ಜೋಕಾಲಿ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ..ಮಕ್ಕಳಿಂದ ಹಿಡಿದು ಮುದುಕರವರೆಗೂ ಜೋಕಾಲಿ ಆಡುವುದೆಂದರೆ ಅಚ್ಚುಮೆಚ್ಚು. ಇದೆ ರೀತಿ ಜೋಕಾಲಿ ಆಡಲು ಹೋದ ಇಬ್ಬರು ಮಹಿಳೆಯರು ಬೆಟ್ಟದ ಮೇಲಿಂದ ಪ್ರಪಾತಕ್ಕೆ ಬಿದ್ದಿರುವ ಘಟನೆ ನಡೆದಿದ್ದು ಮೈ ಜುಮ್ ಎನಿಸುವ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು, ಜೋಕಾಲಿ ಆಡಬೇಕೆಂದ ಇಬ್ಬರು ಮಹಿಳೆಯರು ಜೋಕಾಲಿ ಮೇಲೆ ಕುಳಿತುಕೊಳ್ಳುತ್ತಾರೆ. ಇನ್ನು ಹಿಂದೆ ನಿಂತುಕೊಳ್ಳುವ ವ್ಯಕ್ತಿಯೊಬ್ಬರು ಮಹಿಳೆಯರು ಕುಳಿತ ಜೋಕಾಲಿಯನ್ನ ತಳ್ಳುತ್ತಿರುತ್ತಾರೆ. ಕೆಳಗಡೆ ಭಯಾನಕ ಪ್ರಪಾತವಿದ್ದರೂ ಆ ಮಹಿಳೆಯರು ಜೋಕಾಲಿ ಮೇಲೆ ಕುಳಿತು ಎಂಜಾಯ್ ಮಾಡುತ್ತಿರುತ್ತಾರೆ.
[widget id=”custom_html-4″]
ಆದರೆ ಜೋಕಾಲಿ ಆಡುತ್ತಿರುವ ವೇಳೆ ಇದ್ದಕಿದ್ದಂತೆ ಆ ಜೋಕಾಲಿ ಜೋತು ಹಾಕಿದ್ದ ರಾಡ್ ಗೆ ತಗುಲಿದ ಕಾರಣ ಜೋಕಾಲಿ ತಿರುಗಿದ್ದು ಅದರ ಮೇಲೆ ಕುಳಿತಿದ್ದ ಇಬ್ಬರು ಮಹಿಳೆಯರು ಪ್ರಪಾತಕ್ಕೆ ಬಿದ್ದಿದ್ದಾರೆ. ಇದನ್ನ ವಿಡಿಯೋದಲ್ಲಿ ನೋಡುತ್ತಿದ್ದರೆ ಎಂತಹವರಿಗೂ ಒಂದು ಸಾರಿ ಎದೆ ಜಲ್ ಎನ್ನದೆ ಇರೋದಿಲ್ಲ. ಇನ್ನು ಆ ಮಹಿಳೆಯರು ಬರೋಬ್ಬರಿ ೬೩೦೦ಅಡಿಗಳ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾರೆ. ಆ ಮಹಿಳೆಯರಿಬ್ಬರ ಅದೃಷ್ಟ ಚೆನ್ನಾಗಿತ್ತು ಅನ್ನಿಸುತ್ತೆ..ಅಷ್ಟು ಎತ್ತರದಿಂದ ಬಿದ್ದಿದ್ದರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಇನ್ನು ಈ ಘಟನೆ ನಡೆದಿರುವುದು ರಷ್ಯಾದ ಮಾಸ್ಕೊದಲ್ಲಿ..
[widget id=”custom_html-4″]
Moment two women fell off a 6000-Ft cliff swing over the Sulak Canyon in Dagestan, Russia.
— UncleRandom (@Random_Uncle_UK) July 14, 2021
Both women landed on a narrow decking platform under the edge of the cliff & miraculously survived with minor scratches.
Police have launched an investigation. pic.twitter.com/oIO9Cfk0Bx
ಜೋಕಾಲಿ ಆಡುವ ವೇಳೆ ಸರಿಯಾದ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳದ ಕಾರಣ ಮಹಿಳೆಯರು ಜೋಕಾಲಿಯಿಂದ ಪ್ರಪಾತಕ್ಕೆ ಬಿದ್ದಿದ್ದಾರೆ ಎಂದು ಅಲ್ಲಿನ ಪ್ರವಾಸೋದ್ಯಮ ಹೇಳಿದೆ. ೬೩೦೦ಅಡಿಗಳ ಎತ್ತರದಿಂದ ಬಿದ್ದಿದ್ದ ಕಾರಣ ಆ ಮಹಿಳೆಯರು ಗಾಬರಿಯಾಗಿದ್ದರೇ ಒರತು ಯಾವುದೇ ಗಂಭೀರವಾದ ಗಾ’ಯಗಳಾಗಿಲ್ಲ, ಮಿರಾಕಲ್ ಎಂಬಂತೆ ದೊಡ್ಡ ಅ’ನಾಹುತದಿಂದ ಆ ಮಹಿಳೆಯರಿಬ್ಬರು ಬಚಾವ್ ಆಗಿರುವುದು ವಿಸ್ಮಯ ಎನಿಸುತ್ತದೆ.