ನಟ ತಬಲಾ ನಾಣಿಯವರ ಮಗಳು ಕೂಡ ತುಂಬಾನೇ ಫೇಮಸ್! ಪತ್ನಿ ಮಗಳು ಹೇಗಿದ್ದಾರೆ ನೋಡಿ..

Cinema

ಸ್ಯಾಂಡಲ್ವುಡ್ ನ ಖ್ಯಾತ ಹಾಸ್ಯ ನಟ ಮತ್ತು ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟರಲ್ಲಿ ನಟ ತಬಲಾ ನಾಣಿ ಕೂಡ ಒಬ್ಬರು. ಇನ್ನು ತಬಲಾ ನಾಣಿಯವರು ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದ್ದರ ಹಿಂದೆ ಒಂದು ಸ್ಟೋರಿಯೇ ಇದೆ. ಹೌದು, ನಾಟಕಗಳಲ್ಲಿ ಹೆಚ್ಚಾಗಿ ಪಾತ್ರ ಮಾಡುತ್ತಿದ್ದ ನಾಣಿ, ಶ್ರೀಕೃಷ್ಣ ಸಂಧಾನ ಎಂಬ ಸಿನಿಮಾ ಮಾಡಲು ಹೊರಟಾಗ ಸಹಾಯಕರಾಗಿ ಕೆಲಸ ಮಾಡಿದ್ದು ಇದೆ ತಬಲಾ ನಾಣಿಯವರೇ. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದ ತಬಲಾ ನಾಣಿಯವರ ಪ್ರತಿಭೆ ನೋಡಿ ಮೆಚ್ಚಿಕೊಂಡ ನಟಿ ತಾರಾ ಅವರು, ನಿರ್ದೇಶಕರೊಬ್ಬರ ಬಳಿಗೆ ತಬಲಾ ನಾಣಿಯವರನ್ನ ಕಳುಹಿಸುತ್ತಾರೆ. ಇನ್ನು ನಾಟಕಗಳಲ್ಲಿ ಹೆಚ್ಚಾಗಿ ತಬಲ ಬಾರಿಸುತ್ತಿದ್ದ ಕಾರಣ ಅವರಿಗೆ ತಬಲಾ ನಾಣಿ ಎಂಬ ಹೆಸರಿನಿಂದ ಖ್ಯಾತರಾಗಿದ್ದಾರೆ.

ಬಳಿಕ ಗೋಧೂಳಿ ಎಂಬ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ಪ್ರವೇಶ ಮಾಡಿದ ತಬಲಾ ನಾಣಿ, ಬಳಿಕ ನಿರ್ದೇಶಕ ಗುರುಪ್ರಸಾದ್ ಅವರು ನಿರ್ದೇಶನ ಮಾಡಿದ ಸೂಪರ್ ಹಿಟ್ ಸಿನಿಮಾ ಮಠ ಸಿನಿಮಾದ ಮೂಲಕ ನಟ ಜಗ್ಗೇಶ್ ಅವರ ಜೊತೆಯಾಗಿ ಅಭಿನಯಿಸುವ ಮೂಲಕ ಸಿನಿಮಾ ಲೋಕಕ್ಕೆ ಕಾಲಿಡುತ್ತಾರೆ. ಬಳಿಕ ಅದೇ ೨೦೦೯ರ ವರ್ಷದಲ್ಲಿ ಜಗ್ಗೇಶ್ ಅವರು ನಟಿಸಿದ್ದ ಎದ್ದೇಳು ಮಂಜುನಾಥ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಈ ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದು ಗುರುಪ್ರಸಾದ್ ಅವರು. ತಬಲಾ ನಾಣಿಯವರು ಈ ಸಿನಿಮಾದಲ್ಲಿ ಕುರುಡನ ಪಾತ್ರದಲ್ಲಿ ತುಂಬಾ ಅದ್ಭುತವಾಗಿ ನಟಿಸಿದ್ದರು.

ಹೀಗೆ ಮುಂದಿನ ದಿನಗಳಲ್ಲಿ ಕನ್ನಡದ ಹಲವಾರು ಸಿನಿಮಾಗಳಲ್ಲಿ ಕಾಮಿಡಿ ಪಾತ್ರಧಾರಿಯಾಗಿ, ಪೋಷಕ ನಟನಾಗಿ ಜನರನ್ನ ಮನರಂಜಿಸುತ್ತಾ ಬರುತ್ತಿದ್ದಾರೆ ನಟ ತಬಲಾ ನಾಣಿ. ಸಿನಿಮಾಗಳಲ್ಲಿ ಹಾಸ್ಯ ಸಂಭಾಷಣೆಯ ಡೈಲಾಗ್ ಗಳನ್ನ ಹರಳು ಹುರಿದಂತೆ ಮಾತನಾಡುತ್ತಾರೆ. ಇನ್ನು ತಬಲಾ ನಾಣಿ ಮಗಳು ಕೂಡ ಗಾಯಕಿಯಾಗಿದ್ದು ಅದ್ಭುತವಾಗಿ ಹಾಡುತ್ತಾರೆ. ಸದ್ಯಕ್ಕೆ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಬಲಾ ನಾಣಿಯವರು ಸಿನಿಮಾರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನಾವೆಲ್ಲರೂ ಆಶಿಸೋಣ..