ಪ್ರತೀ ಗ್ಯಾಸ್ ಸಿಲೆಂಡರ್ ನ ತಳಭಾಗದಲ್ಲಿ ರಂಧ್ರಗಳೇಕೆ ಇರುತ್ತೆ ಗೊತ್ತಾ ? ಈ ಮಾಹಿತಿ ನೋಡಿ..

Kannada News

ಸ್ನೇಹಿತರೇ, ಈಗಂತೂ ಹಳ್ಳಿ ಹಳ್ಳಿಗಳ ಅಡುಗೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಗಳದ್ದೇ ದರ್ಬಾರ್. ಹೌದು, ಈಗ ಒಲೆ ಮುಂದೆ ಕುಳಿತು ಊದುವ ಉಸಾಬರಿ ಇಲ್ಲ. ಬಹುಬೇಗನೆ ಅಡುಗೆಯನ್ನ ಮಾಡಿ ಮುಗಿಸುವಲ್ಲಿ ಈ ಗ್ಯಾಸ್ ಸಿಲಿಂಡರ್ ಗಳದ್ದು ಬಹುಮುಖ್ಯ ಪಾತ್ರ. ನಮ್ಮ ಹೆಂಗಳೆಯರಿಗೆ ಮುಂಚೆಗಿಂತ ಈಗ ಅಡುಗೆ ಮಾಡುವುದು ಸ್ವಲ್ಪ ಸುಲಭವಾಗಿದೆ. ಇನ್ನು ನಮ್ಮ ಕಣ್ಣ ಮುಂದೆಯೇ ಇರುವ ಕೆಲ ವಸ್ತುಗಳನ್ನ ನಾವು ಸರಿಯಾಗಿ ಗಮನಿಸುವುದಿಲ್ಲ. ಒಂದು ವೇಳೆ ನೋಡಿದ್ರೂ ಕೂಡ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಗೊಡವೆಗೆ ಹೋಗುವುದಿಲ್ಲ.

ಹಾಗೆಯೇ ಈ ಗ್ಯಾಸ್ ಸಿಲಿಂಡರ್ ಗಳ ಕೆಳಭಾಗದಲ್ಲಿ ರಂಧ್ರಗಳು ಇರುವುದನ್ನ ನೀವೆಲ್ಲರೂ ನೋಡಿರುತ್ತೀರಾ..ಆದ್ರೆ ಈ ರಂಧ್ರಗಳು ಇರುವುದರ ಉಪಯೋಗವೇನು ಎಂಬುದರ ಬಗ್ಗೆ ಬಹಳಷ್ಟು ಮಂದಿಗೆ ತಿಳಿದಿಲ್ಲ..ಹೌದು, ಸಿಲಿಂಡರ್ ಗಾಲ ಕೆಲಭಾಗಗಳಲ್ಲಿ ರಂಧ್ರಗಳು ಇರೋದಕ್ಕೆ ಬಹುಮುಖ್ಯ ಕಾರಣ ಒಂದಿದೆ. ಅದು ಸಿಲಿಂಡರ್ ಗಳಿಗೆ ಗಾಳಿಯ ಸಂಚಾರ ಚೆನ್ನಾಗಿ ಆಗಬೇಕೆಂದು. ಸಾಮಾನ್ಯವಾಗಿ ನಾವು ಮನೆ ಕ್ಲೀನ್ ಮಾಡುವಾಗ ನೀರು ಗ್ಯಾಸ್ ಸಿಲಿಂಡರ್ ನ ತಳಭಾಗಕ್ಕೆ ಹೋಗುತ್ತದೆ.

ಇದರಿಂದ ಗ್ಯಾಸ್ ಸಿಲಿಂಡರ್ ತಳಭಾಗದಲ್ಲಿ ತುಕ್ಕು ಹಿಡಿದು, ಇದರಿಂದ ರಂಧ್ರಗಳು ಉಂಟಾಗಿ ಗ್ಯಾಸ್ ಲೀಕೇಜ್ ಆಗುವ ಸಂಭವ ಹೆಚ್ಚಿದೆ.ಇನ್ನು ಇದೆ ಕಾರಣದಿಂದಲೇ ಸಿಲಿಂಡರ್ ನ ಕೆಳ ಭಾಗದಲ್ಲಿ ರಂಧ್ರಗಳು ಇದ್ದು ಮನೆ ಸ್ವಚ್ಛ ಮಾಡುವಾಗ ನೀರು ಸಿಲಿಂಡರ್ ನ ತಳಕ್ಕೆ ಹೋದಾಗ ಈ ರಂಧ್ರಗಳ ಸಹಾಯದಿಂದ ಅಲ್ಲಿರುವ ತೇವಾಂಶವನ್ನ ಹೀರಿಕೊಳ್ಳುವ ಕೆಲಸ ಮಾಡುತ್ತದೆ. ಇನ್ನು ಇದರಿಂದ ಸಿಲಿಂಡರ್ ತುಕ್ಕು ಹಿಡಿಯುವುದು ತಪ್ಪಲಿದ್ದು ಗ್ಯಾಸ್ ಲೀ’ಕೇಜ್ ಆಗುವುದು ನಿಲ್ಲುವುದರ ಜೊತೆಗೆ ಅ’ನಾಹುತ ಸಂಭವಿಸುವುದನ್ನ ತಡೆಯಬಹುದಾಗಿದೆ. ಸ್ನೇಹಿತರೇ, ಈ ಮಾಹಿತಿ ನಿಮಗೆ ಉಪಯೋಗ ಅನಿಸಿದ್ರೆ ನಿಮ್ಮ ಅನಿಸಿಕೆ ತಿಳಿಸಿ..