ತಮ್ಮ ಜೀವ ಲೆಕ್ಕಿಸದೆ ಬರೋಬ್ಬರಿ 2 ಸಾವಿರ ಜನರ ಪ್ರಾಣ ಕಾಪಾಡಿದ ಚಿಂದಿ ಆಯುವ ವ್ಯಕ್ತಿ ಮತ್ತು ಮಗಳು ! ಆಗಿದ್ದೇನು ಗೊತ್ತಾ ?

Inspire

ಸ್ನೇಹಿತರೇ, ಮನುಷ್ಯನ ಜೀವನದಲ್ಲಿ ಸಾ’ವು ಯಾವಾಗ ಬರುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಆದರೆ ಕೊನೆ ಗಳಿಗೆಯಲ್ಲಿ ಸಾವಿನಿಂದ ಬಚಾವ್ ಆದಾಗ ದೇವರೇ ಬಂದು ನಮ್ಮಣ್ಣ ಕಾಪಾಡಿದ ಎಂದು ಹೇಳುವುದು ಸಾಮಾನ್ಯ. ಹೌದು,ಇದೆ ರೀತಿ ಬಂದ ತಂದೆ ಮಗಳು ಸಾವಿರಾರು ಜನರ ಜೀವ ಉಳಿಸಿ ಅವರ ಪಾಲಿಗೆ ದೇವರಾಗಿದ್ದಾರೆ. ಹಾಗಾದ್ರೆ ಸಾವಿರಾರು ಜನರ ಪ್ರಾಣ ಉಳಿಸಿದ್ದು ಹೇಗೆ ಅಂತ ನೋಡೋಣ ಬನ್ನಿ. ಇನ್ನು ಇದಕ್ಕೆ ಕಾರಣನಾದ ವ್ಯಕ್ತಿಯ ಹೆಸರು ಸ್ವಪನ್ ವೆಬ್ಬರ್ಮ್ ಎಂದು. ಬುಡಕಟ್ಟು ಜನಾಂಗದವರಾಗಿರುವ ಈತ ಚಿಂದಿ ಪೇಪರ್ ಆಯುವ ಕೆಲಸ ಮಾಡುತ್ತಿದ್ದು, ಉತ್ತರ ತ್ರಿಪುರಾದ ಧಾಂಚಾರ ಗ್ರಾಮದಲ್ಲಿ ವಾಸ ಮಾಡುತ್ತಿದ್ದವನು. ಇನ್ನು ಹೀಗೊಂದು ದಿನ ತನ್ನ ಮಗಳು ಸೋಮತಿಯೊಂದಿಗೆ ಬೇರೊಂದು ಗ್ರಾಮಕ್ಕೆ ಹೋಗಬೇಕೆಂದು ಗುಡ್ಡ, ಬೆಟ್ಟಗಳ ಪ್ರದೇಶವನ್ನ ದಾಟಿ ಮಗಳೊಂದಿಗೆ ನಡೆದುಕೊಂಡು ಹೋಗುತಿದ್ದ.

ಹೀಗೆ ಹೋಗುತ್ತಿದ್ದ ವೇಳೆ ರೈಲ್ವೆ ಟ್ರ್ಯಾಕ್ ಒಂದರ ನಡುವೆ ಹಾದು ಹೋಗುತ್ತಿದ್ದಾಗ ಅಲ್ಲಿ ಆಗಿರುವುದನ್ನ ನೋಡಿ ಶಾಕ್ ಆಗುತ್ತಾನೆ. ಹೌದು, ಕಳೆದ ಮೂರೂ ದಿನಗಳ ಹಿಂದೆ ಸತತವಾಗಿ ಬಿದ್ದಿದ್ದ ಮಳೆಯ ಕಾರಣದಿಂದ, ಸುಮಾರು 1 ಕಿಮೀ ದೂರದ ರೈಲ್ವೆ ಟ್ರ್ಯಾಕ್ ಹಾಳಾಗಿದ್ದು ಮುರಿದಿತ್ತು. ಇನ್ನು ಇದನ್ನ ನೋಡಿದ ಸ್ವಪನ್ ಒಂದು ಕ್ಷಣ ಬೆಚ್ಚಿ ಬಿದ್ದದ್ದ. ಯಾರಿಗಾದರೂ ಹೇಳೋಣ ಎಂದರೆ ಅಲ್ಲಿ ಯಾರೂ ಇರಲಿಲ್ಲ. ಇನ್ನು ಇದೆ ವೇಳೆ ಅದೇ ಟ್ರ್ಯಾಕ್ ನಲ್ಲಿ ರೈಲು ಬರುತ್ತಿರುವ ಶಬ್ದ ಬರಲು ಶುರುವಾಗುತ್ತದೆ. ಒಂದು ಕ್ಷಣ ಏನೂ ಮಾಡೋದು ಎಂದು ಗಾಬರಿಯಾಗಿದ್ದ ಆ ವ್ಯಕ್ತಿ ತನ್ನ ಸಮಯ ಪ್ರಜ್ಞೆಯಿಂದ ಐಡಿಯಾವೊಂದನ್ನ ಮಾಡುತ್ತಾನೆ. ಕೂಡಲೇ ತನ್ನ ಮೈ ಮೇಲಿನ ಬಟ್ಟೆ ಬಿಚ್ಚಿದ ಆ ವ್ಯಕ್ತಿ ಹಾಗೂ ಆತನ ಮಗಳ ಬಟ್ಟೆಯನ್ನು ಹಿಡಿದುಕೊಂಡು ರೈಲಿಗೆ ಎದುರಾಗಿ ತನ್ನ ಜೀವದ ಬಗ್ಗೆ ಕೂಡ ಏನೂ ಯೋಚನೆ ಮಾಡದೆ ಟ್ರ್ಯಾಕ್ ಮಧ್ಯೆ ಜೋರಾಗಿ ಕೂಗತ್ತಾ ಓಡುತ್ತಾರೆ.

ಇನ್ನು ರೈಲಿಗೆ ಎದುರಾಗಿ ಬಟ್ಟೆ ಹಿಡಿದುಕೊಂಡು ಏನೋ ಹೇಳುತ್ತಿರುವ ಹಾಗೇ ಓಡಿಬರುತ್ತಿರುವ ತಂದೆ ಮಗಳನ್ನ ಗಮನಿಸಿದ ಆ ರೈಲಿ ಲೋಕೋ ಪೈಲೆಟ್ ಈ ರೈಲ್ವೆ ಟ್ರ್ಯಾಕ್ ನಲ್ಲಿ ಏನೋ ಅ’ಪಾಯ ಆಗಿರಬಹುದು ಎಂದು ತಿಳಿದ ಲೋಕೋ ಪೈಲೆಟ್ ಕ್ರಮೇಣವಾಗಿ ರೈಲನ್ನ ನಿಲ್ಲಿಸುತ್ತಾ ಬರುತ್ತಾನೆ. ಇನ್ನು ಟ್ರೈನ್ ನಿಲ್ಲಿಸಿ ಅಲ್ಲಿ ಇಳಿದಾಗ ಅಲ್ಲಿ ಆಗಿದ್ದ ಅ’ನಾಹುತ ನೋಡಿ ಟ್ರೈನ್ ಪೈಲೆಟ್ ಕೂಡ ಬೆಚ್ಚಿ ಬೀಳುತ್ತಾನೆ. ಇನ್ನು ಆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದದ್ದು ಬರೋಬ್ಬರಿ ಎರಡು ಸಾವಿರ ಜನರನ್ನ ಉಳಿಸಿ ಚಿಂದಿ ಆಯುವ ವ್ಯಕ್ತಿ ಸ್ವಪನ್ ತನ್ನ ಸಮಯಪ್ರಜ್ಞೆಯಿಂದ ದೊಡ್ಡ ಅ’ನಾಹುತವನ್ನೇ ತಪ್ಪಿಸಿರುತ್ತಾನೆ.

ಇನ್ನು ಚಿಂದಿ ಆಯುವ ಬುಡಕಟ್ಟು ಜನಾಂಗದ ಈ ವ್ಯಕ್ತಿ ಮತ್ತು ಆತನ ಮಗಳ ಉಪಾಯದಿಂದ ದೊಡ್ಡ ಅ’ನಾಹುತವೇ ತಪ್ಪಿದ್ದು ತಂದೆ ಮಗಳನ್ನ ತನ್ನ ಮನೆಗೆ ಕರೆಸಿಕೊಂಡು ತ್ರಿಪುರಾದ ಮಿನಿಸ್ಟರ್ ಒಬ್ಬರು ಇವರ ಈ ಕೆಲಸಕ್ಕೆ ಭೋಜನಕೂಟವನ್ನ ಏರ್ಪಡಿಸಿದ್ದಲ್ಲದೆ, ಅವರ ಜೀವನಕ್ಕಾಗಿ ಉದ್ಯೋಗದ ಜೊತೆಗೆ ಆ ವ್ಯಕ್ತಿಯ ಕುಟುಂಬಕ್ಕೆ ಬೇಕಾದ ಮೂಲ ಸೌಕರ್ಯಗಳನ್ನ ಕಲ್ಪಿಸಿಕೊಟ್ಟಿದ್ದಾರೆ. ಇನ್ನು ರೈಲ್ವೆ ಇಲಾಖೆ ಕೂಡ ಇವರ ಕೆಲಸಕ್ಕೆ ಸೂಕ್ತ ಬಹುಮಾನ ಕೊಟ್ಟು ಗೌರವಿಸಿದೆ. ಒಟ್ಟಿನಲ್ಲಿ ತನ್ನ ಸಮಯಪ್ರಜ್ಞೆಯಿಂದ ಬರೋಬ್ಬರಿ ಎರಡು ಸಾವಿರ ಜೀವ ಉಳಿಯಲು ಕಾರಣರಾದ ತಂದೆ ಮಗಳಿಗೆ ನಮ್ಮ ಕಡೆಯಿಂದ ದೊಡ್ಡದೊಂದು ಸೆಲ್ಯೂಟ್..