ಒಳ್ಳೆಯ ಉದ್ದೇಶಕ್ಕಾಗಿ ವಿಶ್ವದ ಚೆಸ್ ಚಾಂಪಿಯನ್ ಜೊತೆ ಚೆಸ್ ಆಡಲಿರುವ ಕಿಚ್ಚ ಸುದೀಪ್ ! ಇದು ಕನ್ನಡಿಗರ ಹೆಮ್ಮೆ..

Cinema

ಕರ್ನಾಟಕದ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಹುಮುಖ ಪ್ರತಿಭೆ. ಅವರು ಚಿತ್ರ ನಟನೆ, ನಿರ್ದೇಶನ, ಅಡುಗೆ ಮಾಡುವವರು, ಕ್ರಿಕೆಟ್ ಆಡುವುದು, ಹಾಡು ಹಾಡುವುದು, ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ, ಹೀಗೆ ಒಂದಾ ಎರಡಾ..ಒಂದು ರೀತಿ ಕಿಚ್ಚ ಸುದೀಪ್ ಅವರು ಸಕಾಲವಲ್ಲಭನೇ ಸರಿ. ಆದರೆ ಸುದೀಪ್ ಅವರು ಚೆಸ್ ಆಡುವುದನ್ನ ನೀವು ಎಂದಾದರೂ ನೋಡಿದ್ದೀರಾ.. ಅದರಲ್ಲೂ ವಿಶ್ವದ ಚೆಸ್ ಚಾಂಪಿಯನ್ ಜೊತೆ ಇಂದು ಚೆಸ್ ಆಡಲಿದ್ದಾರೆ ಅಂದರೆ ನಂಬುವಿರಾ? ಇದು ನಿಜ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೆಸ್ ಡಾಟ್ ಕಾಮ್ ಮತ್ತು ಅಕ್ಷಯ ಪಾತ್ರ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಚೆಸ್ ಪಂದ್ಯವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸುದೀಪ್ ಮತ್ತು ವಿಶ್ವದ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಮುಖಾಮುಖಿ ಆಗಲಿದ್ದಾರೆ. ದೇಶದ ವಿವಿಧೆಡೆ ಕೋವಿಡ್ ಕಾ’ಯಿಲೆಯಿಂದ ಬಳಲುತ್ತಿರುವರಿಗೆ ಸಹಾಯ ಮಾಡಲು ಫಂಡ್ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನಿಮ್ಮ ನೆಚ್ಚಿನ ನಟ ಸುದೀಪ್ ವಿಶ್ವದ ಚೆಸ್ ಚಾಂಪಿಯನ್ ಜೊತೆ ಚೆಸ್ ಆಡುವುದನ್ನು ನೀವು ಇಂದು ಜೂನ್ 13 ಭಾನುವಾರ ಸಂಜೆ 5 ಗಂಟೆಗೆ ವೀಕ್ಷಿಸಬಹುದು.

Ches.com ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಇದು ಪ್ರಸಾರವಾಗಲಿದೆ. ಭಾರತದ ಕೆಲವೇ ಕೆಲವು ಪ್ರಸಿದ್ಧ ವ್ಯಕ್ತಿಗಳು ಈ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರೂ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಡಲಿದ್ದಾರೆ. ಅವರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು. ಕೋರೋನದ ಈ ಕಷ್ಟಕರ ಸಂದರ್ಭದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡಲು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸುದೀಪ್ ಅವರು ಭಾಗವಹಿಸುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ. ನೀವು ಕೂಡ ಈ ಒಳ್ಳೆಯ ಉದ್ದೇಶಕ್ಕಾಗಿ ನಿಮ್ಮ ಕೈಲಾದಷ್ಟು ಫಂಡ್ ನೀಡಬಹುದಾಗಿದೆ.