ಬಡ ಕುಟುಂಬದಲ್ಲಿ ಬೆಳೆದ ಹುಡುಗ ಜಗತ್ತಿನ ದೈತ್ಯ ಕಂಪನಿಯ ಸಿಇಓ !ಇವರ 1 ದಿನದ ಸಂಬಳ ಕೇಳಿದ್ರೆ..ಇವರ ಹೆಂಡತಿ ಮಕ್ಕಳು ಹೇಗಿದ್ದಾರೆ ನೋಡಿ..

Inspire

ಜಗತ್ತಿನ ಟಾಪ್ ದೈತ್ಯ ಟೆಕ್ ಕಂಪೆನಿಗಳಲ್ಲಿ ಒಂದು ಗೂಗಲ್. ಇನ್ನು ಇದೆ ಕಂಪನಿಯ ಸಿಇಓ ಆಗಿರುವವರು ನಮ್ಮ ದಕ್ಷಿಣ ಭಾರತದವರೇ ಎಂಬುದು ವಿಶೇಷ. ಮಧ್ಯಮವರ್ಗದ ಕುಟುಂಬದವೊಂದರಲ್ಲಿ ಜನಿಸಿ ಈಗ ಇಡೀ ಜಗತ್ತಿನಾಧ್ಯಂತ ಹೆಸರು ಮಾಡಿರುವ ಇವರ ಕತೆಯೇ ಒಂದು ರೋಚಕ. ಹೌದು, ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾದ ಗೂಗಲ್ ನ ಸಿಇಓ ಆಗಿರುವವರು ಸುಂದ‌ರ್ ಪಿಚ್ಚೈ. ಇವರಿಗಿನ್ನು ಕೇವಲ ೪೮ ವರ್ಷ ವಯಸ್ಸು. ತಮಿಳುನಾಡಿನ ಸಾಮಾನ್ಯ ಮಧ್ಯಮವರ್ಗದ ಕುಟುಂದಲ್ಲಿ ಜನಿಸಿದ ಸುಂದ‌ರ್ ಪಿಚ್ಚೈ ಅವರ ಗೂಗಲ್ ವರೆಗಿನ ಪಯಣವೇ ಒಂದು ರೋಚಕ ಕತೆ. ಯುವಜನಾಂಗಕ್ಕೆ ಇವರು ದೊಡ್ಡ ಸ್ಫೂರ್ತಿ. ಇಂತಹ ವ್ಯಕ್ತಿ ನಮ್ಮ ದಕ್ಷಿಣ ಭಾರತದವರು ಎಂಬುದೇ ನಮಗೆ ದೊಡ್ಡ ಹೆಮ್ಮೆ ಎಂದರೆ ತಪ್ಪಾಗಲಾರದು.

ತಮಿಳುನಾಡಿನ ಮಧುರೈನಲ್ಲಿ ೧೦ ಜೂನ್/೧೦೭೨ರಂದು ಸುಂದ‌ರ್ ಪಿಚ್ಚೈ ಅವರ ಜನನವಾಗುತ್ತದೆ. ಇನ್ನು ಸುಂದ‌ರ್ ಪಿಚ್ಚೈ ಅವರು ಬಾಲ್ಯದಲ್ಲಿದ್ದಾಗಲೇ ಅಗಾಧವಾದ ಜ್ಞಾಪಕ ಶಕ್ತಿಯ ಬುದ್ದಿವಂತರು ಕೂಡ ಆಗಿದ್ದರು. ಆಗ ಇವರ ಮನೆಯಲ್ಲಿದ್ದ ಟೆಲಿಫೋನ್ ಡೈರೆಕ್ಟರಿಯಲ್ಲಿದ್ದ ದೂರವಾಣಿ ಸಂಖ್ಯೆಗಳನ್ನೆಲ್ಲಾ ಸುಲಲಿತವಾಗಿ ಕಂಠಪಾಠ ಮಾಡಿ ತಮ್ಮ ತಲೆಯಲ್ಲಿ ಇಟ್ಟುಕೊಂಡಿದ್ದರಂತೆ. ಯಾವುದೇ ಫೋನ್ ನಂಬರ್ ನ್ನ ನೋಡದೆಯೇ ಪಥಪಠನೆ ಹೇಳುತ್ತಿದ್ದರಂತೆ. ಇದು ಸುಂದ‌ರ್ ಪಿಚ್ಚೈ ಅವರ ಜ್ಞಾಪಕ ಶಕ್ತಿ ಎಷ್ಟಿತ್ತು ಎಂಬುದರ ಬಗ್ಗೆ ದೊಡ್ಡ ಸಾಕ್ಷಿ. ಹಾಗಾಗಿಯೇ ಇಂದಿಗೂ ಕೂಡ ಅವರ ಫೋನ್ ನಲ್ಲಿ ಯಾರ ಕಾಂಟ್ಯಾಕ್ಟ್ ನಂಬರ್ ಕೂಡ ಸೇವ್ ಮಾಡಿಕೊಂಡಿಲ್ಲವಂತೆ. ತಮ್ಮ ಸಹದ್ಯೋಗಿಗಳಿಂದ ಹಿಡಿದು ಆಪ್ತರವರೆಗೆ ಎಲ್ಲರ ಫೋನ್ ಸಂಖ್ಯೆಗಳು ಅವರ ತಲೆಯಲ್ಲಿ ಸೇವ್ ಆಗಿದೆಯಂತೆ..ಅಷ್ಟರ ಮಟ್ಟಿಗೆ ಸುಂದ‌ರ್ ಪಿಚ್ಚೈ ಅವರಿಗೆ ಜ್ನ್ಯಾಪಕ ಶಕ್ತಿ ಇದೆ.

ಇನ್ನು ತುಂಬಾ ಬುದ್ದಿವಂತರಾಗಿದ್ದ ಸುಂದ‌ರ್ ಪಿಚ್ಚೈ ಅವರಿಗೆ ವಿದ್ಯಾಭ್ಯಾಸ ಮಾಡಲು ಬಡತನ ಏನೂ ಅಡ್ಡವಾಗಿಲ್ಲ. ಆಗಿನ ಮದ್ರಾಸ್(ಚೆನ್ನೈ)ನಲ್ಲೆ ಶಾಲೆಯ ವಿಧ್ಯಾಭ್ಯಾಸವನ್ನ ಮುಗಿಸಿ ಐಐಟಿ ಖರಗ್ ಪುರ್ ನಲ್ಲಿ ಮೆಟಲರ್ಜಿಕಲ್ ನಲ್ಲಿ ಇಂಜಿನಿಯರಿಂಗ್ ಮುಗಿಸುತ್ತಾರೆ. ಬಳಿಕ ಅಮೆರಿಕಾದ ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಯಲ್ಲಿ ಮೇಟರಿಯಲ್ಸ್ ಸೈನ್ಸ್ ವಿಭಾಗದಲ್ಲಿ MS ಮುಗಿಸಿದ ಸುಂದ‌ರ್ ಪಿಚ್ಚೈ ಅವರು ವಾರ್ಟನ್ ಸ್ಕೂಲ್ ಆಫ್ ಯೂನಿವರ್ಸಿಟಿ ಪೆನ್ಸಿಲ್ವಿನಿಯಾದಲ್ಲಿ MBA ಪದವಿ ಪಡೆಯುತ್ತಾರೆ. ಇಷ್ಟೆಲ್ಲಾ ತಮ್ಮ ವಿದ್ಯಾಭ್ಯಾಸದ ಬಳಿಕ ಜಗತ್ತಿನ ದೈತ್ಯ ಟೆಕ್ ಕಂಪನಿ ಗೂಗಲ್ ಸಂಸ್ಥೆಯಲ್ಲಿ ೨೦೦೪ರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಇನ್ನು ಗೂಗಲ್ ನ ಸರ್ಚ್ ಟೂಲ್ ಬಾರ್ ನ ಟೆಕ್ನಿಕಲ್ ಟೀಮ್ ನೊಂದಿಗೆ ಕೆಲಸ ಮಾಡಲು ಸುಂದ‌ರ್ ಪಿಚ್ಚೈ ಅವರಿಗೆ ಒಂದು ದೊಡ್ಡ ಯೋಚನೆಯೊಂದು ಹೊಳೆಯುತ್ತದೆ. ಹೌದು, ಮೊದಲಿಗೆ ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಮೂಲಕವೇ ಗೂಗಲ್ ಸರ್ಚ್ ಮಾಡಲಾಗುತಿತ್ತು. ಹಾಗಾಗಿ ಸುಂದ‌ರ್ ಪಿಚ್ಚೈ ಅವರಿಗೆ ಹೊಳೆದ ಐಡಿಯಾ ಪ್ರಕಾರ ಬೇರೆ ಬೇರೆ ವೆಬ್ ಸರ್ಚ್ ನಲ್ಲಿ ಗೂಗಲ್ ಸರ್ಚ್ ಮಾಡೋ ಬದಲು ಗೂಗಲ್ ನ್ನೇ ಸರ್ಚ್ ಇಂಜಿನ್ ಆಗಿ ಅಭಿವೃದ್ಧಿ ಮಾಡಿದ್ರೆ ಹೇಗಿರುತ್ತೆ ಎಂಬ ಸೂಪರ್ ಐಡಿಯಾ ಹೊಳೆದಿದ್ದು, ಇದರ ಬಗ್ಗೆ ಆಗಿನ ಸಿಇಓ ಬಗ್ಗೆ ತಿಳಿಸಿದಾಗ, ಅವರು ಇದ್ಕಕೆ ತುಂಬಾ ಹಣ ಖರ್ಚಾಗುತ್ತದೆ ಎಂದು ಪಿಚ್ಚೈ ಅವರ ಐಡಿಯಾವನ್ನ ತಿರಸ್ಕರಿಸುತ್ತಾರೆ.

ಆದರೆ ಪಟ್ಟು ಬಿಡದ ಸುಂದ‌ರ್ ಪಿಚ್ಚೈ ಅವರು ಸರ್ಚ್ ಬಾರ್ ನಲ್ಲಿ ನಿರಂತರವಾಗಿ ಹಲವಾರು ಸುಧಾರಣೆಗಳನಂ ತಂದಿದ್ದು, ಇದೆಲ್ಲದರ ಫಲವಾಗಿ ಗೂಗಲ್ ಕ್ರೋಮ್ ಸರ್ಚ್ ಇಂಜಿನ್ ನ್ನ ಅಭಿವೃದ್ಧಿ ಪಡಿಸುತ್ತಾರೆ. ಇದು ಕೆಲ ವರ್ಷಗಳಲ್ಲೇ ಜಗತ್ತಿನಾದ್ಯಂತ ಫೇಮಸ್ ಸರ್ಚ್ ಬಾರ್ ಆಗಿ ಕ್ರೋಮ್ ಹೊರಹೊಮ್ಮುತ್ತೆ. ಇದರಿಂದ ಸುಂದ‌ರ್ ಪಿಚ್ಚೈ ಅವರಿಗೆಯೂ ಒಳ್ಳೆಯ ಹೆಸರು ಬರುತ್ತದೆ. ಇನ್ನು ಸುಂದ‌ರ್ ಪಿಚ್ಚೈ ಅವರು ಅಂಜಲಿ ಎಂಬುವವರನ್ನ ಲವ್ ಮಾಡಿದ್ದು, ಅಂಜಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಪಿಚ್ಚೈ ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಸೇರಿದಂತೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

ಗೂಗಲ್ ಕ್ರೋಮ್ ಬಳಿಕ ಕ್ರೋಮ್ ಓಸ್, ಫೈರ್ ಫ್ಯಾಕ್ಸ್ ಸರ್ಚ್ ಇಂಜಿನ್ ಗಳನ್ನ ಜಗತ್ತಿನಾದ್ಯಂತ ಫ್ಯಾಮಸ್ ಸರ್ಚ್ ಇಂಜಿನ್ ಗಳಾಗಿ ಅಭಿವೃದ್ಧಿಪಡಿಸಲಾಯಿತು. ಇನ್ನು ೨೦೧೫ರಲ್ಲಿ ಸುಂದ‌ರ್ ಪಿಚ್ಚೈ ಅವರು ಗೂಗಲ್ ಸಂಸ್ಥೆಯ ಸಿಇಓ ಆಗಿ ನೇಮಕಗೊಳ್ಳುತ್ತಾರೆ. ಇನ್ನು ಗೂಗಲ್ ನ ಪೇರೆಂಟ್ ಕಂಪನಿ ಆಲ್ಫಬೆಟ್ ಇಂಕ್ ಬೋರ್ಡ್ ಕೂಡ ಇವರೇ ಸಿಇಓ ಆಗುತ್ತಾರೆ. ಗೂಗಲ್ ಸಂಸ್ಥೆಯನ್ನ ಇಷ್ಟೊಂದು ಎತ್ತರಕ್ಕೆ ಬೆಳೆಸಿದ ಸುಂದ‌ರ್ ಪಿಚ್ಚೈ ಅವರಿಗೆ ಜಗತ್ತಿನ ದೈತ್ಯ ಸೋಷಿಯಲ್ ಮೀಡಿಯಾ ಕಂಪನಿಗಳಾದ ಫೇಸ್ಬುಕ್, ಟ್ವಿಟ್ಟರ್ ನಿಂದಲೂ ಆಫರ್ ಗಳು ಬರುತ್ತವೆ. ಆದರೆ ಅದನ್ನೆಲ್ಲಾ ತಿರಸ್ಕರಿಸಿ ಗೂಗಲ್ ನಲ್ಲೇ ಮುಂದುವರಿಯುತ್ತಾರೆ ಸುಂದ‌ರ್ ಪಿಚ್ಚೈ ಅವರು. ಇನ್ನು ಅಮೇರಿಕನ್ ಸಿಟಿಜೆನ್ ಶಿಪ್ ಹೊಂದಿರೋ ಸುಂದ‌ರ್ ಪಿಚ್ಚೈ ಅವರು ೨೦೦ಮಿಲಿಯನ್ ಗಿಂತ ಹೆಚ್ಚು ಆಧಾಯ ಹೊಂದಿರುವ ಭಾರತೀಯ ಮೂಲದವರಾಗಿದ್ದಾರೆ. ಇನ್ನು ಇವರ ಒಂದು ದಿನದ ಆಧಾಯವೇ ಬರೋಬ್ಬರಿ 6 ಕೋಟಿಗಿಂತ ಹೆಚ್ಚಿದೆ. ತಮಿಳುನಾಡಿನ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ್ದ ವ್ಯಕ್ತಿ ಇಂದು ಜಗತ್ತಿನ ಫೇಮಸ್ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.