ಸದ್ದಿಲ್ಲದೇ ಸಂಸದೆ ಸುಮಲತಾ ಅವರು ಮಾಡುತ್ತಿರುವ ಕೆಲಸ ನೋಡಿದ್ರೆ ಗ್ರೇಟ್ ಅಂತೀರಾ !

Kannada News

ಸ್ನೇಹಿತರೇ, ನಮ್ಮ ಬೆಂಗಳೂರು ಸೇರಿದಂತೆ ಇಡೀ ರಾಜ್ಯಾದಂತ ಮ’ಹಾಮಾರಿ ಕೊ’ರೋನಾ ಸೋಂಕಿನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಎಲ್ಲರಿಗು ಗೊತ್ತಿರುವ ವಿಚಾರವೇ. ಹಲವಾರು ಆಸ್ಪತ್ರೆಗಳಲ್ಲಿ ಬೆಡ್ ಆ’ಕ್ಸಿಜೆನ್ ನ ಕೊರತೆಯಿಂದಾಗಿ ಜನ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರಗಳು ಏನೇ ಮಾಡಿದ್ರು ಇದು ಹತೋಟಿಗೆ ಬರುತ್ತಿಲ. ಇನ್ನು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲೂ ಕೂಡ ಈಗ ಆ’ಕ್ಸಿಜೆನ್ ಅಭಾವ ಸೃಷ್ಟಿಯಾಗಿದೆ. ಮೊದಲಿಗೆ ನಮ್ಮಲ್ಲಿ ಆ’ಕ್ಸಿಜೆನ್ ಕೊರತೆ ಇಲ್ಲ ಅಂತ ಹೇಳುತ್ತಾ ಬಂದಿದ್ದ ಮಂಡ್ಯ ಜಿಲ್ಲಾಡಳಿತ ಈಗ ಆ’ಕ್ಸಿಜೆನ್ ಕೊರತೆ ಇರುವುದರ ಬಗ್ಗೆ ಬಾಯಿ ಬಿಟ್ಟಿದೆ. ಇದರ ಬೆನ್ನೆಲ್ಲೇ ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಅವರು ಎಚ್ಚೆತ್ತುಕೊಂಡಿದ್ದು ಮಹತ್ವದ ಕೆಲಸ ಕೈಗೊಂಡಿದ್ದಾರೆ.

ಹೌದು, ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಸ್ವಂತ ಹಣದಲ್ಲಿ ಪ್ರತೀ ದಿವಸ ಬರೋಬ್ಬರಿ ಎರಡು ಸಾವಿರ ಲೀಟರ್ ಕೃತಕ ಆ’ಕ್ಸಿಜೆನ್ ಪೂರೈಕೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮಾಹಿತಿಗಳ ಪ್ರಕಾರ ಮಂಡ್ಯ ಜಿಲ್ಲೆಗೆ ೩ ಕ್ವಿಂಟಲ್ ಆ’ಕ್ಸಿಜೆನ್ ಬೇಕಾಗಿದೆ ಎಂದು ಹೇಳಲಾಗಿದ್ದು, ಸುಮಲತಾ ಅವರು ತಮ್ಮ ಕೈಲಾದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಂಸದರ ನಿಧಿಯಲ್ಲಿ ಹಣ ಇಲ್ಲದ ಕಾರಣ, ಜೊತೆಗೆ ಅನುದಾನಗಳಿಂದ ಬಾರೋ ಹಣ ತಡವಾಗುವ ಕಾರಣ ತಮ್ಮ ಸ್ವಂತ ಹಣದಿಂದ ಪ್ರತೀ ದಿನ ಎರಡು ಸಾವಿರ ಆ’ಕ್ಸಿಜೆನ್ ನೀಡಲು ಮಹತ್ವದ ನಿರ್ಧಾರ ಮಾಡಿದ್ದಾರೆ ಸುಮಲತಾ ಅವರು. ಇನ್ನು ಆ’ಕ್ಸಿಜೆನ್ ಕೊರತೆಯ ಕಾರಣದಿಂದಾಗಿ ಜಿಲ್ಲೆಯಲ್ಲಿ ಸಾ’ವು ನೋವುಗಳ ಸಂಭವಿಸಬಾರದು ಎಂದು ಸುಮಲತಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರದಿಂದ ಇರುವಿನಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಇಡೀ ಮಂಡ್ಯ ಜಿಲ್ಲೆಯ ಅಗತ್ಯ, ಆದ್ಯತೆಗಳು ನನ್ನ ಜವಾಬ್ದಾರಿಯಾಗಿದ್ದು, ನನ್ನ ಸೇವೆ ತಡೆ ಇಲ್ಲದೆ ಮುಂದುವರಿಯುತ್ತಲೇ ಇರುತ್ತದೆ. ಇಂತಹ ಸಂಕಷ್ಟ ಕಾಲದಲ್ಲಿ ಯಾರನ್ನು ಟೀಕೆ ಮಾಡುವ ಸಮಯವಲ್ಲ ಇದು. ಎಲ್ಲರೂ ಒಟ್ಟಾಗಿ ಸೇರಿ ಪ್ರಯತ್ನ ಪಟ್ಟರೆ ಮಾತ್ರ ಈ ಮ’ಹಾಮಾರಿಯನ್ನ ಗೆಲ್ಲಲು ಸಾಧ್ಯ ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಇದೆ ರೀತಿಯಲ್ಲಿ ಪ್ರತೀ ಜಿಲ್ಲೆಯ ಸಂಸದರು ಹಾಗೂ ಉಸ್ತುವಾರಿ ಸಚಿವರು ಸ್ವಪ್ರಯತ್ನದಿಂದ ಕೆಲಸ ಮಾಡಿದಲ್ಲಿ ಈಗ ಅಸಂಭವಿಸುತ್ತಿರುವ ಸಾ’ವು ನೋವುಗಳನ್ನ ತಡೆಯಬಹುದಾಗಿದೆ.