ಸಂಕಷ್ಟದಲ್ಲಿರುವ ಭಾರತಕ್ಕೆ ಲಕ್ಷ ಲಕ್ಷ ಕೋಟಿ ಹಣ ದಾನವಾಗಿ ಕೊಟ್ಟ 27 ವರ್ಷದ ಯುವಕ ! ಅಸಲಿಗೆ ಈ ಹುಡುಗ ಯಾರು ಗೊತ್ತಾ ?

Kannada News

ಸ್ನೇಹಿತರೇ, ಭಾರತದಲ್ಲಿ ಹೆಚ್ಚಾಗಿರುವ ಕೊ’ರೋನಾ ಸೋಂಕಿನ ಕಾರಣದಿಂದಾಗಲೂ ಸಾವು ನೋವುಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಸರಿಯಾದ ಸಮಯಕ್ಕೆ ಬೆಡ್, ಆಕ್ಸಿಜೆನ್ ಸಿಗದೇ ಸೋಕಿತ ರೋಗಿಗಳು ಜೀವ ಕಳೆದುಕೊಳ್ಳುತ್ತಿರುವುದು ದುರಾದೃಷ್ಟದ ಸಂಗತಿ. ಇನ್ನು ಇಂತಹ ಸಂಕಟದ ಸಮಯದಲ್ಲಿ ಬಹುತೇಕರು ತಮ್ಮ ಕೈಲಾದ ಸಹಾಯದ ಹಸ್ತ ಚಾಚಿದ್ದಾರೆ. ಹೊರ ದೇಶದ ಸರ್ಕಾರಗಳು ಹಾಗೂ ಉದ್ಯಮಿಗಳು ಕೂಡ ಭಾರತ ಸಂಕಷ್ಟ ಪರಿಸ್ಥಿತಿಯಲ್ಲಿರೋದನ್ನ ನೋಡಿ ನೆರವು ನೀಡುತ್ತಿದ್ದಾರೆ. ಈಗ ರಷ್ಯಾದ ಕೇವಲ 27 ವರ್ಷ ವಯಸ್ಸಿನ ಯುವಕನೊಬ್ಬ ಭಾರತಕ್ಕೆ ಲಕ್ಷ ಲಕ್ಷ ಕೋಟಿ ದೇಣಿಗೆ ನೀಡಿರೋದು ಅಚ್ಚರಿಗೆ ಕಾರಣವಾಗಿದೆ. ಅಂದ ಹಾಗೇ ಇಷ್ಟು ಚಿಕ್ಕ ವಯಸ್ಸಿಗೆ ಅಷ್ಟೊಂದು ಹಣವನ್ನ ಈ ಹುಡುಗ ಸಂಪಾದನೆ ಮಾಡಿದ್ದು ಹೇಗೆ, ನಿಜಕ್ಕೂ ಯಾರೀತ ಅನ್ನೋ ಕುತೂಹಲ ಹೆಚ್ಚಾಗಿದೆ.

ಅಂದ ಹಾಗೆ ರಷ್ಯಾದ ೨೭ ವರ್ಷ ವಯಸ್ಸಿನ ಯುವಕ ಭಾರತಕ್ಕೆ ನೆರವಿನ ರೂಪದಲ್ಲಿ ನೀಡಿದ ಹಣ 1.4 ಶತಕೋಟಿ ಡಾಲರ್. ಅಂದರೆ ಭಾರತದ ರೂಪಾಯಿ ಮೌಲ್ಯದ ಪ್ರಕಾರ ಬರೋಬ್ಬರಿ 8 ಲಕ್ಷ ಕೋಟಿ ರೂಪಾಯಿಗಳು. ಇಷ್ಟು ದೊಡ್ಡ ಮೊತ್ತದ ಹಣವನ್ನ ಭಾರತಕ್ಕೆ ದಾನವಾಗಿ ನೀಡಿದ ಈ ಯುವಕನ ಹೆಸರು ವಿತಾಲಿಕ್ ಬ್ಯುಟೆರಿನ್ ಎಂದು. ಇನ್ನು ಕೇವಲ 27 ವರ್ಷ ವಯಸ್ಸು. ಮೂಲತಃ ರಷ್ಯದವನಾಗಿರುವ ಈತ ಸದ್ಯಕ್ಕೀಗ ನೆಲೆಸಿರೋದು ಕೆನಡಾ ದೇಶದಲ್ಲಿ. ಹಾಗಾದ್ರೆ ಎಷ್ಟೊಂದು ಹಣವನ್ನ ಈ ಚಿಕ್ಕವಯಸ್ಸಿಗೆ ಸಂಪಾದನೆ ಮಾಡಿದ್ದೇಗೆ ಗೊತ್ತಾ ?ಸ್ನೇಹಿತರೇ, ನೀವೆಲ್ಲರೂ ಡಿಜಿಟಲ್ ಪ್ಲಾಟ್ ಫಾರ್ಮ್ ಕರೆನ್ಸಿ ಗಳಲ್ಲಿ ಒಂದಾದ ಬಿಟ್ ಕಾಯಿನ್ ಕರೆನ್ಸಿ ಬಗ್ಗೆ ಕೇಳಿರುತ್ತೀರಾ..ಅದೇ ರೀತಿ ಇಥೀರಿಯಮ್ ಎಂಬ ಕ್ರಿಪ್ಟೋ ಕರೆನ್ಸಿ ಕೂಡ ಇದೆ. ಇದನ್ನ ಹುಟ್ಟು ಹಾಕಿದ್ದೆ ವಿತಾಲಿಕ್ ಬ್ಯುಟೆರಿನ್.

ಇನ್ನು ಈತನ ವೈಯುಕ್ತಿಕ ವಿಚಾರಕ್ಕೆ ಬಂದರೆ, ಈತನ ತಂದೆ ದೊಡ್ಡ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಮಗ ಚಿಕ್ಕವಯಸ್ಸಿದ್ದಾಗಲೇ ತುಂಬಾ ಬುದ್ಧಿವಂತನಾಗಿದ್ದ ಕಾರಣ ನಾಲ್ಕನೇ ತರಗತಿಗೆ ಮಗನ ಓದನ್ನ ನಿಲ್ಲಿಸಿ ಕಂಪ್ಯೂಟರ್ ಕೋರ್ಸ್ ಗಳನ್ನ ಕಲಿಸುತ್ತಾರೆ. ಇನ್ನು ಮಗ ಬೆಳೆಯುತ್ತಿದ್ದಂತೆ ಡಿಜಿಟಲ್ ಕರೆನ್ಸಿಯಾದ ಕ್ರಿಪ್ಟೋ ಕರೆನ್ಸಿ ಬಗ್ಗೆ ತಿಳಿಸುತ್ತಾರೆ. ಇನ್ನು ಅದರ ಮೇಲೆಯೇ ಜ್ನ್ಯಾನ ಬೆಳೆಸಿಕೊಂಡು ಕೆಲಸ ಮಾಡಿದ ವಿತಾಲಿಕ್ ಹದಿನೆಂಟನೇ ವಯಸ್ಸಿಗೆ ತನ್ನದೇ ಆದ ಸ್ವಂತ ಕರೆನ್ಸಿಯನ್ನೇ ಹುಟ್ಟುಹಾಕುತ್ತಾನೆ. ಯುವ ಬಿಲಿಯನೇರ್ ಆಗಿ ಬೆಳೆದಿದ್ದಾನೆ ವಿತಾಲಿಕ್ ಬ್ಯುಟೆರಿನ್. ಇಷ್ಟು ಚಿಕ್ಕ ವಯಸ್ಸಿಗೆ ಲಕ್ಷಾಂತರ ಕೋಟಿ ಸಂಪಾದನೆ ಮಾಡಿರುವುದಲ್ಲದೆ ಅಷ್ಟೇ ಸಹಾಯ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ ಈ ಯುವ ಬಿಲೇನಿಯರ್. ಒಟ್ಟಿನಲ್ಲಿ ಸಂಕಷ್ಟದ ಸ್ಥಿತಿಯಲ್ಲಿರುವ ಭಾರತಕ್ಕೆ ಲಕ್ಷಾಂತರ ಕೋಟಿ ಸಹಾಯ ಮಾಡುವ ಈ ಯುವಕನಿಗೆ ನಾವೆಲ್ಲರೂ ಹ್ಯಾಟ್ಸಾಪ್ ಹೇಳಲೇಬೇಕು.. ಸ್ನೇಹಿತರೇ, ವಿತಾಲಿಕ್ ದಾನವಾಗಿ ಕೊಟ್ಟ ಎಷ್ಟೊಂದು ಹಣವನ್ನ ಸರಿಯಾಗಿ ಉಪಯೋಗಿಸುತ್ತಾರೆಯೇ ? ಇಲ್ಲವೇ ? ಎಂಬುದನ್ನ ಕಾ’ಮೆಂಟ್ ಮಾಡಿ ತಿಳಿಸಿ..