ತಾನು ಪ್ರತೀದಿನ ಕಸಗುಡಿಸುತ್ತಿದ್ದ ಗ್ರಾಮ ಪಂಚಾಯತಿಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ !

Kannada News
Advertisements

ನಮಸ್ತೇ ಸ್ನೇಹಿತರೇ, ನಮ್ಮ ದೇಶದ ಪ್ರಜಾಪ್ರಭುತ್ವವನ್ನ ಈಡಿ ಜಗತ್ತೇ ಗೌರವಿಸುತ್ತದೆ. ಹೌದು, ಇದೆ ಪ್ರಜಾಪ್ರಭುತ್ವದ ಅಡಿಯಲ್ಲಿ ಯಾರೂ ಬೇಕಾದರೂ ಕೂಡ ಪ್ರಭು ಆಗಬಹುದು. ಇದಕ್ಕೆ ಹಲವಾರು ನಿದರ್ಶನಗಳನ್ನ ಕೂಡ ನಾವು ನೋಡಿದ್ದೇವೆ. ಅದೇ ರೀತಿ ಕಸ ಗುಡಿಸುವ ಕಾಯಕ ಮಾಡುತ್ತಿದ್ದ ಮಹಿಳೆಯೊಬ್ಬಳು ಜೀವಂತ ನಿದರ್ಶನವಾಗಿದ್ದಾರೆ. ಕೇರಳದ ಆನಂದವಳ್ಳಿ ಎಂಬ ಈ ಮಹಿಳೆ ಮೊದಲಿಗೆ ಕೇರಳದ ಪಥನಪುರಂ ಗ್ರಾಮದ ಗ್ರಾಮಪಂಚಾಯಿತಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು.

Advertisements

ಮುಂದೊಂದು ದಿನ ತಾನು ಕಸ ಗುಡಿಸುವ ಇದೆ ಗ್ರಾಮ ಪಂಚಾಯಿತಿಯ ಮುಖ್ಯಸ್ಥೆಯಾಗುವೆ ಎಂದು ಆನಂದವಳ್ಳಿ ಕನಸು ಕೂಡ ಕಂಡಿರಲಿಲ್ಲ ಅನಿಸುತ್ತೆ. ಆದರೆ ಇಲ್ಲಿ ಯಾರೂ ಬೇಕಾದರೂ ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರಭು ಆಗಬಹುದು ಎಂಬುದನ್ನ ಆಕೆ ಸಾಧಿಸಿ ತೋರಿಸಿದ್ದಾರೆ. ೪೬ವರ್ಷದವರಾಗಿರುವ ಆನಂದವಳ್ಳಿಯವರು ಇತ್ತೀಚೆಗಷ್ಟೇ ನಡೆದ ಗ್ರಾಮಪಂಚಾಯಿತಿ ಚುನಾವಣೆಗೆ ಶೋಷಿತ ವರ್ಗದವರ ಪರವಾಗಿ’ ನಿಂತಿದ್ದು ಜಯ ಕೂಡ ಸಾಧಿಸಿದ್ದಾರೆ. ಈಗ ತಾನು ಕಸ ಗುಡಿಸುತ್ತಿದ್ದ ಗ್ರಾಮಪಂಚಾಯಿತಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ತಾನು ಕಸ ಗುಡಿಸುತ್ತಿದ್ದ ಪಂಚಾಯಿತಿಗೆ ತಾನು ಉನ್ನತ ಮಟ್ಟದ ಸ್ಥಾನಕ್ಕೇರುತ್ತೇನೆ ಎಂದು ನಾನು ಊಹೆ ಕೂಡ ಮಾಡಿರಲೇಇಲ್ಲ ಎಂದು ಅವರು ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಆನಂದವಳ್ಳಿಯವರು ೨೦೧೧ರಿಂದ ಇದೆ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಕೇರಳದ ಪಥನಪುರಂನ ಗ್ರಾಮಪಂಚಾಯಿತಿ ಚುನವಣೆಯಲ್ಲಿ ಅತಿ ಹೆಚ್ಚು ಸೀಟುಗಳನ್ನ ಗೆದ್ದುಕೊಂಡಿದ್ದ ಸಿಪಿಎಂ ನೇತೃತ್ವದ ಎಲ್‌ಡಿ’ಎಫ್ ಆನಂದವಳ್ಳಿಯರನ್ನ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸ್ಸು ಮಾಡಿದೆ ಎಂದು ಹೇಳಲಾಗಿದ್ದು, ಈಗ ತಾನು ಕಸ ಗುಡಿಸುತ್ತಿದ್ದ ಗ್ರಾಮಪಂಚಾಯಿತಿ ಕಚೇರಿಗೆ ಮುಖ್ಯಸ್ಥೆಯಾಗಿರುವುದು ನಮ್ಮ ದೇಶದ ಪ್ರಜಾಪ್ರಭುತ್ವದ ಅತ್ತ್ಯುತ್ತಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಅದಕ್ಕೆ ಹೇಳೋದು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿನಲ್ಲೆ ಶ್ರೇಷ್ಠವಾದದ್ದು.