ವಿಷ್ಣುದಾದಾ ಪುತ್ಥಳಿ ಧ್ವಂ’ಸ ವಿಚಾರ ಕುರಿತಂತೆ ಅಣ್ಣಾವ್ರ ಕುಟುಂಬದ ಬಗ್ಗೆ ನಡೆಯುತ್ತಿದೆ ಅಪಪ್ರಚಾರ !

Cinema

ನಮಸ್ತೇ ಸ್ನೇಹಿತರೇ, ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನ ಮೇರು ನಟ ಅಭಿಮಾನಿಗಳ ಪಾಲಿನ ಕರ್ಣ, ದಾದಾ ಎನಿಸಿಕೊಂಡಿರುವ ಕನ್ನಡಿಗರ ಆರಾಧ್ಯದೈವ ಡಾ.ವಿಷ್ಣುವರ್ಧನ್ ಅವರ ಬಗ್ಗೆ ನಾವು ನೋಡಿಯೇ ಇರದ ತೆಲುಗು ನಟನೊಬ್ಬ ಬಾಯಿಗೆ ಬಂದಂತೆ ಮಾತನಾಡಿದ್ದು, ಬಳಿಕ ಅಳುತ್ತಾ ಗೊಗೇರದು ಸಾಮಾಜಿಕ ಜಾಲತಾಣದಲ್ಲಿ ತಲೆಬಾಗಿ ವಿಷ್ಣು ಸರ್ ಕುಟುಂಬದವರು, ಅಭಿಮಾನಿಗಳು ಹಾಗೂ ಸುದೀಪ್, ಪುನೀತ್ ಸೇರಿದಂತೆ ಹಲವು ನಟರ ಬಳಿ ಕ್ಷಮೆ ಕೋರಿದ್ದರು. ಇದಾದ ಕೆಲ ದಿನಗಲ್ಲೇ ಕನ್ನಡ ಸಿನಿ ಪ್ರೇಮಿಗಳೆಲ್ಲಾ ತಲೆ ತಗ್ಗಿಸುವಂತ ಘಟನೆಯೊಂದು ನಡೆದುಹೋಗಿದೆ. ಹೌದು, ನಿಮಗೆಲ್ಲಾ ಗೊತ್ತಿರುವಂತೆ ಕನ್ನಡದ ಮೇರು ನಟರಲ್ಲಿ ಒಬ್ಬರಾದ ವಿಷ್ಣು ದಾದಾ ಅವರ ಮಾಗಡಿ ರಸ್ತೆಯಲ್ಲಿರುವ ಪ್ರತಿಮೆಯನ್ನ ಧ್ವಂ’ಸ ಮಾಡಿ ಹೀ’ನಕೃತ್ಯೆ ಮೆರೆದಿದ್ದಾರೆ ಕಿಡಿಗೇಡಿಗಳು.

ಇನ್ನು ಇಂತಹ ಕೃ’ತ್ಯವನ್ನ ಮಾಡಿದವರು ಮನುಷ್ಯರಂತೆ ಅಲ್ಲವೇ ಅಲ್ಲ. ಒಬ್ಬ ಮೇರುನಟನಿಗೆ ಅಪಮಾನ ಮಾಡಿದವರನ್ನ ಕ್ಷಮಿಸಲು ಸಾಧ್ಯವೇ ಇಲ್ಲ. ಅಂತಹವರಿಗೆ ಶಿ’ಕ್ಷೆಯಾಗಲೇಬೇಕು. ಇನ್ನು ಈ ವಿಚಾರ ದಿನದಿಂದ ದಿನಕ್ಕೆ ಹಲವು ರೀತಿಯ ಪಡೆದುಕೊಳ್ಳುತ್ತಿದ್ದು ಇದಕ್ಕೆ ಕಾರಣ ಅಣ್ಣಾವ್ರ ಕುಟುಂಬ ಮತ್ತು ಶಿವಣ್ಣವರ ಕುಟುಂಬವೇ ಕಾರಣ ಎಂಬ ಪೋಸ್ಟ್ ಒಂದನ್ನ ಯಾರೂ ಕಿಡಿಗೇಡಿಗಳು ಸೋಷಿಯಲ್ ಮಿಡಿಯಾಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಕರ್ನಾಟಕ ಸುಪುತ್ರ ಡಾ.ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂ’ಸ ಮಾಡಲು ಕಾರಣ ಕೆಲ ನಿರ್ದೇಶಕ ಹಾಗೂ ನಿರ್ಮಾಪಕರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಆದರೆ ಈಗ ಅದು ಡಾ.ರಾಜ್ ಕುಮಾರ್ ಅವರ ಕುಟುಂಬದ ವಿರುದ್ಧ ತಿರುಗಿದ್ದು ಕಿಡಿಗೇಡಿಗಳು ಈ ರೀತಿಯಾಗಿ ಪ್ರಚಾರ ಮಾಡುತ್ತಿದ್ದು ಸಂಬಂಧ ಹೊಂದಿರುವ ಡಾ. ರಾಜ್ ಕುಟುಂಬ ಹಾಗೂ ಡಾ.ವಿಷ್ಣು ಅವರ ಕುಟುಂಬದ ನಡುವೆ ಮಸಿ ಬಳಿಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ರಾಜ್ ಕುಮಾರ್, ಶಿವರಾಜ್ ಕುಮಾರ್ ಅಭಿಮಾನಿಗಳು ಇಂತಹ ಕಿಡಿಗೇಡಿಗಳ ಬಗ್ಗೆ ಗಂಭೀರವಾದ ಕ್ರಮ ತೆಗೆದುಕೊಳಬೇಕೆಂದು ಪ್ರತಿಭ’ಟನೆ ಕೂಡ ನಡೆಸಿದ್ದು ಪ್ರ’ಕರಣ ದಾಖಲು ಮಾಡಿದ್ದಾರೆ.

ಒಟ್ಟಿನಲ್ಲಿ ಪ್ರತಿಮೆ ಧ್ವಂ’ಸ ಮಾಡಿರುವ ಯಾರೇ ಕಿಡಿಗೇಡಿಗಳೇ ಇರಲಿ ಅವರಿಗೆ ತಕ್ಕ ಶಿ’ಕ್ಷೆ ಆಗಲೇಬೇಕು. ಅದರೇ ಮೇರು ನಟ ಕನ್ನಡಿಗರ ಆರಾಧ್ಯದೈವ ಅಣ್ಣಾವ್ರ ಕುಟುಂಬದ ವಿರುದ್ಧ ಈ ರೀತಿಯಾಗಿ ಇಲ್ಲ ಸಲ್ಲದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವುದು ನಮಗೆಲ್ಲರಿಗೂ ಬೇಜಾರಿನ ವಿಷಯವೇ ಸರಿ. ಸ್ನೇಹಿತರೆ ಈ ರೀತಿ ಕನ್ನಡ ಚಿತ್ರರಂಗದ ಇಬ್ಬರು ಮೇರು ನಟರ ಕುಟುಂಬಗಳ ನಡುವೆ ಮಸಿ ಬಳಿಯಲು ಪ್ರಯತ್ನ ಸರಿ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..