ರಸ್ತೆ ಮಧ್ಯೆ ಕನ್ನಡಿಗ ಬೈಕ್ ಸವಾರನನ್ನ ನಿಲ್ಲಿಸಿದ ತಮಿಳುನಾಡಿನ ಪೊಲೀಸ್ರು..ಅಲ್ಲಿ ನಡೆದಿದ್ದನ್ನ ಕೇಳಿದ್ರೆ ಅಚ್ಚರಿ ಪಡ್ತೀರಾ..

Inspire
Advertisements

ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ರಸ್ತೆಯ ಮಧ್ಯೆ ವಾಹನಗಳನಂ ನಿಲ್ಲಿಸಿ ತಪಾಸಣೆ ಮಾಡುತ್ತಿರುವ ಪೋಲೀಸರ ಕ್ರಮದ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಇದಕ್ಕೆ ಕಾರಣವೂ ಇದೆ. ಹೌದು, ಇತ್ತೀಚಿಗೆ ಪೊಲೀಸರು ತಪಾಸಣೆ ಮಾಡುವಾಗ ಮೈಸೂರಿನಲ್ಲಿ ನಡೆದ ಘಟನೆಯೇ ನೈಜ ಉದಾಹರಣೆ. ಇದರ ನಡುವೆಯೇ ಕರ್ನಾಟಕದ ಬೈಕ್ ಸವಾರನೊಬ್ಬ ತಮಿಳುನಾಡಿನ ಪಾಂಡಿಚೇರಿಗೆ ತೆರಳುವ ರಸ್ತೆಯ ಮಧ್ಯೆ ಆತನನ್ನ ಪೊಲೀಸರು ತಡೆದಿದ್ದು ಅವರು ಮಾಡಿರುವ ಕೆಲಸ ಇಂಟರ್ನೆಟ್ ನಲ್ಲಿ ಬಾರಿ ವೈರಲ್ ಆಗಿದ್ದು, ಪೋಲೀಸರ ಈ ಕೆಲಸಕ್ಕೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

[widget id=”custom_html-4″]

Advertisements

ಹೌದು, ಕನ್ನಡದವರೊಬ್ಬರು ತಮ್ಮ ಬೈಕ್ ಮೇಲೆ ಪಾಂಡಿಚೇರಿಗೆ ರಸ್ತೆಯ ಮಧ್ಯೆ ಪೊಲೀಸರು ಬೈಕ್ ನ್ನ ನಿಲ್ಲಿಸಿದ್ದಾರೆ. ಆತ ತನ್ನ ಬೈಕ್ ನಿಲ್ಲಿಸಿದ ಮೇಲೆ ಕರ್ನಾಟಕದವರಾ ಎಂದು ಕೇಳಿದ್ದಾರೆ. ಹೌದು, ನಾನು ಕರ್ನಾಟಕದವನು ಎಂದ ಬೈಕ್ ಸವಾರನಿಗೆ ಪೊಲೀಸಪ್ಪ ತನ್ನ ಕೈನಲಿದ್ದ ಮೆಡಿಸನ್ ನನ್ನ ತೋರಿಸಿ, ಈಗ ತಾನೇ ಸರ್ಕಾರಿ ಬಸ್ ಒಂದು ಮುಂದೆ ಹೋಗಿದ್ದು ಆ ಬಸ್ ನಲ್ಲಿದ್ದ ಮಹಿಳೆಯೊಬ್ಬರಿಂದ ಈ ಔಷಧ ಕೆಳಗೆ ಬಿದ್ದಿದೆ. ಬಸ್ ಫಾಸ್ಟ್ ಆಗಿ ಮುಂದೆ ಹೋಗಿಬಿಟ್ಟ ಕಾರಣ ನಾವು ಕೂಗಿದರು ಅವರಿಗೆ ಕೇಳಿಸಲಿಲ್ಲ. ಹಾಗಾಗಿ ಈ ಔಷಧವನ್ನು ಆ ಮಹಿಳೆಗೆ ತಲುಪಿಸಿ. ಆ ಮಹಿಳೆ ಮುಂದಿನ ಸ್ಟಾಪ್ ನಲ್ಲಿ ಇಳಿಯಲಿದ್ದಾರೆ ಎಂದು ಪೊಲೀಸಪ್ಪ ಕನ್ನಡಿಗ ಬೈಕ್ ಸವಾರನಿಗೆ ಮನವಿ ಮಾಡಿಕೊಂಡಿದ್ದಾರೆ.

[widget id=”custom_html-4″]

ಇನ್ನು ಆ ಮೆಡಿಸನ್ ತೆಗೆದುಕೊಂಡು ವೇಗವಾಗಿ ಹೊರಟ ನಮ್ಮ ಕನ್ನಡಿಗ ಬೈಕ್ ಸವಾರ ಆ ಸರ್ಕಾರಿ ಬಸ್ ನ್ನ ಚೇಸ್ ಮಾಡಿ ಡ್ರೈವರ್ ಗೆ ಬಸ್ ನಿಲ್ಲಿಸುವಂತೆ ಸಿಗ್ನಲ್ ಕೊಟ್ಟು ತ್ನವು ಮುಂದೆ ಬೈಕ್ ನಿಲಿಸಿದ್ದಾನೆ. ಬಳಿಕ ಬಸ್ ನಿಲ್ಲಿಸಿದ ಮೇಲೆ ಪೊಲೀಸರು ಕೊಟ್ಟಿದ್ದ ಆ ಔಷಧವನ್ನ ತನ್ನ ಬ್ಯಾಗ್ ನಿಂದ ತೆಗೆದು ಪೊಲೀಸರು ಆ ತಾಯಿಗೆ ಇದನ್ನ ಕೊಡಲು ಹೇಳಿದ್ದಾರೆ ಎಂದು ಔಷಧವನ್ನ ತಲುಪಿಸಿದಿದ್ದಾನೆ. ಬೈಕ್ ಸವಾರ ಹಾಕಿದ್ದ ಹೆಲ್ಮೆಟ್ ಕ್ಯಾಮರಾದಲ್ಲಿ ಇದೆಲ್ಲಾ ಸಂಪೂರ್ಣವಾಗಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ನೆಟ್ಟಿಗರು ಪೊಲೀಸರು ಹಾಗೂ ಬೈಕ್ ಸವಾರ ಮಾಡಿದ ಕೆಲಸಕ್ಕೆ ಗ್ರೇಟ್ ಎಂದು ಹೊಗಳಿದ್ದಾರೆ.