ಚಿರತೆ ಹೈನಾದಿಂದ ತನ್ನ ಪ್ರಾ’ಣ ಉಳಿಸಿಕೊಳ್ಳುವ ಸಲುವಾಗಿ ಈ ಜಿಂಕೆ ಮಾಡಿದ ನಾಟಕ ನೋಡಿ ದಂಗಾದ ನೆಟ್ಟಿಗರು !

Uncategorized
Advertisements

ಈ ಭೂಮಿಯ ಅತೀ ಬುದ್ದಿವಂತ ಪ್ರಾಣಿ ಮನುಷ್ಯ ಎಂದ ಹೇಳಲಾಗುತ್ತದೆ. ಆದರೆ ಪ್ರಾಣಿಗಳು ಕೆಲವೊಮ್ಮೆ ತೋರುವ ಚತುರತೆ, ಬುದ್ಧಿವಂತಿಕೆ ಮುಂದೆ ಮನುಷ್ಯ ಏನೇನೂ ಇಲ್ಲ ಎಂದರೆ ತಪ್ಪಾಗಲಾರದು. ಇದಕ್ಕೆ ನಿದರ್ಶನವೆಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಂಕೆಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಜಿಂಕೆ ಆಡಿದ ನಾಟಕ ಹಾಗೂ ಅದರ ಬುದ್ದಿವಂತಿಕೆ ನೋಡಿ ನೆಟ್ಟಿಗರು ಅಚ್ಚರಿಗೀಡಾಗಿದ್ದಾರೆ.

[widget id=”custom_html-4″]

ಹೌದು, ಅರಣ್ಯ ಅಧಿಕಾರಿಯೊಬ್ಬರು ಹಳೆಯ ವಿಡಿಯೋವೊಂದನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಜಿಂಕೆ ಪ್ರದರ್ಶನ ಮಾಡಿರುವ ಬುದ್ದಿವಂತಿಕೆ ನೋಡಿ ಮನುಷ್ಯರೇ ತಲೆ ತಗ್ಗಿಸುವಂತಾಗಿದೆ. ಇನ್ನು ವಿಡಿಯೋದಲ್ಲಿರುವನಂತೆ ಈ ಜಿಂಕೆ ಮೊದಲಿಗೆ ಚಿರತೆ ಕೈಗೆ ಸಿಕ್ಕಿ ಬೀಳುತ್ತದೆ. ಆಗ ಜಿಂಕೆ ತಾನು ಪ್ರಾ’ಣ ಹೋದಂತೆ ಅಭಿನಯ ಮಾಡುತ್ತೆ. ಇದೆ ವೇಳೆ ಅಲ್ಲಿಗೆ ಬಂದ ಹೈನಾ, ಆ ಜಿಂಕೆಯನ್ನ ತಾನೇ ತಿನ್ನುವ ಸಲುವಾಗಿ ಚಿರತೆಯ ಮೇಲೆ ಜ’ಗಳಕ್ಕೆ ನಿಲ್ಲುತ್ತದೆ.

[widget id=”custom_html-4″]

ಇನ್ನು ಹೈನಾ ಮತ್ತು ಚಿರತೆಯ ನಡುವೆ ಜ’ಗಳ ಏರ್ಪಟ್ಟು ಹೈನಾ ಚಿರತೆಯನ್ನ ಅಲ್ಲಿಂದ ಓಡಿಸುಬಿಡುತ್ತದೆ. ಇಬ್ಬರ ಜ’ಗಳ ಮೂರನೆಯವನಿಗೆ ಲಾಭ ಎಂಬ ಗಾದೆ ಮಾತಿನಂತೆ, ಜಿಂಕೆ ಹೈನಾ ನಡುವೆ ಜ’ಗಳ ನಡೆಯುತ್ತಿರುವಾಗಲೇ ಸ’ತ್ತಂತೆ ಮಲಗಿದ್ದ ಜಿಂಕೆ ಅಲ್ಲಿಂದ ಎದ್ದು ಓಡಿಬಿಡುತ್ತದೆ. ಇದನ್ನ ಕಂಡ ಹೈನಾಗೂ ಕೂಡ ಶಾಕ್ ಆಗಿರುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಈ ವಿಡಿಯೋವನ್ನ ನೋಡಿದ ನೆಟ್ಟಿಗರು, ಅಬ್ಬಬ್ಬಾ ಏನಪ್ಪಾ ಈ ಜಿಂಕೆಯ ಅಭಿನಯಕ್ಕೆ ಆಸ್ಕರ್ ಕೊಟ್ಟರೂ ತಪ್ಪಿಲ್ಲ ಎಂಬ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.