ಒಂದೇ ಮಹೂರ್ತದಲ್ಲಿ ಅಕ್ಕ ತಂಗಿಯರಿಬ್ಬರನ್ನೂ ವರಿಸಿದ ವರ ! ಅಸಲಿ ಕಾರಣ ತಿಳಿಯದೆ ಸಿಕ್ಕಾಪಟ್ಟೆ ಟ್ರೋಲ್..

Kannada News
Advertisements

ಸ್ನೇಹಿತರೇ, ಅಕ್ಕ ತಂಗಿಯರಿಬ್ಬರನ್ನ ಒಂದೇ ಮಹೂರ್ತದಲ್ಲಿ, ಅದೂ ಒಂದೇ ಚಪ್ಪರದ ಅಡಿಯಲ್ಲಿ ಒಬ್ಬನೇ ಹುಡುಗ ಮದುವೆಯಾಗುವುದು ಎಂದರೆ, ಅದನ್ನ ನಾವು ಸಿನಿಮಾಗಳಲ್ಲಿ ಮಾತ್ರ ನೋಡಿರಲು ಸಾಧ್ಯ. ನಿಜಜೀವನದಲ್ಲಿ ಈ ರೀತಿ ನಡೆಯುವುದು ಅಪರೂಪದಲ್ಲಿ ಅಪರೂಪ. ಆದರೆ ಇಂತಹದೊಂದು ಅಪರೂಪದ ಮದುವೆ ನಿಜಜೀವನದಲ್ಲಿ ನಡೆದಿದ್ದು ಈ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕಾಪಟ್ಟೆ ವೈರಲ್ ಆಗುತ್ತಿವೆ. ಇನ್ನು ಈ ಮದುವೆ ನಡೆದಿರುವುದು ಚಿನ್ನದ ನಾಡು ಕೋಲಾರ ಜಿಲ್ಲೆಯ ಮುಳುಬಾಗಿಲಿನ ವೇಗಮಡುಗು ಎಂಬ ಹಳ್ಳಿಯೊಂದರಲ್ಲಿ. ಇನ್ನು ಅಕ್ಕ ತಂಗಿಯರಾದ ಸುಪ್ರಿಯಾ ಮತ್ತು ಲಲಿತ ಅವರನ್ನ ಒಂದೇ ಮಹೂರ್ತದಲ್ಲಿ ವಿವಾಹವಾಗಿರೋ ವರ ಉಮಾಪತಿ ಎಂದು.

[widget id=”custom_html-4″]

ಇನ್ನು ಉಮಾಪತಿ ಅವರು ಅಕ್ಕ ತಂಗಿಯರಿಬ್ಬರನ್ನ ಮದುವೆಯಾಗಿರುವುದಕ್ಕೆ ಅಸಲಿ ಕಾರಣ ಬೇರೆಯೇ ಇದೆ. ಆದರೆ ಅಸಲಿ ಸತ್ಯ ತಿಳಿಯದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಮದುವೆಯ ಬಗ್ಗೆ ಟ್ರೋಲ್ ಮಾಡುತ್ತಾ ಬಾಯಿಗೆ ಬಂದ ಹಾಗೆ ಕಾ’ಮೆಂಟ್ ಗಳನ್ನ ಮಾಡುತ್ತಿದ್ದಾರೆ. ಹೌದು, ಉಮಾಪತಿ ಮದುವೆಯಾಗಲು ಒಪ್ಪಿದ್ದು ಸುಪ್ರಿಯಾ ಅವರ ತಂಗಿ ಲಲಿತಾ ಅವರನ್ನ. ಆದರೆ ಅಕ್ಕ ಸುಪ್ರಿಯಾ ಹುಟ್ಟಿನಿಂದಲೇ ಮುಖಿಯಾಗಿದ್ದ ಕಾರಣ ಆಕೆಗೆ ಮಾತನಾಡುವ ಶಕ್ತಿ ಇರಲಿಲ್ಲ. ಇನ್ನು ಮನೆಯಲ್ಲಿರುವ ಅಕ್ಕನಿಗೆ ಮದುವೆಯಾಗದೆ ತಂಗಿ ಮದುವೆಯಾಗಲು ಹೇಗೆ ಸಾಧ್ಯ. ಇನ್ನು ಅಕ್ಕ ಮುಖಿಯಾಗಿದ್ದ ಕಾರಣ ಆಕೆಗೆ ಎಲ್ಲಿ ಮದುವೆಯೇ ಆಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತ ವರ ಉಮಾಪತಿಯ ಮುಂದೆ ಶರತ್ತೊಂದನ್ನ ಇಡುತ್ತಾಳೆ.

[widget id=”custom_html-4″]

Advertisements

ಅದರಂತೆ ತನ್ನ ಅಕ್ಕನನ್ನ ಮದುವೆಯಾದರೆ ಮಾತ್ರ ನಾನು ನಿನ್ನನ್ನ ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ. ಇನ್ನು ಲಲಿತಾಳ ಶರತ್ತಿಗೆ ಒಪ್ಪಿದ ವರ ಊಮಾಪತಿ ತಮ್ಮ ಕುಟುಂಬದವರು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಒಂದೇ ಶುಭ ಮಹೂರ್ತದಲ್ಲಿ ಅಕ್ಕ ತಂಗಿಯರಿಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾನೆ. ವಿಶೇಷ ಎಂದರೆ ಸುಪ್ರಿಯಾ ಮತ್ತು ಲಲಿತ ಅವರ ತಂದೆ ನಾಗರಾಜಪ್ಪ ಕೂಡ ರಾಣೆಮ್ಮ ಹಾಗೂ ಸುಬ್ಬಮ್ಮ ಅನ್ನೋ ಅಕ್ಕ ತಂಗಿಯರಿಬ್ಬರನ್ನ ಮದುವೆಯಾಗಿದ್ದಾರೆ. ಇನ್ನೂ ಅಚ್ಚರಿಯ ವಿಷಯ ಏನೆಂದರೆ ಆ ತಂಗಿಯರಿಬ್ಬರಲ್ಲೂ ಕೂಡ ಒಬ್ಬರಿಗೆ ಮಾತು ಬರುತ್ತಿರಲಿಲ್ಲ ಎನ್ನೋದು. ಇನ್ನು ಈ ಮದುವೆಯ ಬಗ್ಗೆ ಅಸಲಿ ವಿಷಯ ತಿಳಿದವರು ಉಮಾಪತಿಯ ಮಾನವೀಯತೆಯ ಬಗ್ಗೆ ಮೆಚ್ಚುಗೆಗಳನ್ನ ವ್ಯಕ್ತಪಡಿಸಿದ್ದಾರೆ.