ಅಕ್ಕ ತಂಗಿಯರಿಬ್ಬರನ್ನ ಒಂದೇ ಮಹೂರ್ತದಲ್ಲಿ ಮದ್ವೆಯಾಗಿದ್ದ ವರ ಅರೆಸ್ಟ್ ! ಅಸಲಿಗೆ ಆಗಿರೋದೇನು ಗೊತ್ತಾ ?

Kannada News

ಸ್ನೇಹಿತರೇ, ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ವೇಗಮಡುಗು ಎಂಬ ಹಳ್ಳಿಯಲ್ಲಿ ಉಮಾಪತಿ ಎಂಬುವವರು ಇಬ್ಬರು ಅಕ್ಕ ತಂಗಿಯರನ್ನ ಒಂದೇ ಮಹೂರ್ತದಲ್ಲಿ ಮದುವೆಯಾಗಿದ್ದು, ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಜೊತೆಗೆ ಇವರ ಮದುವೆ ವಿಷಯ ಸಿಕ್ಕಾಪಟ್ಟೆ ಚರ್ಚೆಯಲ್ಲಿತ್ತು. ಇನ್ನು ಅನೇಕರು ಮದುವೆಯ ಅಸಲಿ ಸತ್ಯವನ್ನ ತಿಳಿಯದೆ ಟ್ರೋಲ್ ಮಾಡಿದ್ದು ಉಂಟು. ಮದುವೆಯಾದ ಅಕ್ಕ ತಂಗಿಯರಾದ ಸುಪ್ರಿಯಾ ಮತ್ತು ಆಕೆಯ ತಂಗಿ ಲಲಿತ ಎಂದು. ಉಮಾಪತಿ ಮದುವೆಯಾಗಲು ಇಷ್ಟಪಟ್ಟಿದ್ದು ಸುಪ್ರಿಯಾ ತಂಗಿ ಲಲಿತ ಅವರನ್ನ. ಆದರೆ ಅಕ್ಕ ಸುಪ್ರಿಯಾ ಅವರು ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ.

ಇನ್ನು ನನಗೆ ಮದುವೆಯಾಗಿಬಿಟ್ಟರೆ, ನನ್ನ ಅಕ್ಕ ನಿಗೆ ಮದುವೆಯಾಗುವುದೇ ಇಲ್ಲ ಎಂದು ಯೋಚನೆ ಮಾಡಿದ ಲಲಿತ, ನನ್ನನ್ನ ಮದ್ವೆಯಾಗಬೇಕಾದ್ರೆ ನನ್ನ ಅಕ್ಕನನ್ನು ಸಹ ಮದ್ವೆಯಾಗಲೇಬೇಕು ಎಂಬ ಶರತ್ತಿನ ಮೇರೆಗೆ ಉಮಾಪತಿ ಅಕ್ಕ ತಂಗಿಯರಿಬ್ಬರನ್ನು ಇದೆ ಮೇ ಏಳನೇ ತಾರೀಖಿನಂದು ಗುರುಹಿರಿಯರ ನಡುವೆ ಮೊದಲೇ ನಿಚ್ಚಯ ಮಾಡಿದ ಮಹೂರ್ತದಲ್ಲಿ ಮದುವೆಯಾಗುತ್ತಾನೆ. ಅಸಲಿ ವಿಷಯ ತಿಳಿದು ಅನೇಕರು ಉಮಾಪತಿಯ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಬಹುತೇಕರು ಅಸಲಿ ಸತ್ಯ ತಿಳಿಯದೆ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಮಾಡಿದ್ರು. ಇಷ್ಟೆಲ್ಲಾದರೆ ನಡುವೆ ಈ ಮದುವೆಗೆ ಮತ್ತೊಂದು ಬಿಟ್ ಟ್ವಿಸ್ಟ್ ಸಿಕ್ಕಿದೆ. ಹೌದು, ಎರಡು ಮದುವೆಯಾದ ಉಮಾಪತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಅ’ರೆಸ್ಟ್ ಮಾಡಿದ್ದಾರೆ.

ಹೌದು, ಮದ್ವೆಯಾದ ಕೆಲ ದಿನಗಳಲ್ಲೆ ವರ ಉಮಾಪತಿ ಅರೆಸ್ಟ್ ಆಗಿದ್ದು, ಲಲಿತಾ ಅವರ ಅಪ್ರಾಪ್ತ ವಯಸ್ಕರಾಗಿದ್ದು ಅವರಿಗಿನ್ನೂ ೧೬ ವರ್ಷ ಎಂದು ಹೇಳಲಾಗಿದೆ. ಹಾಗಾಗಿಯೇ ಬಾ’ಲ್ಯವಿ’ವಾಹ ಕಾನೂನಿನ ಅಡಿಯಲ್ಲಿ ಉಮಾಪತಿ ಸೇರಿದಂತೆ ಎರಡು ಕುಟುಂಬದವರು ಹಾಗೂ ಮದುವೆ ಮಾಡಿಸಿದ ಪುರೋಹಿತರ ಮೇಲೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಎರಡು ಮದುವೆಯಾಗಿರುವುದು ಕೂಡ ಕಾನೂನಿನ ರೀತಿಯಲ್ಲಿ ಅಪರಾಧ ಎಂದು ಹೇಳಲಾಗಿದ್ದು ಸದ್ಯ ವರ ಉಮಾಪತಿಯವರನ್ನ ಅ’ರೆಸ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ. ಸ್ನೇಹಿತರೆ, ಉಮಾಪತಿ ಮಾಡಿದ್ದು ತಪ್ಪೋ ಸರಿಯೋ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..