ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಮಗಳು ಈಗ ಹೇಗಿದ್ದಾರೆ ಗೊತ್ತಾ ? ಯಾವ ನಾಯಕ ನಟಿಗೂ ಕಡಿಮೆ ಇಲ್ಲ ನೋಡಿ..

Cinema
Advertisements

ಕನ್ನಡ ಚಿತ್ರರಂಗದ ಖ್ಯಾತ ಕಾಮಿಡಿ ನಟರಲ್ಲಿ ಟೆನಿಸ್ ಕೃಷ್ಣ ಕೂಡ ಒಬ್ಬರು. ತಮ್ಮ ವಿಭಿನ್ನ ರೀತಿಯ ಮಾತಿನ ಶೈಲಿಯಿಂದ ಕನ್ನಡಿಗರನ್ನ ಮನರಂಜಿಸುತ್ತಿರುವ ನಟ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನಿಡಿಯುವ ಹಾಸ್ಯ ನಟ. 5 ಫೆಬ್ರುವರಿ 1961ರಲ್ಲಿ ಹುಟ್ಟಿದ ಟೆನಿಸ್ ಕೃಷ್ಣ ಅವರಿಗೆ ಈಗ ೬೦ ವರ್ಷ ವಯಸ್ಸು. ಇವರ ತಂದೆಯ ಹೆಸರು ಎಂ.ಶಾಮಣ್ಣ ಕೆಂಗಲ್ ಹನುಮಂತಯ್ಯ ಎಂದು. ಇವರು ಖ್ಯಾತ ಟೆನಿಸ್ ತರಭೇತುದಾರರು. 90 ದಶಕದಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟ ಟೆನ್ನಿಸ್ ಕೃಷ್ಣ ಆಗಿನ ಕನ್ನಡ ಸ್ಟಾರ್ ನಟರಿಂದ ಹಿಡಿದು ಹೀಗಿನ ನಟರ ಚಿತ್ರಗಳಲ್ಲೂ ಹಾಸ್ಯ ನಟನಾಗಿ ಅಭಿನಯಿಸಿದ್ದಾರೆ. 1994ರಲ್ಲಿ ಬಿಡುಗಡೆಗೊಂಡ ‘ಅಪ್ಪ ನಂಜಪ್ಪ ಮಗ ಗುಂಜಪ್ಪ’ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.

[widget id=”custom_html-4″]

Advertisements

ಇನ್ನು ಇವರಿಗೆ ಟೆನಿಸ್ ಕೃಷ್ಣ ಎಂದು ಹೆಸರು ಬರಲು ಒಂದು ಕಾರಣವೂ ಇದೆ. ಟೆನ್ನಿಸ್ ಆಟದ ಮೇಲೆ ತುಂಬಾ ಆಸಕ್ತಿ ಇದ್ದ ಇವರು ಟೆನ್ನಿಸ್ ಆಟದ ತರಭೇತುದಾರನಾಗಿಯೂ ಕೆಲಸ ಮಾಡಿದ್ದಾರೆ. ಹಾಗಾಗಿಯೇ ಇವರು ಟೆನ್ನಿಸ್ ಕೃಷ್ಣ ಅಂತಲೇ ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗಿದ್ದಾರೆ. ಇನ್ನು ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಅಂದಿನ ಅಣ್ಣಾವ್ರು ಸೇರಿದಂತೆ ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ, ಈಗಿನ ನಟರುಗಳಾದ ಶಿವಣ್ಣ, ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವಾರು ನಟರುಗಳ ಜೊತೆ ನಟಿಸಿದ್ದಾರೆ ಈ ಕಾಮಿಡಿ ನಟ. ಇನ್ನು ಕನ್ನಡ ಚಿತ್ರರಂಗದಲ್ಲಿ ಇದುವರೆಗೂ 600ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

[widget id=”custom_html-4″]

ಇನ್ನು ಇತ್ತೀಚಿಗೆ ಟೆನಿಸ್ ಕೃಷ್ಣ ಅವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಕೆಲ ಕಿರುತೆರೆಯ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಸಿನಿಮಾ ಕಿರುತೆರೆ ಮಾತ್ರವಲ್ಲದೆ ಹಾಡುಗಾರ ಕೂಡ ಹೌದು. ಇನ್ನು ಟೆನಿಸ್ ಕೃಷ್ಣ ಅವರ ವೈಕ್ತಿಕ ವಿಚಾರಕ್ಕೆ ಬಂದರೆ, ರಂಜಿತಾ ಎಂಬ ಮುದ್ದಾದ ಮಗಳಿದ್ದಾಳೆ. ಯಾವ ಹೀರೋಯಿನ್ ಗೂ ಕೂಡ ಕಡಿಮೆ ಅಲ್ಲ ಅಂತ ಅನಿಸಿದ್ರೂ ರಂಜಿತಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಈಗಾಗಲೇ ಟೆನಿಸ್ ಕೃಷ್ಣ ಪುತ್ರಿ ರಂಜಿತಾ ಅವರಿಗೆ ಮದುವೆ ಆಗಿದ್ದು ಪ್ರೈವೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಖ್ಯಾತ ಹಾಸ್ಯ ನಟ ಟೆನಿಸ್ ಕೃಷ್ಣ ಅವರಿಗೆ ಈಗ ಸಿನಿಮಾ ರಂಗದಲ್ಲಿ ಅವಕಾಶಗಳು ಸಿಗದೇ ಇರೋದು ದುರಾದ್ರಷ್ಟಕರವಾದ ವಿಷಯ..