ಕ್ಯಾಮರವನ್ನೇ ದಿಟ್ಟಿಸಿ ನೋಡುತ್ತಿರುವ 3 ಭಯಂಕರ ನಾಗರಹಾವುಗಳು.!ನೀವು ನೋಡಿರದ ಅಪರೂಪದ ದೃಶ್ಯ..

Kannada Mahiti

ಸ್ನೇಹಿತರೆ ಸಾಮಾನ್ಯವಾಗಿ ನಾವು ನೀವು ಅಲ್ಲಲ್ಲಿ ಅಥವಾ ಕೆಲ ಕಾಡುಗಳಲ್ಲಿ ಪ್ರಾಣಿಗಳ ನೋಡಿರುತ್ತೇವೆ. ಆದರೆ ಅಪರೂಪವಾಗಿ ಕಂಡಂತಹ ಕೆಲವು ದೃಶ್ಯಗಳು ನೋಡು ನೋಡುತ್ತಿದ್ದಂತೆಯೇ ಹೆಚ್ಚು ಆಕರ್ಷಣೆಯ ದೃಶ್ಯ ಎಂದೆನಿಸುತ್ತವೆ. ಜೊತೆಗೆ ಭಯ ಕೂಡ ಆಗುವಂತೆ ಆ ರೀತಿ ಪ್ರಾಣಿಗಳ ದೃಶ್ಯ ಕಾಣುತ್ತದೆ. ಹೌದು ಇತ್ತೀಚೆಗೆ ಡಿಜಿಟಲ್ ಮಾಧ್ಯಮ ಎಷ್ಟು ಮುಂದುವರೆದಿದೆ ಎಂದರೆ, ಇಡೀ ಜಗತ್ತನ್ನೇ ತುಂಬಾ ಹತ್ತಿರವಾಗಿ ನೋಡುವಂತಹ ಕೆಲಸವನ್ನು ಅದು ಮಾಡುತ್ತಿದೆ. ಪ್ರಾಣಿ-ಪಕ್ಷಿ ಹಾಗೂ ಭ’ಯಾನಕ ಹಾವುಗಳು, ಭ’ಯಪಡಿಸುವ ಸ್ಥಳಗಳು ಎಲ್ಲವನ್ನೂ ಕೂಡ ನಾವು ಇಂದಿನ ಡಿಜಿಟಲ್ ಯುಗದಲ್ಲಿ ತುಂಬಾ ಹತ್ತಿರದಲ್ಲಿಯೇ ನೋಡುತ್ತಿದ್ದೇವೆ. ಅಷ್ಟು ಸ್ಪೀಡಾಗಿದೆ ಇಂದಿನ ಕಂಪ್ಯೂಟರ್ ಯುಗ.

ಗೆಳೆಯರೇ ಇದೀಗ ಇಲ್ಲೊಂದು ಅಪರೂಪದ ಹಾವುಗಳ ಬಗ್ಗೆ ಹೇಳುತ್ತೇವೆ ಕೇಳಿ. ಹೌದು ಸಾಮಾನ್ಯವಾಗಿ ನೀವು ರಸ್ತೆಯಲ್ಲಿ ಹೋಗುವಾಗಲೋ, ಅಥವಾ ಹೊಲದಲ್ಲಿ ಯಾವುದೋ ಒಂದು ಕೆಲಸ ಮಾಡುವಾಗಲೋ ಅಥವಾ ದಟ್ಟಡವಿಯ ಅರಣ್ಯ ಪ್ರದೇಶಗಳಲ್ಲಿಯೋ ಉದ್ದವಾದ ಹಾವುಗಳನ್ನು ನೋಡಿರುತ್ತೀರಾ, ಅಥವಾ ಎರಡೆರಡು ಹಾವುಗಳು ಒಟ್ಟಿಗೆ ಸೇರಿರುವ, ಜೊತೆಗೆ ಹಾವುಗಳು ಒಟ್ಟಿಗೆ ಆಡುತ್ತಿರುವ ದೃಶ್ಯವನ್ನು ನೋಡಿರುತ್ತೀರಾ. ಆದ್ರೆ ಇದೀಗ ಇಲ್ಲೊಂದು ದೃಶ್ಯ ವಿಭಿನ್ನವಾಗಿ ಕಂಡಿದೆ. ಒಂದೇ ತೊಗಟೆಯ ಗಿಡದಲ್ಲಿ ಒಟ್ಟು ಮೂರು ಭ’ಯಾನಕ ನಾಗರಹಾವುಗಳು ಹೆಡೆ ಯೆತ್ತಿ ನಿಂತುಕೊಂಡಿರುವ ದೃಶ್ಯ ಕಂಡುಬಂದಿದೆ.

ಹೌದು ಈ ಮೂರು ನಾಗರಹಾವುಗಳು ಮಹಾರಾಷ್ಟ್ರದ ಕಾಡಿನಲ್ಲಿ ಕಂಡುಬಂದಿದ್ದು, ಅರಣ್ಯಾಧಿಕಾರಿಯಾಗಿರುವ ಸುಶಾಂತ್ ನಂದಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪರೂಪದ ಈ ಭ’ಯಾನಕ ಫೋಟೋವನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಮೂರು ಹಾವುಗಳು ಒಟ್ಟಿಗೆ ಆಶೀರ್ವಾದ ಮಾಡುತ್ತಿವೆ ಎಂದುತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಫೋಟೋಗೆ ೪ ಸಾವಿರಗಿಂತಲೂ ಹೆಚ್ಚು ಜನ ಲೈಕ್ಸ್ ಕೊಟ್ಟಿದ್ದು, ೪೦೦ಕ್ಕೂ ಹೆಚ್ಚು ಬರಿ ರೀ ಟ್ವೀಟ್ ಮಾಡಲಾಗಿದೆ. ಕ್ಯಾಮರವನ್ನೇ ದಿಟ್ಟಿಸಿ ನೋಡುವಂತಹ, ಎದೆ ಝಲ್ ಎನಿಸುವಂತಹ ಹಾವುಗಳ ಫೋಟೋ ಇದಾಗಿದ್ದು ಅಮರಾವತಿ ಜಿಲ್ಲೆಯ ಹರಿಸಲ್ ಎಂಬ ಅರಣ್ಯಪ್ರದೇಶದಲ್ಲಿ ಈ ಅಪರೂಪದ ಫೋಟೋ ಕ್ಲಿಕ್ ಮಾಡಲಾಗಿದೆ.

ಜೊತೆಗೆ ಅವುಗಳನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟು ಬರುವಾಗ ತೆಗೆದ ಫೋಟೋ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಜೊತೆ ಅಪರೂಪದ ಹಾವುಗಳು ಕೂಡ ವೀಕ್ಷಕರನ್ನು ತನ್ನತ್ತ ಸೆಳೆಯುತ್ತಿವೆ. ಈ ಹಾವುಗಳನ್ನು ನೋಡಿದ ನೆಟ್ಟಿಗರು, ಇದು ಬಲು ಅಪರೂಪ ದೃಶ್ಯದ ಫೋಟೋ ಎಂದು ಹೇಳಿದ್ದಾರೆ. ಫೋಟೋ ಸೆರೆ ಇಡಿದವನ ಗುಂಡಿಗೆ ಎಷ್ಟಿರಬೇಡ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಇನ್ನು ಕೆಲವರು ನೋಡಲು ಮೂರು ಹಾವುಗಳು ಒಟ್ಟಿಗೆ ಇರುವುದು ಸುಂದರವಾಗಿದೆ, ಆದರೆ ಹತ್ತಿರ ಹೋದರೆ ಕಂಡಿತ ಭಯ ಆಗುತ್ತದೆ ಎಂದು ಹೇಳಿದ್ದಾರೆ. ನೀವು ಕೂಡ ಈ ಅಪರೂಪದ ಹಾವಿನ ಫೋಟೋಗಳನ್ನು ನೋಡಿ, ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ದನ್ಯವಾದಗಳು…