ಮಾಸ್ತಿ ಗುಡಿ ದು’ರಂತದ ಬಗ್ಗೆ ಮೊದಲೇ ಎಚ್ಚರ ಕೊಟ್ಟಿದ್ದರಂತೆ ವಿನಯ್ ಗುರೂಜಿ ! ಸ್ಟಂಟ್ ಮಾಸ್ಟರ್ ರವಿವರ್ಮಾ ಬಿಚ್ಚಿಟ್ಟ ಅಸಲಿ ಸತ್ಯ..

Cinema
Advertisements

ದುನಿಯಾ ವಿಜಯ್ ಅಭಿನಯದ ಮಾಸ್ತಿ ಗುಡಿ ಸಿನಿಮಾ ಚಿತ್ರೀಕರಣದ ವೇಳೆ ಸಂಭವಿಸಿದ ಅ’ಪಘಾ’ತ ನಿಮಗೆ ತಿಳಿದೇ ಇದೆ. ಉದಯೋನ್ಮುಖ ಪ್ರತಿಭೆಗಳಾದ ನಟ ಅನಿಲ್ ಮತ್ತು ಅನಿಲ್ ದಾರುಣ ಸಾ’ವು ಕಂಡರು. ಅಂದು ನಟ ದುನಿಯಾ ವಿಜಯ್, ನಿರ್ದೇಶಕ, ಸ್ಟಂಟ್ ಮಾಸ್ಟರ್, ನಿರ್ದೇಶಕ ಮತ್ತು ನಿರ್ಮಾಪಕ ದು’ರ್ಘಟನಯ ಹೊಣೆ ಹೊರಬೇಕಾಯಿತು. ಟಿವಿ ಇತ್ತೀಚಿನ ಸಂದರ್ಶನದಲ್ಲಿ ಮಾಸ್ತಿಗುಡಿ ಚಿತ್ರದ ಸ್ಟಂಟ್ ಮಾಸ್ಟರ್ ರವಿವರ್ಮ ಈ ಕುರಿತು ಮಾತನಾಡಿದ್ದಾರೆ. ನಡೆಯಲಿರುವ ಅ’ಪಘಾ’ತದ ಬಗ್ಗೆ ವಿನಯ್ ಗುರೂಜಿ ಮೊದಲೇ ಸೂಚನೆ ನೀಡಿದ್ದರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

[widget id=”custom_html-4″]

Advertisements

ಮಾಸ್ತಿ ಗುಡಿಯ ಆ ದು’ರಂತದ ಚಿತ್ರೀಕರಣ ನಡೆದಿದ್ದು ಮಾಗಡಿಯ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ. ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ದುನಿಯಾ ವಿಜಯ್, ಅನಿಲ್ ಉದಯ್ ಹೆಲಿಕಾಫ್ಟರ್ ನಿಂದ ಜಿಗೆಯುತ್ತಾರೆ. ದುನಿಯಾ ವಿಜಯ್ ಅವರನ್ನು ತೆಪ್ಪದ ಸಹಾಯದಿಂದ ರಕ್ಷಿಸಲಾಗುತ್ತದೆ. ಆದರೆ ಇನ್ನುಳಿದ ಇಬ್ಬರು ನಟರು ಈಜು ಬಾರದೆ ಜಲಸಮಾ’ಧಿಯಾಗುತ್ತಾರೆ. ಅವರಿಬ್ಬರೂ ಯಾವುದೇ ಸುರಕ್ಷತೆಯ ಮುಂಜಾಗರೂಕತೆ ತೆಗೆದುಕೊಳ್ಳದೆ ನೀರಿಗೆ ಹಾರಿರುತ್ತಾರೆ. ಈ ದು’ರ್ಘಟನೆ ನಡೆಯುವ ಮುನ್ನ ಮುನ್ನ ವಿನಯ್ ಗುರೂಜಿ ಶೂಟಿಂಗ್ ನಡೆಯುವ ಸ್ಥಳಕ್ಕೆ ಹೋಗಿದ್ದರಂತೆ. ಆಗ ಅವರಿಗೆ ಅಲ್ಲಿ ಏನೋ ಸರಿಯಲ್ಲ ಅಂದಿದ್ದರಂತೆ.

[widget id=”custom_html-4″]

ಆಗ ವಿನಯ್ ಗುರೂಜಿ ನನಗೆ ಇಲ್ಲಿ ಏನೋ ಸರಿಯಿಲ್ಲ ಅನಿಸುತ್ತಿದೆ. ಇಲ್ಲಿ ಏನೋ ಕೆ’ಡುಕು ಆಗುವ ಸಾಧ್ಯತೆ ಇದೆ. ನಾನು ಇಲ್ಲಿ ಇರಲಾರೆ ಎಂದು ಹೊರಟ ಹೋದರು. ಎಲ್ಲರೂ ಎಚ್ಚರದಿಂದ ಇರಲು ಸೂಚಿಸಿದ್ದರು. ಹೋಗುವ ಮುನ್ನ ತಮ್ಮ ಕಾರಿನಲ್ಲಿ ಇದ್ದ ಸಾಯಿ ಬಾಬಾ ವಿಗ್ರಹವನ್ನು ಕೊಟ್ಟರು. ಮತ್ತು ಅದನ್ನು ನಿರ್ದೇಶಕರಿಗೆ ಕೊಡುವಂತೆ ಹೇಳಿದರು. ನೀವು ಏನೋ ಅ’ಪಾಯ ಎದುರಿಸಬೇಕಾಗುತ್ತದೆ ಎಂದರು. ಈ ವಿಷಯಗಳನ್ನು ಸ್ವತಃ ಚಿತ್ರದ ಸ್ಟಂಟ್ ಮಾಸ್ಟರ್ ರವಿ ವರ್ಮ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ದು’ರಂತದಲ್ಲಿ 7 ಜನಕ್ಕೆ ಅಪಾಯ ಇತ್ತಂತೆ. ಆದರೆ ಉಳಿದವರು ಪಾರಾಗಿದ್ದಾರೆ ಎಂದು ಗುರೂಜಿಗಳು ತಿಳಿಸಿದರಂತೆ. ಇಷ್ಟೆಲ್ಲಾ ತಿಳಿದಿದ್ದರೂ ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ, ಪೂರ್ವಾಪರ ಯೋಚಿಸದೆ ಅವರೆಲ್ಲರನ್ನೂ ನೀರಿಗೆ ಇಳಿಸಿ ದು’ರಂತಕ್ಕೆ ಕಾರಣವಾಗಿರುವುದಕ್ಕೆ ಜನ ಇಂದಿಗೂ ಚಿತ್ರ ತಂಡದ ಮೇಲೆ ಕಿಡಿಕಾರುತ್ತಿದ್ದಾರೆ.