ಮೃಗಾಲಯದ ಪ್ರಾಣಿಗಳ ನೆರವಿಗೆ ನಿಂತ ಸುಧಾಮೂರ್ತಿಯವರು ಮಾಡಿದ ಕೆಲಸ ಏನು ಗೊತ್ತಾ.?

News
Advertisements

ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಇಡೀ ದೇಶವೇ ಸ್ಥಬ್ದವಾಗಿದೆ. ಇನ್ನು ಇದರ ನೇರಪರಿಣಾಮ ಬಿದ್ದಿರುವುದು ಶ್ರೀಸಾಮಾನ್ಯ ಜನರ ಮೇಲೆ. ಮನುಷ್ಯರೇ ಒಂದೊತ್ತಿನ ಊಟಕ್ಕೆ ಪದರದಾಡುವ ಸ್ಥಿತಿ ನಿರ್ಮಾಣವಾಗಿರಬೇಕಾದರೆ, ಇನ್ನುಮೂಕ ಪ್ರಾಣಿಗಳ ಸಂಕಷ್ಟವನ್ನ ಕೇಳುವರ್ಯಾರು.

Advertisements

ಹೌದು, ಇದೇ ರೀತಿ ಲಾಕ್ ಡೌನ್ ಕಾರಣದಿಂದಾಗಿ ಮೈಸೂರು ಮೃಗಾಲಯದ ಪ್ರಾಣಿಗಳು ಸಂಕಷ್ಟ ಎದುರಿಸುತ್ತಿವೆ. ಇನ್ನು ಈಗ ಟೂರಿಸಂ ನಿಂತು ಹೋಗಿರುವ ಕಾರಣ ಮೃಗಾಲಯಕ್ಕೂ ಯಾವುದೇ ಆಧಾಯ ಕೂಡ ಇಲ್ಲ. ಇನ್ನು ರಾಜ್ಯದ ಜನರಿಗೆ ಏನೇ ಸಂಕಷ್ಟವಾದರೂ ಸದಾ ಒಂದು ಹೆಜ್ಜೆ ಮುಂದಿರುವ ಇನ್ಫೋಸಿಸ್ ಫೌಂಡೇಶನ್ ನ ಅಧ್ಯಕ್ಷರಾಗಿರುವ ಸುಧಾಮೂರ್ತಿ ಅಮ್ಮನವರು ಮೃಗಾಲಯದ .ಪ್ರಾಣಿಗಳ ನೆರವಿಗೆ ನಿಲ್ಲುವ ಕೆಲಸ ಮಾಡಿದ್ದು ಮಾನವೀಯತೆ ಮೆರೆದಿದ್ದಾರೆ.

ಈಗಾಗಲೇ ಬಡವರಿಗೆ, ನಿರ್ಗತಿಕರಿಗೆ ಸಹಾಯ ಹಸ್ತ ಚಾಚುತ್ತಿರುವ ಸುಧಾಮೂರ್ತಿಯವರು, ಈಗ ಮೈಸೂರಿನ ಮೃಗಾಲಯದ ಪ್ರಾಣಿಗಳಿಗಾಗಿ ಬರೊಬ್ಬರಿ 20 ಲಕ್ಷದ ಹಣವನ್ನ ಚೆಕ್ ಮೂಲಕ ಕೊಟ್ಟಿದ್ದಾರೆ. ಎಷ್ಟೇ ಆದರೂ ತಾಯಿ ಹೃದಯ ಆಲ್ವಾ. ಮನುಷ್ಯರಾದರೇನು, ಪ್ರಾಣಿಗಳಾದರೇನೋ ತಾಯಿ ಮಮತೆ ಬದಲಾಗೋದಿಲ್ಲ ಸುಧಾಮೂರ್ತಿ ಅಮ್ಮನವರೇ ಸಾಕ್ಷಿ. ಇಂತಹ ಮಹಾನ್ ವ್ಯಕ್ತಿಯನ್ನ ಪಡೆದ ನಮ್ಮ ನಾಡು, ನಾವೇ ಧನ್ಯ. ಇನ್ನು ಸುಧಾಮೂರ್ತಿಯ ಅಮ್ಮನವರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ ತಿಳಿಸಿ.