1ಕೋಟಿ ದಾಟಿತು 6ರೈತರು ಸೇರಿ ಮಾಡಿದ ವಿಲೇಜ್ ಕುಕಿಂಗ್ ಚಾನೆಲ್ !ಇವರ ತಿಂಗಳ ಆಧಾಯ ಎಷ್ಟು ಗೊತ್ತಾ ?

Kannada Mahiti

ನಮಸ್ತೇ ಸ್ನೇಹಿತರೆ, ಮನಸಿಟ್ಟು ಕೆಲಸ ಮಾಡಿದ್ರೆ, ಸಾಮಾಜಿಕ ಜಾಲತಾಣಗಳಿಂದ ಹೇಗೆಲ್ಲಾ ಪ್ರಸಿದ್ದಿ ಪಡೆಯಬಹುದು, ಎಷ್ಟೆಲ್ಲಾ ಹಣ ಮಾಡಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ತಮಿಳುನಾಡಿನ ಹಳ್ಳಿಯೊಂದರ ಈ ಆರು ಜನ ರೈತರು. ಇವರು ವಿಲೇಜ್ ಕುಕಿಂಗ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್ ಒಂದನ್ನ ನಡೆಸುತ್ತಿದ್ದು ಪ್ರತಿದಿನ ಭಿನ್ನ ವಿಭಿನ್ನವಾದ ಅಡುಗೆಗಳನ್ನ ಮಾಡಿ ಅದರ ವಿಡಿಯೊಗಳನ್ನ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಆರು ಜನ ರೈತರ ತಂಡದ ಇದೆ ‘ವಿಲೇಜ್ ಕುಕಿಂಗ್ ಚಾನೆಲ್’ ಬರೋಬ್ಬರಿ 10 ಮಿಲಿಯನ್ ಅಂದರೆ 1 ಕೋಟಿ ಚಂದಾದಾರರನ್ನ ಪಡೆಯುವ ಮೂಲಕ ಇತಿಹಾಸವನ್ನೇ ಸೃಷ್ಟಿ ಮಾಡಿದೆ. ೨೦೧೮ರಲ್ಲಿ ಶುರುವಾದ ಈ ಚಾನೆಲ್ ಕೇವಲ ಎರಡುವರೆ ವರ್ಷಗಳಲ್ಲೇ ಯಾರೂ ಊಹಿಸದ ಅದ್ಭುತ ಸಾಧನೆ ಮಾಡಿದೆ.

ಇನ್ನು ಈ ಚಾನೆಲ್ ನ್ನ ಹುಟ್ಟುಹಾಕಿದ್ದು ತಮಿಳುನಾಡಿನ ಪುದುಕೊಟ್ಟೈನ ರೈತಕುಟುಂಬದ ಚಿನ್ನಾ ವೀರಮಂಗಲಂ ಹಾಗೂ ಅವರ ೫ಜನ ಮೊಮ್ಮಕ್ಕಳು ಸೇರಿ 2018ರಲ್ಲಿ ಈ ಯೂಟ್ಯೂಬ್ ಚಾನೆಲ್ ನ್ನ ಹುಟ್ಟುಹಾಕುತ್ತಾರೆ. ಇನ್ನು ಈ ತಂಡದಲ್ಲಿ ಸುಬ್ರಮಣಿಯನ್ ಎಂಬುವವರು ಅಡುಗೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಓದಿಕೊಂಡಿದ್ದು ತಾತಾ ಚಿನ್ನಾ ವೀರಮಂಗಲಂ ಅವರು ಮಾಡುತ್ತಿದ್ದ ದೇಶೀ ಅಡುಗೆಯಿಂದ ಪ್ರೇರೇಪಣೆಗೊಂಡ ಸುಬ್ರಮಣಿಯನ್ ವಿಲೇಜ್ ಕುಕ್ಕಿಂಗ್ ಚಾನೆಲ್ ನ್ನ ಆರಂಭ ಮಾಡುತ್ತಾರೆ. ಇನ್ನು ಕಳೆದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಈ ತಂಡವನ್ನ ಭೇಟಿ ಮಾಡಿ ಅವರು ಮಾಡಿದ್ದ ಅಡುಗೆಯನ್ನ ಸವಿದಿದ್ದರು. ಇನ್ನು ರಾಹುಲ್ ಗಾಂಧಿಯ ಭೇಟಿ ಬಳಿಕ ಈ ಚಾನೆಲ್ ಚಂದಾದಾರರಲ್ಲಿ ದುಪ್ಪಟ್ಟಾಗಿದೆ ಎಂದು ವಿಲೇಜ್ ಕುಕ್ಕಿಂಗ್ ತಂಡದವರು ಹೇಳಿದ್ದಾರೆ.

ಮೊದಲಿಗೆ ನಮ್ಮ ಚಾನೆಲ್ ಗೆ ವಾರಕ್ಕೆ ಹತ್ತು ಸಾವಿರದವರೆಗೆ ಹೊಸ ಚಂದಾದಾರರು ಬರುತ್ತಿದ್ದರು. ಆದರೆ ರಾಹುಲ್ ಗಾಂಧಿಯವರಭೇಟಿಯ ಬಳಿಕ ವಾರಕ್ಕೆ 40ಸಾವಿರ ಚಂದಾದಾರರು ಬರಲು ಶುರುವಾಯಿತು ಎಂದು ಅವರು ಹೇಳಿದ್ದಾರೆ. ಇನ್ನು ಈಗ ಒಂದು ಕೋಟಿ ಚಂದಾದಾರರನ್ನ ಪಡೆದಿರುವ ವಿಲೇಜ್ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ಗೆ ಯೂಟ್ಯೂಬ್ ನಿಂದ ಡೈಮಂಡ್ ಪ್ರಶಸ್ತಿ ಸಿಕ್ಕಿದೆ. ಈ ಚಾನೆಲ್ ನಿಂದ ತಂಡದವರು ತಿಂಗಳಿಗೆ ಬರೋಬ್ಬರಿ ಹತ್ತು ಲಕ್ಷ ಆಧಾಯ ಪಡೆಯುತ್ತಿದ್ದು, ಎರಡು ಲಕ್ಷದವರೆಗೆ ಖರ್ಚು ವೆಚ್ಚಗಳಾಗುತ್ತವೆ ಎಂದು ಹೇಳಲಾಗಿದೆ. ಸ್ನೇಹಿತರೆ ವಿಲೇಜ್ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..