ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ 1 ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ ?

Entertainment

ಕಿರುತೆರೆಯ ಧಾರಾವಾಹಿಗಳಲ್ಲಿ ಜನಪ್ರಿಯರಾದ ನಟಿಯರು ಈಗ ಬಿಗ್ ಬಾಸ್ ೮ರ ಸಂಚಿಕೆಯಲ್ಲಿ ಸ್ಪರ್ಧಿಗಳಾಗಿದ್ದರೆ. ಅವರಲ್ಲಿ ಒಬ್ಬರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದ ಮೂಲಕ ಫೇಮಸ್ ಆದ ನಟಿ ವೈಷ್ಣವಿ ಗೌಡ. ಸನ್ನಿಧಿ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದ ನಟಿ. ಕಿರುತೆರೆ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಮಿಂಚಿದ ನಟಿ ವೈಷ್ಣವಿ ಗಿರಿಗಿಟ್ಲೆ ಮತ್ತು ಡ್ರೆಸ್ ಕೋಡ್ ಎಂಬ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಬಿಗ್ ಬಾಸ್ ೮ರ ಸ್ಪರ್ಧಿಯಾಗಿದ್ದು ಸೈಲಂಟ್ ಆಗಿ ತಮ್ಮ ಆಟವನ್ನ ಚೆನ್ನಾಗಿಯೇ ಆಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವುದಕ್ಕೆ ಮುಂಚೆ ತಾನು ಈ ಸಲದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದರು. ಇನ್ನು ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಲಿ ಹೆಚ್ಚು ದಿವಸ ಉಳಿಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಬಗ್ಗೆ ಹೇಳುವುದಾದರೆ, ಬಿಗ್ ಬಾಸ್ ಕಾರ್ಯಕ್ರಮದ ಜೊತೆ ಮೊದಲೇ ಮಾಡಿಕೊಂಡ ಒಪ್ಪಂದದ ಪ್ರಕಾರ ಒಂದು ವಾರದ ಸಂಭಾವನೆಯಾಗಿ 60 ಸಾವಿರ ರೂಗಳನ್ನ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸ್ನೇಹಿತರೇ, ಬಿಗ್ ಬಾಸ್ ಸೀಸನ್ ೮ರ ನಿಮ್ಮ ನೆಚ್ಚಿನ ಹಾಗೂ ಈ ಬಾರಿ ಗೆಲ್ಲುವ ಸ್ಪರ್ಧಿ ಯಾರೆಂದು ಕಾ’ಮೆಂಟ್ ಮಾಡಿ ತಿಳಿಸಿ..