​​ಡಿಸಿ ರೋಹಿಣಿ ಸಿಂಧೂರಿ ಅವರ ಸುಂದರ ಕುಟುಂಬ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ 31 ಜನ ಜಿಲ್ಲಾಧಿಕಾರಿಗಳು ಇದ್ದಾರೆ. ಅದರಲ್ಲಿ DC ರೋಹಿಣಿ ಸಿಂಧೂರಿ‌ ಅವರು ಪ್ರತಿನಿತ್ಯ ಚರ್ಚೆಯಲ್ಲಿ ಇರುತ್ತಾರೆ. ಇವರು ಮಾಡುವ ಕೆಲಸವನ್ನ ನೋಡಿ ತುಂಬಾ ಜನರು ಯೂತ್ ಐಕಾನ್ ಸಹ ಹಾಗಿದ್ದಾರೆ. ಹಾಗೆಯೇ ಸಾಕಷ್ಟು ಜನರಿಗೆ ಇವರು ಸ್ಪೂರ್ತಿ ಕೂಡ ಆಗಿದ್ದಾರೆ ಜಿಲ್ಲಾಧಿಕಾರಿ ಅಂದ್ರೆ ಇವರ ಹಾಗೆ ಇರಬೇಕು ಎಂದು ಸಾಕಷ್ಟು ಜನರು ಇವರನ್ನು ನೋಡಿ ಹಾಡಿ ಹೊಗಳಿದ್ದಾರೆ. ರೋಹಿಣಿ ಸಿಂಧೂರಿ ಅವರು ಮೂಲತಃ ಆಂದ್ರ ಪ್ರದೇಶದವರು ಅಲ್ಲಿಂದ ಕರ್ನಾಟಕಕ್ಕೆ ಬಂದು ತುಂಬಾ ಚನ್ನಾಗಿ ಕನ್ನಡ ಭಾಷೆಯನ್ನ ಕಲಿತುಕೊಂಡರು. ಇವರಿಗೆ ಕನ್ನಡ ಭಾಷೆ ಅಂದ್ರೆ ರೋಹಿಣಿ ಅವರಿಗೆ ತುಂಬಾನೇ ಇಷ್ಡವಂತೆ.. ಹಾಗಾದರೆ ರೋಹಿಣಿ ಸಿಂಧೂರಿ ಅವರ ಜೀವನ ಹಾಗು ಅವರ ಕುಟುಂಬ ಹೇಗಿದೆ ಎಂದು ನೋಡೋಣ ಬನ್ನಿ..

ರೋಹಿಣಿ ಸಿಂಧೂರಿ ಅವರ ನಿಜವಾದ ಹೆಸರು ರೋಹಿಣಿ ಸಿಂಧೂರಿ ದಾಸರಿ ಇವರು ಆಂದ್ರಪ್ರದೇಶದಲ್ಲಿ ಮೇ‌‌ 30/1984 ರಲ್ಲಿ ಜನಿಸಿದರು ಇವರು ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಮುಗಿಸಿದ್ದಾರೆ. ಅದಾದನಂತರ ಯು.ಪಿ.ಎಸ್.ಸಿ ಪರೀಕ್ಷೆ ಬರೆದು 43ನೇ‌ ರ್ಯಾಂಕ್ ಪಡೆದುಕೊಂಡಿದ್ದರು.. ನಂತರ ಇವರು 2009 ಬ್ಯಾಚ್ ನಲ್ಲಿ‌ ಐ.ಎ.ಎಸ್ ಅಧಿಕಾರಿ ಆಗಿ‌ ಆಯ್ಕೆ ಆದರು ಇವರಿಗೆ ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ತುಂಬಾ ಸ್ಪಷ್ಟವಾಗಿ ಮಾತನಾಡುತ್ತಾರೆ. ಇನ್ನೂ ಅಗಸ್ಟ್ 2011 ರಲ್ಲಿ ತುಮಕೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಅಧಿಕಾರವನ್ನ ನೀಡಲಾಯಿತು. ನಂತರ ಇವರು ಹಾಸನ ಜಿಲ್ಲೆಯ ಡಿಸಿ ಆಗಿ ಅಧಿಕಾರವನ್ನ ಸ್ವೀಕರಿಸಿದರು.. ಇದೀಗ ಮೈಸೂರು ಜಿಲ್ಲೆಯ ಡಿಸಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..

ರೋಹಿಣಿ ಸಿಂಧೂರಿ ಅವರು ಆಂಧ್ರದವರಾದ ಸುಧೀರ್ ರೆಡ್ಡಿ ಅವರನ್ನ‌ ಮದುವೆ ಆಗಿದ್ದಾರೆ.. ಇನ್ನೂ‌‌ ರೋಹಿಣಿ ಅವರ ಗಂಡ ಸುಧೀರ್ ರೆಡ್ಡಿ ಅವರು ಸಾಫ್ಟ್ವೇರ್ ಇಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತಿದ್ದಾರೆ ಇನ್ನೂ‌ ಈ ದಂಪತಿಗಳಿಗೆ ಒಂದು ಗಂಡು ಮತ್ತು ಹೆಣ್ಣು ಮಗುವಿದೆ ರೋಹಿಣಿ ಸಿಂಧೂರಿ ಅವರಿಗೆ ಒಬ್ಬ ಸ್ವಂತ ತಂಗಿ ಕೂಡ‌ ಇದ್ದಾರೆ ಅವರ ಹೆಸರು ಪ್ರಿಯಾಂಕಾ ರೆಡ್ಡಿ ಅಂತ‌ ಇವರು‌ ಬೆಂಗಳೂರಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ..‌ ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ಅವರಂಥ ಖಡಕ್ ಅಧಿಕಾರಿಯ ಸೇವೆ ಎಲ್ಲಾ ಕ್ಷೇತ್ರಗಳಿಗೂ ಎಲ್ಲಾ ಕಡೆಗಳಿಗೂ ಅವಶ್ಯಕತೆ ಇದೆ. ಸ್ನೇಹಿತರೆ ರೋಹಿಣಿ ಸಿಂಧೂರಿ ಅವರ ಮಾಡುವ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..