ನಿಮ್ಮ ಮನೆಯೊಳಗೇ ಈ ಪ್ರಾಣಿಗಳು ಬಂದ್ರೆ ಮಹಾಲಕ್ಷ್ಮಿಯೇ ಬಂದ ಹಾಗೇ ! ಯಾವ ಪ್ರಾಣಿ ಮನೆಯೊಳಗೆ ಬಂದ್ರೆ ಏನಾಗುತ್ತೆ ನೋಡಿ..

Adhyatma

ಸ್ನೇಹಿತರೇ, ಮನೆಯೊಳಗೇ ಪ್ರಾಣಿ, ಪಕ್ಷಿಗಳು ಮನೆಯೊಳಗೇ ಬರೋದು ಹೋಗೋದು ಸಾಮಾನ್ಯ. ಹಾಗಾದ್ರೆ ಅವು ಮನೆಯೊಳಗೇ ಬಂದ್ರೆ ಶುಭನೋ ಅಶಭುನೋ ಅನ್ನೋ ಗೊಂದಲ ನಮ್ಮಲ್ಲಿ ಇದ್ದೆ ಇರುತ್ತದೆ. ಇಲ್ಲಿ ಒಂದಂತೂ ಹೇಳಲು ಇಷ್ಟಪಡುತ್ತೇವೆ ಯಾವುದೇ ಪ್ರಾಣಿ ಪಕ್ಷಿಗಳಾಗಲು ಕೆಟ್ಟವಲ್ಲ, ಅದರಲ್ಲೂ ಮನುಷ್ಯನಷ್ಟು ಕೆಟ್ಟವಂತೂ ಅಲಲ್ವೇ ಅಲ್ಲ. ನಾವು ಆ ಪ್ರಾಣಿಗಳಿಗೆ ತೊಂದರೆ ಕೊಡುತ್ತೇವೆ ಎಂಬ ಕಾರಣದಿಂದಲೇ ಅವು ನಮ್ಮ ಮೇಲೆ ಎದುರು ಬೀಳುವ ಸಧ್ಯತೆಗಳೇ ಹೆಚ್ಚಿರುತ್ತವೆ. ಒಂದು ರೀತಿಯಲ್ಲಿ ಮನುಷ್ಯನಿಗೆ ಒಳ್ಳೇದು ಕೆಟ್ಟದರ ಬಗ್ಗೆ ಸೂಚನೆ ಕೊಡುವ ಯೋಚನೆ ಇರುವುದೇ ಪ್ರಾಣಿಗಳಲ್ಲಿ. ಹಾಗಾದ್ರೆ ಯಾವ ಪ್ರಾಣಿಯಿಂದ ಏನು ಅದೃಷ್ಟ ಎಂಬುದನ್ನ ತಿಳಿಯೋಣ ಬನ್ನಿ..

ಜರಿ..ಈ ಪ್ರಾಣಿಯನ್ನ ಶತಪದಿ ಅಂತಲೂ ಕರೆಯುತ್ತಾರೆ. ಅಂದರೆ ನೂರು ಪಾದಗಳುಳ್ಳ ಪ್ರಾಣಿ ಅಂತ. ಇದಕ್ಕೆ ಲಕ್ಷ್ಮಿ ಚೇಳು ಅಂತಲೂ ಕರೆಯಲಾಗುತ್ತೆ. ಜರಿ ಮನೆ ಒಳಗಡೆ ಬಂದ್ರೆ ಅದನ್ನ ಹೊಡೆದು ಆಚೆ ಹಾಕೋದಕ್ಕೆ ಅನೇಕರು ಪ್ರಯತ್ನ ಪಡುತ್ತಾರೆ. ಆದರೆ ಜರಿ ಮನೆಯೊಳಗಡೆ ಬಂದ್ರೆ ಶುಭ ಸೂಚಕ ಅಂತ ತಿಳಿಯಬೇಕು. ಸಾಕ್ಷಾತ್ ಲಕ್ಷ್ಮಿ ಮನೆಯೊಳಗೇ ಬಂದಂತೆ. ಜರಿ ಬಂದ ಮೂರರಿಂದ ಆರು ತಿಂಗಳಲ್ಲಿ ಆರ್ಥಿಕವಾಗಲಿ ಬೇರೆ ಯಾವುದೇ ರೀತಿಯಾಗಲು ಒಳ್ಳೆಯದಾಗುತ್ತೆ ಎಂಬ ಸೂಚನೆ ಜರಿ ಕೊಡುತ್ತೆ.

ಇನ್ನು ಪ್ರತಿ ಮನೆ ಮನೆಗಳಲ್ಲೂ ಬರುವ ಪ್ರಾಣಿ ಎಂದರೆ ಅದು ಇರುವೆ. ಅದು ಕಪ್ಪು ಇರುವೆ ಅಥ್ವಾ ಕೆಂಪು ಇರುವೆ ಆಗಿರಬಹುದು. ಅದರಲ್ಲೂ ಈ ಕಪ್ಪು ಇರುವೆ ಸಾಲುಸಾಲಾಗಿ ಗುಂಪು ಕಟ್ಟಿಕೊಂಡು ಮನೆಯ ದ್ವಾರ ಬಾಗಿಲುಗಳಲ್ಲಿ ಓಡಾಡುತ್ತಿರುತ್ತವೆ. ನೀವು ಕಪ್ಪು ಇರುವೆಯನ್ನ ಸರಿಯಾಗಿ ಗಮನಿಸಿದ್ದೆ ಆದರೆ, ಕಪ್ಪು ಇರುವೆಗಳು ಬಾಯಿಯಲ್ಲಿ ಬಿಳಿಯ ಮೊಟ್ಟೆಗಳನ್ನ ಹಿಡಿದುಕೊಂಡು ಓಡಾಡುತ್ತಿರುತ್ತವೆ. ಇದು ನಿಮ್ಮ ಮನೆಗೆ ಶುಭ ಸೂಚಕವಾಗಿದ್ದು ಮಹಾಲಕ್ಷ್ಮಿಯ ಅನುಗ್ರಹ ನಿಮ್ಮ ಮನೆಯವರ ಮೇಲೆ ಸದಾ ಇರುತ್ತದೆ. ಹಣಕಾಸು ಬರುವುದರ ಜೊತೆಗೆ ನಿಮ್ಮ ಮನೆಯಲಿ ಸುಖ ಶಾಂತಿ ನೆಲಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಕಪ್ಪು ಇರುವೆಗಳನ್ನ ತುಳಿದು ನಾಶ ಮಾಡುವ ಬದಲು ಅವುಗಳಿಗೆ ಸಕ್ಕರೆ ಹಾಕಿ ಒಳ್ಳೆಯದಾಗುತ್ತದೆ. ಬಳಿಕ ಅವು ಹೊರಟುಹೋಗುತ್ತವೆ. ಇನ್ನು ಕೆಂಪು ಇರುವೆಗಳು ಕೂಡ ಮನೆಗೆ ಅದ್ರಷ್ಟ ಎಂದು ಹೇಳಲಾಗಿದೆ.

ಇನ್ನು ಸಾಮಾನ್ಯವಾಗಿ ಅನೇಕರು ಪರಿವಾಳಗಳನ್ನ ಅವರ ಮೆನೆಯ ಮೇಲೆ ಸಾಕಿರುವುದನ್ನ ನಾವು ನೋಡಿದ್ದೇವೆ. ಕೆಲವು ಕಡೆ ಪರಿವಾಳಗಳೇ ಗೂಡು ಕಟ್ಟುವುದನ್ನ ನೋಡಿದ್ದೇವೆ. ಆದರೆ ಪಾರಿವಾಳಗಳು ಅದಾಗೇ ಮನೆಯೊಳಗೇ ಬಂದ್ರೆ ಅವುಗಳನ್ನ ಮನೆಯೊಳಗೇ ಇಟ್ಟುಕೊಳ್ಳದಕ್ಕೆ ಹೋಗ್ಬೇಡಿ. ಅವಕ್ಕೆ ತೊಂದರೆ ಕೊಡದೆ ಒಳ್ಳೆಯ ರೀತಿಯಲ್ಲಿ ಹೊರಗಿ ಕಳುಹಿಸಿ. ಯಾಕಂದ್ರೆ ಪಾರಿವಾಳಗಳನ್ನ ಅನೇಕರು ಮನೆಯೊಳಗೇ ಸಾಕುವುದು ಈಗಿನ ಟ್ರೆಂಡ್ ಆಗಿದೆ. ಆದರೆ ನಾವು ಪರಿವಾಳಗಳನ್ನ ಸಾಕಿದ್ರೆ ಒಳ್ಳೇದಾಗುತ್ತೋ ಅಥ್ವಾ ಕೆಟ್ಟದಾಗುತ್ತೋ ಅಂತ ಹೇಳುವುದು ತಪ್ಪಾಗುತ್ತೆ. ಆದರೆ ಮನೆಯಲ್ಲಿ ಪಾರಿವಾಳಗಳು ಗೂಡು ಕಟ್ಟಿದ್ರೆ ಅದರಿಂದ ಕೆಟ್ಟದಾಗುತ್ತೆ, ಕಷ್ಟಗಳು ಬರುತ್ತವೆ, ಹಣಕಾಸಿನ ತೋಡಿನರೆಯಾಗುತ್ತೆ ಅಂತ ಹಿರಿಯರು ಹೇಳುತ್ತಾರೆ.

ಇನ್ನು ಗಿಣಿಯ ಬಗ್ಗೆ ಹೇಳುವುದಾದರೆ, ಗಿಣಿ ತನಗೆ ಮನೆಯೊಳಗೇ ಬಂದ್ರೆ ಅಂತಹ ಮನೆಯವರಿಗೆ ಅದು ತುಂಬಾನೇ ಶುಭದಾಯಕ ಎಂದು ಹೇಳಲಾಗಿದೆ. ನೀವೇನಾದರೂ ವ್ಯಾಪಾರ, ವ್ಯವಹಾರ ಮಾಡುತ್ತಿದ್ದಾರೆ ಅದರಲ್ಲಿ ಒಳ್ಳೆಯ ರೀತಿಯಲ್ಲೇ ಬದಲಾವಣೆಗಳಾಗಿ ಇದ್ದಕಿದ್ದಂತ ಅದೃಷ್ಟ ಬರುವಂತಹ ಸೂಚನೆಕೊಡುತ್ತಂತೆ ಗಿಳಿ. ಆದರೆ ಗಿಳಿ ಸಾಮಾನ್ಯವಾಗಿ ಒಂಟಿ ಕಾಲಲ್ಲಿ ನಿಂತು ಕೊಳ್ಳುವುದನ್ನ ನೀವು ನೋಡಿರುತ್ತೀರಿ. ಹಾಗಾಗಿ ಗಿನಿಯನ್ನ ಮನೆಯಲ್ಲ ಸಾಕಬಾರದು. ಆದ್ರೆ ಅದಾಗೇ ಗಿಳಿ ಮನೆಯೊಳಗೇ ಬಂದ್ರೆ ಅದ್ರಷ್ಟ ಬರೋದು ಕಟ್ಟಿಟ್ಟಬುತ್ತಿ ಎಂದು ಹೇಳಲಾಗಿದೆ.