ಬಡವನ ಮನೇಲಿ ಹಾಲು ಕುಡಿಯಲು ನಿರಾಕರಿಸಿದ್ದ ಸುಧಾಮೂರ್ತಿ ಅಮ್ಮ.!ಅಸಲಿ ಕಾರಣ ಏನ್ ಗೊತ್ತಾ.?

Inspire

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಮ್ಮ ಸುಧಾಮೂರ್ತಿ ಅಮ್ಮನವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಪ್ರತಿವರ್ಷ ರಾಜ್ಯಕ್ಕೆ ಆಗಲಿ, ಅಥವಾ ನಮ್ಮ ದೇಶಕ್ಕೆ ಆಗಲಿ, ಏನಾದರೂ ನಷ್ಟ ಆದರೆ, ದೇಶ ಅಥವಾ ರಾಜ್ಯ ಸಂದಿಗ್ಧ ಪರಿಸ್ಥಿತಿಯಲ್ಲಿ ತುಂಬಾ ನೋವನ್ನು ಎದುರಿಸುತ್ತಿದ್ದರೆ, ಕಷ್ಟದ ದಿನಗಳನ್ನು ನಮ್ಮ ಜನರು ಎದುರು ನೋಡುತ್ತಿದ್ದರೆ, ಸುಧಾಮೂರ್ತಿ ಅಮ್ಮನವರು ಹಿಂದೆ ಮುಂದೆ ನೋಡದೆ ನಿರಾಳ ಮನಸ್ಸಿನಿಂದ ಸಹಾಯ ಮಾಡಲು ಮುಂದೆ ಬರುತ್ತಾರೆ. ಇನ್ಫೋಸಿಸ್ ಪ್ರತಿಷ್ಠಾನ ಸಂಸ್ಥೆಯ ಅಧ್ಯಕ್ಷರು ಆಗಿರುವ ಸುಧಾಮೂರ್ತಿ ಅಮ್ಮನವರು ಈಗಾಗಲೇ ಇಡಿ ದೇಶಕ್ಕೆ ಒಂದು ಒಳ್ಳೆಯ ಮಾದರಿ ಆಗಿ, ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

ಹೌದು ಸುಧಾಮೂರ್ತಿ ಅಮ್ಮನವರು ಆರಂಭದ ದಿನದಿಂದ ತುಂಬಾನೇ ಕಷ್ಟಪಟ್ಟು ಮೇಲೆ ಬಂದವರು. ಅಂದು ಅಷ್ಟು ಕಷ್ಟ ನೋಡಿದ ಸುಧಾಮೂರ್ತಿ ಅಮ್ಮ ಇಂದು ಕೋಟ್ಯಾನುಕೋಟಿ ಹಣ ಆಸ್ತಿ ಅವರದ್ದಾಗಿದೆ. ಹಾಗಿದ್ದರೂ ಕೂಡ ಸುಧಾಮೂರ್ತಿ ಅಮ್ಮನವರು ಇಂದಿಗೂ ಕೂಡ ಅವರ ಸರಳತೆಗೆ ಹೆಸರಾಗಿದ್ದಾರೆ. ತುಂಬಾನೇ ಸರಳ ವ್ಯಕ್ತಿತ್ವ, ತುಂಬಾ ಮೃದು ಮನಸ್ಸು, ಹಾಗೆ ಯಾವುದೇ ಆಡಂಬರ ಇಲ್ಲದ ಮಾತುಗಳು ಕೇಳಬೇಕು ಎನಿಸುತ್ತವೆ. ಅವರು ಎಷ್ಟರ ಮಟ್ಟಿಗೆ ನೀಡಂಭರದ ವ್ಯಕ್ತಿಯೆಂದರೆ, ಸಾವಿರಾರು ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದರೂ ಅವರು ಇಂದಿಗೂ ಧರಿಸವುದು ಒಂದು ಕರಿ ಮಣಿಯ ಸರವನ್ನಷ್ಟೇ.. ಹೌದು ಇತ್ತೀಚಿಗಷ್ಟೇ ಕೆಲವು ದಿನಗಳ ಹಿಂದೆ ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಸುಧಾಮೂರ್ತಿಯವರು ತೊಡಗಿಸಿಕೊಂಡು ಒಂದು ಹಳ್ಳಿಗೆ ಭೇಟಿ ನೀಡಿದ್ದರಂತೆ.

ಆಗ ಶಾಲೆ ಕಟ್ಟಿಸುವ ವೇಳೆ, ಮಳೆ ತುಂಬಾ ಜೋರಾಗಿ ಬಂದಿತ್ತಂತೆ. ಹಾಗಾಗಿ ಅದೇ ಊರಿನ ಒಂದು ಪುಟ್ಟ ಗುಡಿಸಲಿಗೆ ಸುಧಾಮೂರ್ತಿ ಅವರು ಹೋಗಿದ್ದರಂತೆ. ಆಗ ಮನೆಗೆ ಸುಧಾಮೂರ್ತಿ ಅಮ್ಮನವರು ಬಂದಿದ್ದಾರೆ ಎಂದು ಆ ಮನೆ ಯಜಮಾನ ತನ್ನ ಪತ್ನಿಗೆ ಒಳಗೆ ಹೋಗಿ ಹಾಲು ತರಲು ಹೇಳಿದನಂತೆ. ಆದರೆ ಆತನ ಹೆಂಡತಿ ಒರಿಯಾ ಭಾಷೆಯಲ್ಲಿ ನನ್ನ ಮಗನಿಗೆ ಕುಡಿಯಲು ಹಾಲು ಬೇಕು, ಆ ವಯಸ್ಸಾದ ಅಜ್ಜಿಗೆ ನಾನು ಹಾಲು ಕೊಡುವುದಿಲ್ಲ ಎಂದು ಹೇಳಿದಳಂತೆ. ಆದರೂ ಗಂಡ ಹಾಲಿಗೆ ನೀರು ಬೆರೆಸಿ ತೆಗೆದುಕೊಂಡು ಬಾ ಎಂದು ಹೇಳಿದನಂತೆ.

ಅದರಂತೆ ಮಾಡಿ ಹಾಲು ತಂದ, ಆತನ ಪತ್ನಿಯ ಮತ್ತು ಆಕೆಯ ಗಂಡನ ನಡವಳಿಕೆ ಅರ್ಥೈಸಿಕೊಂಡು ನಮ್ಮ ಸುಧಾಮೂರ್ತಿ ಅಮ್ಮನವರು, ನಾನು ಬುಧವಾರ ವ್ರತ ಮಾಡುತ್ತೇನೆ, ಹಾಗಾಗಿ ನೀರು ಮಾತ್ರ ಕುಡಿಯುತ್ತೇನೆ ಎಂದು ಹೇಳಿದರಂತೆ. ಇಷ್ಟು ಸರಳ ಮನೋಭಾವವನ್ನು ಸುಧಾಮೂರ್ತಿಯವರು ಹೊಂದಿದ್ದರು ಎಂದು ಇತ್ತೀಚಿಗೆ ಮಾಧ್ಯಮ ಮೂಲಕ ತಿಳಿದು ಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…