ನಟ ಸುದೀಪ್ ಈ ವಿಷಯಗಳಲ್ಲಿ ಪಕ್ಕಾ ವಿಷ್ಣು ವರ್ಧನ್ ತರಾನೇ

Cinema
Advertisements

ವರನಟ ಡಾ.ರಾಜಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಶಂಕರ್ ನಾಗ್ ಕನ್ನಡ ಚಿತ್ರ ರಂಗದ ಮೂರು ಮುತ್ತುಗಳು. ಇವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇವರಿಗೆ ಇಂದಿಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇರುವುದಲ್ಲದೆ ಇಂದಿನ ನಾಯಕ ನಟರುಗಳು ಸಹ ದೊಡ್ಡ ಅಭಿಮಾನಿಗಳಾದ್ದಾರೆ. ಇವರುಗಳ ಹೆಸರಿನಲ್ಲಿ ಸಿನಿಮಾಗಳನ್ನೂ ತೆಗೆಯುತ್ತಾರೆ.

Advertisements

ನಟ ಸುದೀಪ್ ಕೂಡ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಅಲ್ಲದೆ ಕೆಲ ಅಭಿಮಾನಿಗಳು ಸುದೀಪ್ ಅವರಲ್ಲಿ ವಿಷ್ಣುವರ್ಧನ್ ಅವರನ್ನು ಕಾಣುತಿದ್ದಾರೆ. ಎಷ್ಟೋ ಜನರಿಗೆ ಇವರಿಬ್ಬರ ನಡುವೆ ಇರುವ ಸಾಮ್ಯತೆಗಳು ತಿಳಿದಿಲ್ಲ. ಅವು ಕಾಕ ತಾಳಿಯವೋ ಏನೋ ಗೊತ್ತಿಲ್ಲ. ಆದರೆ ಈ ವಿಷಯಗಳಲ್ಲಿ ಮಾತ್ರ ಸುದೀಪ್ ಥೇಟ್ ವಿಷ್ಣು ಅವರ ತರಹವೇ..

ಅವು ಯಾವುವೆಂದರೆ, ಮೊದಲನೆಯದು ತಾಳ್ಮೆ..ಇತ್ತೀಚಿನ ದಿನಗಳಲ್ಲಿ ಸುದೀಪ್ , ಮಾಧ್ಯಮದ ಮುಂದೆ ಆಗಲಿ, ಸಭೆ ಸಮಾರಂಭಗಳಲ್ಲೇ ಆಗಲಿ, ಹಿರಿಯರ ಕಿರಿಯರ ಮುಂದೆ ಬಹಳ ತಾಳ್ಮೆ ಸಮಾಧಾನದಿಂದ ವರ್ತಿಸುತ್ತಾರೆ. ಆದರೆ ಮುಂಚೆ ಕೊಂಚ ಕೋಪಿಷ್ಟಿಯಾಗಿದ್ದರು. ವಿಷ್ಣು ದಾದಾಕೂಡಾ ಅಷ್ಟೆ.

ವಿಷ್ಣು ವರ್ಧನ್ ಹಲವಾರು ರೀಮೇಕ್ ಚಿತ್ರಗಳನ್ನು ಮಾಡಿದ್ದಾರೆ. ಸುದೀಪ್ ಕೂಡಾ ರಿಮೇಕ್ ಚಿತ್ರಗಳನ್ನು ಮಾಡಿದ್ದಾರೆ. ಇವರಿಬ್ಬರೂ ರಿಮೇಕ್ ಚಿತ್ರಗಳನ್ನು ಮಾಡಲು ಕಾರಣ ಒಂದೇ ಎನ್ನುತ್ತಾರೆ ಇವರನ್ನು ಹತ್ತಿರದಿಂದ ಬಲ್ಲವರು. ಯಾರಾದರೂ ತಪ್ಪು ಮಾಡಿದಾಗ ಅಥವಾ ತೊಂದರೆ ಕೊಟ್ಟಾಗ ಈ ಇಬ್ಬರೂ ನೇರವಾಗಿ ಆರೋಪ ಮಾಡಲು ಹಿಂಜೆರೆಯುತ್ತಾರೆ. ಗೆಳೆತನ ಎಂದು ಬಂದಾಗ ತಾವೇ ಸೋಲುತ್ತಾರೆ.

“ಹಾಗೆ ಮಾಡಿದರೆ ಅದು ತಪ್ಪಾಗುತ್ತದೆ”…”ಅದು ಬೇಡಿ” ಹೀಗೆ ಈ ಎರಡೂ ಪದಗಳನ್ನು ಮಾತನಾಡುವಾಗ ಬಳಸುವ ಶೈಲಿ ಒಂದೇ ..ನಟ ಅಂಬರೀಷ್ ಅವರನ್ನು ಅನುಕರಣೆ ಮಾಡುತ್ತಿದ್ದವರು ವಿಷ್ಣು ವರ್ಧನ್ ಅವರು ಮಾತ್ರವಂತೆ ಅವರನ್ನು ಬಿಟ್ಟರೆ ಅವರ ಎದುರು ಅನುಕರಣೆ ಮಾಡುತ್ತಿದ್ದವರು ನಟ ಸುದೀಪ್ ಮಾತ್ರ ಎಂದು ಸ್ವತಃ ಸುಮಲತಾ ಅಂಬರೀಷ್ ಅವರೇ ಹೇಳಿದ್ದಾರೆ.

ಪಾಪ ವಿಷ್ಣು ಅವರ ಮೇಲೆ ಒಂದು ಆರೋಪವಿದೆ. ಸಿನಿಮಾ ಚಿತ್ರೀಕರಣವೊಂದರ ಸಮಯದಲ್ಲಿ ನಾಯಕ ನಟ ಒಬ್ಬರ ವಿರುದ್ಧ ನಿಜವಾದ ಗನ್ ಬಳಸಿದ್ದರು ಎಂದು. ಅದರಿಂದ ಅವರು ಅಪಾರ ನೋವು ಅವಮಾನ ಎದುರಿಸಬೇಕಾಯಿತು. ಅಂತೆಯೇ ಸುದೀಪ್ ಕೂಡ ಎಷ್ಟೋ ಅಪವಾದಗಳಿಗೆ ವಿನಾಕಾರಣ ಗುರಿಯಾಗಿದ್ದಾರೆ. ಒಂದು ಕಾಲದಲ್ಲಿ ರಾಜ್ ಕುಮಾರ್ ವಿಷ್ಣುವರ್ಧನ್ ನಡುವೆ ಸ್ಟಾರ್ ವಾರ್ ಜೋರಾಗಿತ್ತು. ಈಗ ಸುದೀಪ್ ಹಾಗೂ ಕೆಲವು ನಟರ ನಡುವೆ ಸ್ಟಾರ್ ವಾರ್ ಜೋರಾಗಿದೆ.

ಇಷ್ಟೇ ಅಲ್ಲ ಮೈ ಬಣ್ಣ ದಿಂದ ಹಿಡಿದು ಅವರು ಮಾತನಾಡುವ, ನಡೆಯುವಸ್ಟೈಲ್ ನಿಂದ ಹಿಡಿದು ಇನ್ನೂ ಅನೇಕ ವಿಷಯದಲ್ಲಿ ಇವರಿಬ್ಬರ ನಡುವೆ ಸಾಮ್ಯತೆಯಿದೆ. ಅದಕ್ಕಾಗಿಯೇ ಏನೋ ವಿಷ್ಣು ಅಭಿಮಾನಿಗಳು ಸುದೀಪ್ ಅವರಲ್ಲಿ ತಮ್ಮ ನೆಚ್ಚಿನ ನಟನನ್ನು ಕಾಣುತ್ತಿದ್ದಾರೆ.