನ್ನಡದ ಕಿಚ್ಚ ಹಾಗೂ ಚಿರಂಜೀವಿ ಅವರನ್ನು ಮತ್ತೆ ತೆರೆಯ ಮೇಲೆ ಇನ್ನೊಂದು ಬಾರಿ ಕಣ್ತುಂಬಿಕೊಳ್ಳಬಹುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ…