ಸ್ನೇಹಿತರೇ, ಮದುವೆ ಎಂದರೆ ಎಲ್ಲರ ಜೀವನದಲ್ಲಿ ಒಮ್ಮೆ ಬರುವಂತಹ ದೊಡ್ಡ ಸಂಭ್ರಮ. ಇನ್ನು ತಮ್ಮ ಮದುವೆಗೆ ಬಂದು ಹರಸುವಂತೆ ವಿವಾಹ ಆಹ್ವಾನ ಪತ್ರಿಕೆಗಳನ್ನ ಕೊಟ್ಟು, ನೀವು ಬನ್ನಿ ನಿಮ್ಮ ಮನೆಯವರನ್ನು ಕರೆತನ್ನಿ ಎಂದು ಆತ್ಮೀಯ ಸ್ನೇಹಿತರಿಗೆ, ಬಂಧು ಬಾಂಧವರಿಗೆ ಆಹ್ವಾನ ನೀಡುವುದು ನಮ್ಮಲ್ಲಿ ವಾಡಿಕೆ. ತಮ್ಮ ಮದುವೆಗೆ ಯಾರನ್ನು ಮಿಸ್ ಮಾಡಲು ಇಷ್ಟ ಪಡುವುದಿಲ್ಲ ಮದ್ವೆಯಾಗುವ ದಂಪತಿ. ಆದರೆ ಇಲ್ಲೊಂದು ಜೋಡಿ ಮಾಡಿದ್ದೆ ಬೇರೆ. ಹೌದು, ನಮ್ಮ ಮದುವೆಗೆ ಬರಲೇಬೇಡಿ ಎಂದು ಮದುವೆ ಆಹ್ವಾನ ಪತ್ರಿಕೆ ಮುದ್ರಿಸಿದ್ದಾರೆ.
[widget id=”custom_html-4″]
ಹೌದು, ಚಾಮರಾಜನಗರ ತಾಲ್ಲೂಕಿಗೆ ಸೇರಿದ ಚೆನ್ನಪ್ಪನಪುರ ಗ್ರಾಮದ ಶ್ರೇಯಸ್ ಮತ್ತು ಅದೇ ತಾಲ್ಲೂಕಿನ ಹೊಸರಿನ ವಧು ಸುಶ್ಮಾ ಎಂಬುವರೊಂದಿಗೆ ಮದುವೆ ನಿಚ್ಚಯವಾಗಿತ್ತು. ಇನ್ನು ಇವರ ಮದ್ವೆ ನಿಚ್ಚಯವಾಗಿ ಅದಾಗಲೇ ಬಹಳ ದಿನಗಳೇ ಕಳೆದಿತ್ತು. ಇದೆ ಕಾರಣದಿಂದ ಮದ್ವೆ ಆಹ್ವಾನ ಪತ್ರಿಕೆಗಳನ್ನ ಕೂಡ ಹಂಚಲಾಗಿತ್ತು. ಆದರೆ ಇದರ ನಡುವೆ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದ ಕಾರಣ ಈ ನವ ವಧು ವರ ಮತ್ತೊಂದು ಲಗ್ನಪತ್ರಿಕೆಯನ್ನ ಮುದ್ರಿಸಿ ನಮ್ಮ ಮದುವೆಗೆ ಯಾರು ಬರಬೇಡಿ, ಮನೆಯಲ್ಲೇ ಇದ್ದು ನಮ್ಮನ್ನ ಹರಿಸಿ ಆಶೀರ್ವಾದ ಮಾಡಿ ಎಂದು ಆಹ್ವಾನ ಪತ್ರಿಕೆಗಳನ್ನ ಹಂಚಿದ್ದಾರೆ.
[widget id=”custom_html-4″]
[widget id=”custom_html-4″]

ಅದಾಗಲೇ ನಮ್ಮ ಮದುವೆಗೆ ಬನ್ನಿ ಎಂದು ಇದೆ ಮದುವೆ ಜೋಡಿ ಜನವರಿ ೨೨-೨೩ರಂದು ಸಾವಿರಾರು ಮದುವೆ ಲಗ್ನಪತ್ರಿಕೆಗಳನ್ನ ಹಂಚಿದ್ದು, ಈ ನಡುವೆ ಕೊರೋನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ, ಸರ್ಕಾರ ಮಾಡಿರುವ ಕೊರೋನಾ ನಿಯಮಗಳನ್ನ ಪಾಲಿಸುವ ಸಲುವಾಗಿ ಮತ್ತೊಂದು ಆಹ್ವಾನ ಪತ್ರಿಕೆ ಮುದ್ರಿಸಿ ಯಾರು ನಮ್ಮ ಮದುವೆಗೆ ಬರಬೇಡಿ, ಮನೆಯಲ್ಲೇ ಇದ್ದು ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇವರ ಯೋಚನೆ ವಿಚಿತ್ರವಾಗಿದ್ದರೂ, ಕೊರೊನದಂತಹ ಇಂತಹ ಸಮಯದಲ್ಲಿ ಈ ನವ ಜೋಡಿ ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ.
[widget id=”custom_html-4″]