ನಟ ಸುಧೀರ್ ಅನುಭವಿಸಿದ ನೋವು ಕಷ್ಟ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ !

Cinema
Advertisements

ನಮಸ್ಕಾರ ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಖಳನಟರು ಬಂದು ಹೋಗಿದ್ದಾರೆ. ಅದರಲ್ಲಿ ಒಬ್ಬರು ಖ್ಯಾತ ನಟ ಸುಧೀರ್ ಕೂಡ ಒಬ್ಬರು. ಯಾವ ದುರಭ್ಯಾಸವು ಇಲ್ಲದ ಯಾರಿಗೂ ಕೇಡು ಬಯಸದ ನಟ ಸುಧೀರ್ ರವರ ದುರಂತ ಅಂತ್ಯ ಕತೆ ಇದು. ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದಿದ್ದಾರೆ. ಅವರಲ್ಲಿ ಖ್ಯಾತ ಹಿರಿಯ ನಟ ಸುಧೀರ್ ಸಹ ಒಬ್ಬರು.

Advertisements

ಇನ್ನು ಸಿನಿಮಾದಲ್ಲಿ ನಟಿಸುವ ನಟರನ್ನ ನೋಡಿ ನಾವು ಅವರು ಹೇಗೆಲ್ಲಾ ಜೀವನ ನಡೆಸಬಹುದು ಎಂಬ ಕುತೂಹಲ ನಮ್ಮಲ್ಲಿ ಇದ್ದೆ ಇರುತ್ತದೆ. ಆದ್ರೆ ಸ್ನೇಹಿತರೆ ಸಿನಿಮಾದಲ್ಲಿರುವಂತೆ ನಟರ ವೈಯುಕ್ತಿಕ ಜೀವನ ಅಷ್ಟು ಸುಲಭವಾಗಿರುವುದಿಲ್ಲ. ಅಂತಹವರಲ್ಲಿ ನಟ ಸುದೀರ್ ಅವರ ವೈಯುಕ್ತಿಕ ಜೀವನವು ಒಂದು. ತಮ್ಮ ವೈಯುಕ್ತಿಕ ಜೀವನದಲ್ಲಿ ಕೆಟ್ಟ ಚಟಗಳಿಂದ ದೂರವಿದ್ದ ನಟ ಸುಧೀರ್ ಉತ್ತಮ ಖಳನಟ ಆಗಿದ್ದರು. ಆದರೆ ಇಂತಹ ಕಲಾವಿದನ ಜೀವನ ನೋಡು ನೋಡುತ್ತಿದ್ದಂತೆ ದುರಂತ ಅಂತ್ಯ ಕಂಡಿದ್ದು ತುಂಬಾ ಬೇಸರದ ಸಂಗತಿಯಾಗಿದೆ.

ಒಬ್ಬ ಸಜ್ಜನ ಕಲಾವಿದರಾಗಿದ್ದ ನಟ ಸುಧೀರ್ ಇದ್ದಕಿದ್ದಂತೆ ತೀರಿಕೊಂಡರು. ಹೆಂಡತಿ ಮಕ್ಕಳು ಅನಾಥರಾದರು. ಅವರು ಕಂಡಿದ್ದ ಕನಸುಗಳು ನುಚ್ಚು ನೂರಾದವು. ಸುಧೀರ್ ತೀರಿಕೊಂಡಾಗ ಅವರ ಹಿರಿಯ ಮಗ ನಂದ ಕಿಶೋರ್ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಎರಡನೆಯ ಮಗ ತರುಣ್ ಸುಧೀರ್ ೯ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆಗ ಸುಧೀರ್ ಪತ್ನಿ ಮಾಲತಿಯವರಿಗೆ ಕೇವಲ ೪೦ ವರ್ಷ ವಯಸ್ಸಾಗಿತ್ತು. ಆದರೆ ಇಷ್ಟಕ್ಕೂ ನಟ ಸುಧೀರ್ ಇದ್ದಕಿದ್ದಂತೆ ಸಾವಿನ ಬಾಗಿಲು ತಟ್ಟಿದ್ದು ಹೇಗೆ ?ಅದೊಂದು ರೋಚಕ ಕತೆಯಾಗಿದೆ.

ಆ ದಿನ ಸುಧೀರ್ ರವರು ಯಾವುದೇ ಚಿತ್ರದ ಚಿತ್ರೀಕರಣಕ್ಕೆಂದು ಕಂಠೀರವ ಸ್ಟುಡಿಯೋಗೆ ಹೋಗಿದ್ದರು. ನಾಯಕ ನಟನ ಜೊತೆ ಬಡಿದಾಡುವ ಚಿತ್ರೀಕರಣ ಅದಾಗಿತ್ತು. ಆ ಜಗದಲ್ಲಿ ತುಂಬಾ ದೂಳು ತುಂಬಿತ್ತು.ಎರಡು ದಿನಗಳ ಕಾಲ ಅದೇ ಜಗದಲ್ಲಿ ಚಿತ್ರೀಕರಣ ನಡೆದಿತ್ತು. ಬೆಳಗ್ಗಿನಿಂದ ಸಂಜೆಯ ತನಕ ಆ ದೂಳಿನ ನಡುವೆಯೇ ಚಿತ್ರೀಕರಣ ಸಾಗಿತ್ತು. ಆದರೆ ನಟ ಸುಧೀರ್ ಗೆ ಇದಕ್ಕೂ ಮೊದಲೇ ಡಸ್ಟ್ ಅಲರ್ಜಿ ಇತ್ತು. ಸಾಮಾನ್ಯ ರಸ್ತೆಗಳಲ್ಲಿ ಓಡಾಡಿದ್ರು ಡಸ್ಟ್ ಅಲರ್ಜಿಯ ಕಾರಣ ನೆಗಡಿಯಾಗಿ ಇಡೀ ವಾರಗಳ ಕಾಲ ಮನೆಯಲ್ಲೇ ಇರುತ್ತಿದ್ದರು.

ಇಂತಹ ಸುಧೀರ್ ಎರಡು ದಿನಗಳ ಕಾಲ ವಿಪರೀತ ದೂಳು ತುಂಬಿರುವ ಫ್ಲೋರ್ ನಲ್ಲಿ ಅಭಿನಯಿಸಬೇಕಾದರೆ ಅವರ ಆರೋಗ್ಯದ ಸ್ಥಿತಿ ಹೇಗಾಗಿರಬೇಡ ನೀವೇ ಒಮ್ಮೆ ಊಹಿಸಿಕೊಳ್ಳಿ. ಇನ್ನು ಎರಡನೆಯ ದಿನದ ಚಿತ್ರೀಕರಣದ ಅಂತ್ಯಕ್ಕೆ ಅವರ ಶ್ವಾಸಕೋಶದಲ್ಲಿ ತೊಂದರೆಯುಂಟಾಗಿ ಆಸ್ಪತ್ರೆ ಸೇರಿಕೊಂಡವರು ಮತ್ತೆ ಮರಳಿ ಮನೆಗೆ ಹೋಗಲು ಆಗಲೇ ಇಲ್ಲ. ಹಲವಾರು ಯುವ ಪ್ರತಿಭೆಗಳಿಗೆ ಉಸಿರಾಗಿದ್ದ ಸುಧೀರ್ ಉಸಿರಾಟದ ತೊಂದರೆಯಿಂದಾಗಿ ಅಸ್ವಸ್ಥರಾಗಿಬಿಟ್ಟರು. ಪತ್ನಿ ಮಾಲತಿ ನೋಡ ನೋಡುತ್ತಿದ್ದಂತೆ ಇಹಲೋಕ ತ್ಯಜಿಸಿಬಿಟ್ಟರು ಸುಧೀರ್. ಆ ದಿನ ಕನ್ನಡ ಚಿತ್ರರಂಗ ಅದ್ಭುತ ಖಳನಟನನ್ನ ಕಳೆದುಕೊಂಡು ಬಡವಾಗಿದ್ದಂತೂ ನಿಜ.