ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಬಗ್ಗೆ ತಿಳಿಯದ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು! ಏನು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಭಾರತೀಯ ಕನ್ನಡ ಚಲನಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ಎಂದು ಬಿರುದು ಪಡೆದ ನಟ ಶಿವರಾಜ್ ಕುಮಾರ್‌ ಅವರು. ಇವರು ಜುಲೈ, 12/1962ರಲ್ಲಿ ಚೆನ್ನೈನಲ್ಲಿ ಜನಿಸಿದರು ಡಾ ರಾಜ್‍ಕುಮಾರ್ ಅವರು ತಮ್ಮ ಮಗನಿಗೆ‌ ಶಿವಪುಟ್ಟ ಸ್ವಾಮಿ ಎಂದು ತಮ್ಮ ತಂದೆ ಸಿಂಗನಲ್ಲೂರು ಪುಟ್ಟ ಸ್ವಾಮಿ ಎಂದು ಅವರ ಜ್ಞಾಪಕಾರ್ಥವಾಗಿ ಅವರ‌‌ ಹೆಸರನ್ನು ಮಗನಿಗೆ ಇಟ್ಟರು ಬಾಲ್ಯದಿಂದಲೇ ಶಿಸ್ತು ಸಂಯಮವನ್ನು ಬೆಳೆಸಿಕೊಂಡಿದ ಶಿವರಾಜ್ ಕುಮಾರ್ ಅವರು ಕ್ರೀಡಾ ಚಟುವಟಿಕೆಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದರು.. ಇನ್ನೂ ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ ಕುಮಾರ್ ಅವರು 1986 ರಲ್ಲಿ ಆನಂದ್ ಸಿನಿಮಾದ ಮೂಲಕ‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು..

ಇದ್ದಾದ ಮೇಲೆ ರಥಸಪ್ತಮಿ, ಮನಮೆಚ್ಚಿದ ಹುಡುಗಿ, ಸಿನಿಮಾಗಳು ಶತದಿನೋತ್ಸವ ಕಂಡವು ಇನ್ನೂ‌ ಶಿವಣ್ಣ ಅವರು‌ ನಟಿಸಿರುವ ಮೂರು ಸಿನಿಮಾಗಳು ಕೂಡ ಸತತವಾಗಿ ಶತದಿನೋತ್ಸವ ಕಂಡ ನಂತರ ಶಿವರಾಜ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಪಡೆದರು.. ಈ ಸಿನಿಮಾಗಳ ನಂತರ ರಣರಂಗ ಸಿನಿಮಾ ಯಶಸ್ಸನ್ನು ಕಂಡಿದ್ದು ಬಿಟ್ಟರೆ ಆ ಸಮಯದಲ್ಲಿ ಬೇರೆ ಯಾವುದೇ ಚಿತ್ರರಂಗಳು ಕೂ ಶಿವಣ್ಣ ಅವರಿಗೆ ಅಷ್ಟೊಂದು ಯಶಸ್ಸು ತಂದು ಕೊಡಲಿಲ್ಲ ನಂತರ ಇವರಿಗೆ ನಿಜಕ್ಕೂ ಬ್ರೇಕ್ ಕೊಟ್ಟ ಚಿತ್ರ ಓಂ ಸಿನಿಮಾ ಹೌದು ರೀಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ ಓಂ ಸಿನಿಮಾ ಭೂಗತ ಲೋಕದ ಕಥೆಯನ್ನು ಆದರಿಸಿದ ಸಿನಿಮವಾಗಿತ್ತು

ಈ ಓಂ ಸಿನಿಮಾ1995 ರಲ್ಲಿ ಬಿಡುಗಡೆ ಆಯಿತು.. ಇದ್ದಾದ ನಂತರ ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, AK47, ಜೋಗಿ, ಇನ್ನೂ‌ ಅನೇಕ ಸಿನಿಮಾಗಳು ಕನ್ನಡ ಸಿನಿಮಾ ರಂಗದಲ್ಲಿ ಸಾಕು ಯಶಸ್ಸನ್ನು ಕಂಡವು.. ಇನ್ನೂ ಶಿವಣ್ಣ ಅವರು‌ ಕನ್ನಡದಲ್ಲಿ 100‌ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.. ಇಷ್ಟೇ ಅಲ್ಲದೇ ಆಸೆಗೊಬ್ಬ ಮೀಸೆಗೊಬ್ಬ, ಅಂಡಮಾನ್, ನಟಸರ್ವಭೌಮ ಸಿನಿಮಾಗಳಲ್ಲಿ ಕಾಯನ್ನ ಕೂಡ ಮಾಡಿದ್ದಾರೆ. ಶಿವಣ್ಣ ಅವರಿಗೆ ಓಂ‌ ಹೃದಯ ಹೃದಯ ಚಿಗುರಿದ ಕನಸು ಜೋಗಿ ಸಿನಿಮಾಗಳಿಗೆ ಅತ್ಯುತ್ತಮ ನಟ ಎಂದು ರಾಜ್ಯ ಪ್ರಶಸ್ತಿ ಅಲ್ಲದೆ ಆರ್ಯ ಭಟ್ಟ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ನಟ ಶಿವಣ್ಣ ಅವರಿಗೆ ಸಿಕ್ಕಿದೆ.. ಸ್ನೇಹಿತರೆ ನಟ‌ ಶಿವರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..