ಯುಗಾದಿ ಹಬ್ಬದ ದಿನ ನೀವು ಅಪ್ಪಿತಪ್ಪಿಯೂ ಈ ಕೆಲಸಗಳನ್ನ ಮಾಡುವುದನ್ನ ಮರೆಯಬೇಡಿ.!?

Advertisements

ಯುಗಾದಿ ಹಬ್ಬ ಎಂದರೆ ಹಿಂದೂ ಅಥವಾ ಭಾರತೀಯ ಸಂಸ್ಕೃತಿಯ ಜನರಿಗೆ ಹೊಸ ವರ್ಷ. ಪ್ರಕೃತಿಗೂ ಒಂದು ರೀತಿಯ ಹೊಸ ವರ್ಷ. ಹೊಸ ಚಿಗುರು ಹಳೆ ಬೇರು. ಎಲ್ಲೆಲ್ಲೂ ಹೊಸತನ. ಪ್ರಕೃತಿಯೂ ಹೊಸ ವರ್ಷ ಆಚರಿಸುವ ಕಾಲ. ನಮ್ಮ ಹಿರಿಯರು ಈ ಶುಭದಿನ ನಾವು ಪಾಲಿಸಲೇ ಬೇಕಾದ ಕೆಲವು ಆಚರಣೆಗಳನ್ನು ಮಾಡಿದ್ದಾರೆ. ಶಾಸ್ತ್ರಗಳ ಪ್ರಕಾರ ಈ ಆಚರಣೆಗಳನ್ನು ಅಥವಾ ವಿಧಾನಗಳನ್ನು ನಾವು ಯುಗಾದಿಯ ದಿನ ಪಾಲಿಸಿದರೆ ನಮಗೆ ತುಂಬಾ ಶುಭ ಉಂಟಾಗುತ್ತದೆ. ಅದೃಷ್ಟ ಒಲಿದು ಬರುತ್ತದೆ. ಇವು ವೈಜ್ಞಾನಿಕವಾಗಿಯೂ ಅತ್ಯುತ್ತಮವಾಗಿದೆ. ಹಾಗಾದ್ರೆ ಯುಗಾದಿ ದಿನ ನಾವು ಮಾಡಲೇ ಬೇಕಾದ ಕೆಲಸಗಳು ಯಾವುವು ಎಂದು ನೋಡೋಣ ಬನ್ನಿ..

Advertisements

ಎಣ್ಣೆ ಸ್ನಾನ , ತಂದೆ ತಾಯಿ ಆಶೀರ್ವಾದ : ನಾವು ಹುಟ್ಟಿದ ತಕ್ಷಣ ಜಗತ್ತಿಗೆ ನಮ್ಮನು ತೋರಿಸಲಾಗುವು ದಿಲ್ಲ. ಮೊದಲು ತಾಯಿಯಿಂದ ಬೇರ್ಪಡಿಸಿ ನಂತರ ಶುದ್ಧಿ ಗೊಳಿಸಿ ತಾಯಿಗೆ ಮತ್ತು ತಂದೆಗೆ ತೋರಿಸಲಾಗುತ್ತದೆ. ಅಂತೆಯೇ ಯುಗಾದಿಯ ದಿನ ನಾವು ಎಣ್ಣೆ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸಿ ತಂದೆ ತಾಯಿ ಅಥವಾ ಮಾತೃ ಪಿತೃ ಸಮಾನರಾದವರ ಅಥವಾ ಹಿರಿಯರ ಆಶೀರ್ವಾದ ಪಡೆಯಬೇಕು. ಇದರಿಂದ ಶುಭ ಫಲ ದೊರೆಯುವುದು ಎಂದು ಶಾಸ್ತ್ರ ಗಳು ಹೇಳುತ್ತವೆ. ಮತ್ತು ಆರೋಗ್ಯ, ಆಯಸ್ಸು ವೃದ್ಧಿಸುತ್ತದೆ. ಹೊಸ ಬಟ್ಟೆ ಧರಿಸುವುದು : ಎಲ್ಲರಿಗೂ ತಿಳಿದಿದೆ ಯುಗಾದಿ ಹಬ್ಬದ ದಿವಸ ಹೊಸ ಬಟ್ಟೆ ಧರಿಸುವುದು ವಾಡಿಕೆ. ಹೇಗೆ ಹೊಸ ಬಟ್ಟೆ ಧರಿಸುವುದರಿಂದ ಮತ್ತು ಕೈಲಾದರೆ ಬಡವರಿಗೆ ಹೊಸ ಬಟ್ಟೆ ದಾನವಾಗಿ ಕೊಡುವುದರಿಂದ ಶುಕ್ರನ ಬಲ ದೊರಕುತ್ತದೆ. ನಮ್ಮ ಸಿರಿ ಸಂಪತ್ತು ವೃದ್ಧಿಸುತ್ತದೆ ಎನ್ನುತ್ತವೆ ಶಾಸ್ತ್ರಗಳು.

ಚಂದ್ರ ದರ್ಶನ : ಚೌತಿಯ ದಿನ ಚಂದ್ರನನ್ನು ನೋಡ ಬಾರದು, ನೋಡಿದರೆ ಕಳ್ಳ ತನದ ಆರೋಪ ಬರುತ್ತದೆ ಎಂಬ ಶಾಪವಿದೆ. ಅಂತೆಯೇ ಯುಗಾದಿ ಚಂದ್ರನನ್ನು ನೋಡುವುದರಿಂದ ಅದೃಷ್ಟ ಬರುತ್ತದೆ. ಚಂದ್ರಮಾನ ಯುಗಾದಿಯ ದಿನ ಚಂದ್ರನನ್ನು ನೋಡುತ್ತಾ ನಿಮ್ಮ ಮನದ ಆಸೆ ನೆರವೇರಲಿ ಎಂದು ಭಕ್ತಿಯಿಂದ ಬೇಡಿಕೊಂದರೆ ಅದು ಸಫಲ ವಾಗುತ್ತದೆ. ಇದು ತುಂಬಾ ವಿಶೇಷ ಆಚರಣೆಯಾಗಿದೆ.

ಬೇವು ಬೆಲ್ಲ ಸೇವನೆ : ಯುಗಾದಿಯ ದಿನ ಬೇವು ಮತ್ತು ಬೆಲ್ಲ ಇವೆರಡನ್ನೂ ಸೇವಿಸಬೇಕು. ಮೊದಲು ಇವನ್ನು ದೇವರ ನೈವೇದ್ಯಕ್ಕೆ ಇರಿಸಬೇಕು. ಬೇವು ಬೆಲ್ಲ ಸೇವನೆಯಿಂದ ಶುಭವಾಗುವುದು. ಜೀವನದಲ್ಲಿ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿ ದೊರಕುವುದು. ಇದು ಆರೋಗ್ಯದ ದೃಷ್ಟಿಯಿಂದಲೂ ಈ ಕಾಲಮಾನಕ್ಕೆ ತುಂಬಾ ಒಳ್ಳೆಯದು. ಈ ವಿಧಾನ ಆಚರಣೆಗಳು ವೈಜ್ಞಾನಿಕವಾಗಿಯೂ ತನ್ನದೇ ಆದ ಮಹತ್ವವನ್ನು ಹೊಂದಿವೆ. ಅಲ್ಲದೆ ಯುಗಾದಿಯ ದಿನ ಪಂಚಾಂಗ ಶ್ರಾವಣ ಮಾಡುವುದೂ ಕೂಡ ಹಿಂದೂ ಮನೆ ಮನೆಯ ವಾಡಿಕೆಯಾಗಿ.ಮತ್ತು ಈ ಹಬ್ಬದ ದಿನ ಹೋಳಿಗೆ ಊಟಾ ಮಾಡಬೇಕು. ಇವೆಲ್ಲ ಆಚರಣೆಗಳೊಂದಿಗೆ ಹೊಸ ವರ್ಷ ವನ್ನು ಅರ್ಥ ಪೂರ್ಣವಾಗಿ ಸ್ವಾಗತಿಸಿ ಹೊಸ ಜೀವನವನ್ನು ಆರಂಭಿಸೋಣ.