ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ನಟ ಗುರುನಂದನ್ ಅವರು ಕಟ್ಟಿಸಿದ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ಭಾರತೀಯ ಚಿತ್ರ ರಂಗದ ಖ್ಯಾತ ನಟ ಗುರುನಂದನ್. ಇವರನ್ನ ಹೆಚ್ಚಾಗಿ ಫಸ್ಟ್ ರ‍್ಯಾಂಕ್ ರಾಜು ಅಂತ ಹೇಳಿದ್ರೆ ಮೊದಲು ಕಣ್ಮುಂದೆ ಬರೋದು ಈ ನಟ ಮಾತ್ರವೇ. ಯಾಕೆಂದರೆ ಫಸ್ಟ್ ರ‍್ಯಾಂಕ್ ರಾಜು ಸಿನಿಮಾದಲ್ಲಿ ಇವರು ಕ್ರಿಯೇಟ್ ಮಾಡಿದ ಹವಾ ಅಷ್ಟಿಷ್ಟಲ್ಲ ಆದರೆ ಈ ಸಿನಿಮಾ ಗುರುನಂದನ್ ಅವರಿಗೆ ಸೈಫ್ ಹಾಗು ಹಿಟ್ ಕೊಟ್ಟ ಸಿನಿಮಾ ಅಂತಾನೇ ಹೇಳಬಹುದು.. ಗುರುನಂದನ್ ಅವರು ಡಿಸೆಂಬರ್ 30/1987 ರಲ್ಲಿ ಚಿಕ್ಕ ಮಂಗಳೂರಿನ ಮೂಡಿಗೆರೆಯಲ್ಲಿ‌ ಹುಟ್ಟಿದರು ಚಿಕ್ಕ ವಯಸ್ಸಿನಿಂದಲೇ ಸಿನಿಮಾ ಪರದೆಯ ಮೇಲೆ ಮಿಂಚಬೇಕು ಎಂಬ ಕನಸು ಕಂಡಿದ್ದರು ಆಗಾಗಿ ಎಂಟನೇ ತರಗತಿ ಓದುತ್ತಿದ್ದಾಗಲೇ ಮನೆ ಬಿಟ್ಟು ಬೆಂಗಳೂರಿಗೆ ಬಂದು ಸಿನಿಮಾದಲ್ಲಿ ನಟಿಸಲು ತುಂಬಾನೇ ಪ್ರಯತ್ನ ಪಟ್ಟರು.. ಆದರೆ ಅದು ಸಾದ್ಯಾವಾಗಲಿಲ್ಲ ವಿಧಿ ಇಲ್ಲದೆ ಮತ್ತೆ ಊರಿಗೆ ಹೊರಟ ಇವರು ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು..

ಇನ್ನೂ ಪದವಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ಮತ್ತೆ ಬೆಂಗಳೂರಿಗೆ ಬಂದು ಸಿನಿಮಾದಲ್ಲಿ ಒಂದು ಅವಕಾಶಕ್ಕಾಗಿ ಎಲ್ಲಿಲ್ಲದ ಕಷ್ಟ ಪಟ್ಟು ಅಂತು ತಮ್ಮ‌ ಗುರಿಯನ್ನ ಮುಟ್ಟಿದರುವ.. ಈ ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಇವರಿಗೆ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಕೊಡ್ತು ನಂತರ ಇವರ ಜೀವನವೇ ಬದಲಾವಣೆ ಆಯಿತು.. ಈಗ ತಮ್ಮ ಕನಸಿನ ಮನೆಯನ್ನ ತಮ್ಮ ಹುಟ್ಟೂರಿನಲ್ಲಿ ಕಟ್ಟಲು ನಿರ್ಧರಿಸಿದ ನಟ ಗುರುನಂದನ್ ಸುಂದರವಾದ ಪಕೃತಿಯ ಮಧ್ಯೆ ಮಾಡ್ರನ್ ಶೈಲಿಯಲ್ಲಿ ವಿಶಾಲವಾದ ಹಾಗು ಸುಂದರವಾದ ಮನೆಯನ್ನ ಕಟ್ಟಿದ್ದು ಇತ್ತಿಚೀನ ದಿನಗಳಲ್ಲಿ ಸರಳವಾಗಿ ತಮ್ಮ ಕುಟುಂಬದವರ ಜೊತೆ ಮನೆಯ ಗೃಹ ಪ್ರವೇಶವನ್ನ ಮಾಡಿದ್ದಾರೆ.. ಮನೆಯ ಸುತ್ತಲೂ ಹಸಿರಿನ ನೋಟ ಅದರ ಮಧ್ಯೆ ಬೆಳಕಿನ ಹಾಗೆ ಕಾಣುತ್ತದೆ ಗುರುನಂದನ್ ಕಟ್ಟಿಸಿದ ಈ ಮನೆ..

ಗುರುನಂದನ್ ಅವರು ಕಟ್ಟಿಸಿದ ಮನೆ ಹಾಗು ಸುತ್ತಲಿನ ಪರಿಸರ ನೋಡೋದಕ್ಕೆ ತುಂಬಾನೇ ಆಕರ್ಷಣೆಯಾಗಿದ್ದು ಕಣ್ಣಿಗೆ ತಂಪು ನೀಡುತ್ತದೆ.. ತಮ್ಮ ಕನಸಿನ ಮನೆ ಕಟ್ಟಿದ ಖುಷಿಯಲ್ಲಿ ನಟ ಗುರುನಂದನ್ ಮನೆಯ ಗೃಹ ಪ್ರವೇಶದ ದಿನ ತುಂಬಾ ಸಂತೋಷದಿಂದ ಓಡಾಡುತ್ತಿದ್ದರು. ಸಿನಿಮಾ ಕನಸನ್ನು ಕಂಡು ಸತತ ವೈಫಲ್ಯಗಳ ಮಧ್ಯೆ ಮತ್ತೆ ಎಂದು ಬಂದು ಅದರಲ್ಲಿ ಯಶಸ್ಸು ಸಾಧಿಸಿದ ನಟ ಗುರುನಂದನ್ ಹಠ ಮತ್ತು ಧೈರ್ಯವನ್ನ ನಾವು ಮೆಚ್ಚಲೇಬೇಕು.. ನೀವು ಕೂಡ ನಟ ಗುರುನಂದನ್ ಅವರ ಅಪ್ಪಟ ಅಭಿಮಾನಿ ಆಗಿದ್ದರೆ ಫಸ್ಟ್ ರ‍್ಯಾಂಕ್ ರಾಜು ಸಿನಿಮಾದಲ್ಲಿ ಇವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..