ಮತ್ತೆ ನೆರವು ನೀಡಿದ ಟಾಟಾ ಸಂಸ್ಥೆ ! ಈ ಬಾರಿ ಸರ್ಕಾರಕ್ಕೆ ಕೊಟ್ಟಿದ್ದೇನು ಗೊತ್ತಾ ?

News
Advertisements

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಯೆಲೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಕೊರೋನಾ ಸೋಂಕಿನ ವಿರುದ್ದದ ಹೋರಾಟಕ್ಕೆ ತಮ್ಮದೇ ಆದ ರೀತಿಯಲ್ಲಿ ನೆರುವು ನೀಡುತ್ತಲೇ ಬಂದಿವೆ. ಅದರಲ್ಲೂ ದೇಶ ಸೇವೆಯ ವಿಷಯದಲ್ಲಿ ಸದಾ ಮುಂದಿರುವ ಟಾಟಾ ಸಂಸ್ಥೆ ಕೊರೋನಾ ಆರಂಭವಾದಾಗಿನಿಂದಲೂ ನೆರವು ನೀಡುತ್ತಲೇ ಬಂದಿದೆ.

ಇನ್ನು ಈಗಾಗಲೇ ಕೊರೋನಾ ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಈಗಾಗಲ್ ಬರೋಬ್ಬರಿ 1500 ಕೋಟಿ ಹಣವನ್ನ ನೀಡಿದೆ. ಇಷ್ಟೇ ಅಲ್ಲದೆ ಇನ್ನು ಹಲವಾರು ರೀತಿಯಲ್ಲಿ ನೆರವು ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವು ನೀಡಿರುವ ಟಾಟಾ ಸಂಸ್ಥೆ ಈಗ ಮಹಾರಾಷ್ಟ್ರ ಸರ್ಕಾರಕ್ಕೆ ಕೋವಿಡ್ 19 ನಿಯಂತ್ರಣಕ್ಕಾಗಿ 100 ವೆಂಟಿಲೇಟರ್ ಹಾಗೂ 20 ಆಂಬ್ಯುಲೆನ್ಸ್ ಗಳನ್ನ ನೀಡಿದೆ.

ಇದೆ ಅಲ್ಲದೆ ಕೊರೋನಾ ನಿಯಂತ್ರಣಕ್ಕಾಗಿ 10 ಕೋಟಿ ವಿರೂಪಾಯಿಗಳನ್ನು ಕೂಡ ಟಾಟಾ ಸಂಸ್ಥೆ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದೆ. ಇನ್ನು 2020ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶಿಸಲಾಗಿದ್ದ ಹೊಸದಾದ ಟಾಟಾ ವಿಂಗ್ ವಾಹನವನ್ನೇ ಅತ್ಯಾಧುನಿಕ ತಂತ್ರಜ್ನ್ಯಾನ ಸೌಲಭ್ಯಗಳಿರುವ ಆಂಬ್ಯುಲೆನ್ಸ್ ಆಗಿ ಪರಿವರ್ತಿಸಲಾಗಿದ್ದು ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದೆ. ಇನ್ನು ದೇಶ ಸೇವೆಯ ವಿಷಯದಲ್ಲಿ ಸದಾ ಮಂಚೂಣಿಯಲ್ಲಿರುವ ನಮ್ಮ ದೇಶದ ಹೆಮ್ಮೆಯ ಟಾಟಾ ಸಂಸ್ಥೆಗೆ ನಮ್ಮದೊಂದು ಸೆಲ್ಯೂಟ್ ಹೇಳೋಣ..ಟಾಟಾ ವಸ್ತುಗಳನ್ನೇ ಖರೀದಿಸೋಣ ಸ್ನೇಹಿತರೆ..