ನಾನು ತೆಗೆದುಕೊಂಡ ಸಾಲವನ್ನ ಪೂರ್ತಿಯಾಗಿ ಪಾವತಿಸಲು ರೆಡಿ ಇದ್ದೇನೆ..ಅದಕ್ಕೆ ಬಳಸಿಕೊಳ್ಳಿ ಎಂದ ವಿಜಯ್ ಮಲ್ಯ..

News

ಭಾರತದ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ಮಧ್ಯದ ದೊರೆ ವಿಜಯ್ ಮಲ್ಯ ನಾನು ಸಲ ಮರುಪಾವತಿಸಲು ರೆಡಿ ಇದ್ದೇನೆ..ನನಗೆ ಸಾಲವಾಗಿ ಕೊಟ್ಟ ಹಣವನ್ನ ತೆಗೆದುಕೊಂಡು ಕೊರೋನಾಗೆ ಬಳಸಿಕೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಹೀಗೆ ವಿಜಯ್ ಮಲ್ಯ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. ನಾನು ಭಾರತೀಯ ಬ್ಯಾಂಕ್ ಗಳಿಂದ ಸಾಲ ಪಡೆದ ಹಣವನ್ನು ಪೂರ್ತಿಯಾಗಿ ಪಾವತಿಸಲು ಸಿದ್ದನಿದ್ದೇನೆ. ಆದರೆ ಈ ಬಗ್ಗೆ ಜಾರಿ ನಿರ್ದೇಶನಾಲಯವಾಗಲಿ, ಬ್ಯಾಂಕ್ ಗಳಾಗಲಿ ನನ್ನ ಮನವಿ ಬಗ್ಗೆ ಗಮನ ಹರಿಸುತ್ತಿಲ್ಲ. ಜೊತೆಗೆ ಸೀಜ್ ಮಾಡಿರುವ ನನ್ನಆಸ್ತಿಗಳನ್ನು ಸಹ ಬಿಡುಗಡೆ ಮಾಡುತ್ತಿಲ್ಲ.ಇಂತಹ ಸಂಕಷ್ಟದ ಸಮಯದಲ್ಲಾದರೂ ಹಣಕಾಸಿನ ಸಚಿವರಾಗಿರುವ ನಿರ್ಮಾಲಾ ಸೀತಾರಾಮ್ ಅವರು ನನ್ನ ಮನವಿಯ ಕಡೆ ಗಮನ ಹರಿಸಬೇಕೆಂದು ಟ್ವೀಟ್ ಮಾಡಿದ್ದಾರೆ.

ಇನ್ನು ಕಿಂಗ್ ಫಿಷರ್ ಜೊತೆಗೆ ಏರ್ ಲೈನ್ಸ್ ಕೂಡ ನಡೆಸುತ್ತಿದ್ದ ವಿಜಯ್ ಮಲ್ಯ ಭಾರತದ ವಿವಿಧ ಬ್ಯಾಂಕ್ ಗಳಿಂದ ಬರೋಬ್ಬರಿ ೯ ಸಾವಿರ ಕೋಟಿ ಸಾಲ ಮಾಡಿ ಅದನ್ನತೀರಿಸಲಾಗದೆ ರಾತ್ರೋ ರಾತ್ರಿ ಭಾರತದಿಂದ ಪರಾರಿಯಾಗಿದ್ದು ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದರು. ಈಗ ಬಡ್ಡಿ ಸಮೇತ ಸಾಲ ತೀರಿಸುವುದಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.