100 ಅಲ್ಲ 400 ಕೋಟಿನೂ ಅಲ್ಲ ಈ ದೈತ್ಯದೇಹಿ ನಟನ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ !

Kannada News - Cinema

ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಮಾಜಿ ಕುಸ್ತಿಪಟು ಹಾಗೂ ಹಾಲಿವುಡ್ ನಟ ದಿ ರಾಕ್’ ಜಾನ್ಸನ್ ಜಗತ್ತಿನ ಅತೀ ಹೆಚ್ಚು ಸಂಭಾವನೆ ಪಡೆಯುವ ಮೊದಲಿಗರಾಗಿದ್ದಾರೆ.

ಗಳಿಕೆಯಲ್ಲಿ ಎಲ್ಲಾ ಹಾಲಿವುಡ್ ಸೂಪರ್ ಸ್ಟಾರ್ ಗಳನ್ನು ಹಿಂದಿಕ್ಕಿರುವ ದಿ ರಾಕ್ ಜಗತ್ತಿನ ಅತೀ ಸಂಭಾವನೆ ಪಡೆದ ನಟರಲ್ಲಿ ಮೊದಲಿಗರು ಎಂದು ಫೋರ್ಬ್ಸ್ ಸಂಸ್ಥೆ ಹೇಳಿದೆ. ಜೂನ್ 1 2018ರಿಂದ 2019 ಜೂನ್ 1ರ ಅವಧಿಯಲ್ಲಿ ಪಡೆದಿರುವ ಸಂಭಾವನೆಯನ್ನು ಲೆಕ್ಕದ ಪ್ರಖಾರ ದೈತ್ಯದೇಹಿ ಹಾಲಿವುಡ್‍ನ ದಿ ರಾಕ್ 89.3 ದಶಲಕ್ಷ ಡಾಲರ್ ಅಂದರೆ 640 ಕೋಟಿ ರೂ. ಸಂಭಾವನೆ ಪಡೆದು ಮೊದಲ ಸ್ಥಾನದಲ್ಲಿದ್ದಾರೆ.

wwe ನಲ್ಲಿ ಮಿಂಚಿದ್ದ ದಿ ರಾಕ್ ದೊಡ್ಡ ದೊಡ್ಡ ಅಜಾನುಭಾಹು ಎದುರಾಳಿ ಫೈಟರ್ ಗಳನ್ನು ಮಣಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಮಮ್ಮಿ ರಿಟನ್ರ್ಸ್ ಚಿತ್ರದ ಮೂಲಕ ಹಾಲಿವುಡ್ ಚಿತ್ರರಂಗ ಪ್ರವೇಶ ಮಾಡಿದ ರಾಕ್ ದಿ ಡ್ವೈನ್ ಜಾನ್ಸನ್ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ್ದರು. ಫಾಸ್ಟ್ ಅಂಡ್ ಫ್ಯೂರಿಯಸ್ ಸೇರಿದಂತೆ ಹಾಲಿವುಡ್ ನ ಹಲವಾರು ಚಿತ್ರಗಳಲ್ಲಿ ನಟಿಸಿರುವ ರಾಕ್ ಲಕ್ಷಾಂತರ ಅಭಿಮಾನಿಗಳನ್ನು ಪಡೆದು ವಿಶ್ವಖ್ಯಾತ ನಟನಾಗನಾಗಿದ್ದಾನೆ. ಹಾಲಿವುಡ್‍ನ ಪ್ರಖ್ಯಾತ ನಟರಾದ ಬ್ರಾಡ್ಲೆ ಕೂಪರ್, ರಾಬರ್ಟ್ ಡೌನ್ನೆ ಜ್ಯೂನಿಯರ್ಅವರನ್ನು ಸಹ ರಾಕ್ ಸಂಭಾವನೆಯಲ್ಲಿ ಹಿಂದಿಕ್ಕಿದ್ದಾರೆ.