ಇಲ್ಲಿ ಕೇವಲ 20ರೂಗೆ ಸಿಗುತ್ತೆ ರುಚಿಯಾದ ಚಿಕನ್ ಬಿರಿಯಾನಿ ! ದುಡ್ಡಿಲ್ಲ ಅಂತ ಬಂದವರಿಗೆ ಫುಲ್ ಫ್ರೀ..

Advertisements

ಸ್ನೇಹಿತರೇ, ರುಚಿರುಚಿಯಾದ ಬಿರಿಯಾನಿ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಇಂದಿನ ದಿನಗಳಲ್ಲಿ ಅಂತೂ ಚಿಕನ್ ಬಿರಿಯಾನಿ ತುಂಬಾನೇ ಫೇಮಸ್. ಹೋಟೆಲ್ ಗಳಲ್ಲಿ ಕಡಿಮೆ ಎಂದರೂ 150ರೂ ರೂಪಾಯಿಗಿಂತ ಜಾಸ್ತಿ ಇರುತ್ತೆ. ಇನ್ನು ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಬಿರಿಯಾನಿ ರೇಟ್ ಕೇಳುವ ಹಾಗೆ ಇಲ್ಲ. ರಸ್ತೆ ಪಕ್ಕದಲ್ಲಿ ಸಿಗುವ ಬಿರಿಯಾನಿ 100ರಿಂದ 130ರುಪಾಯಿಗೆ ಸಿಗುತ್ತದೆ. ಆದರೆ ಇಲ್ಲಿ ನಿಮಗೆ ರುಚಿರುಚಿಯಾದ ಉತ್ತಮವಾದ ಬಿರಿಯಾನಿ ಕೇವಲ 20ರುಪಾಯಿಗೆ ಸಿಗುತ್ತದೆ. ಹಣ ಇಲ್ಲ ಎಂದು ಬಂದವರಿಗೆ ಉಚಿತವಾಗಿಯೇ ಚಿಕನ್ ಬಿರಿಯಾನಿ ಸಿಗುತ್ತದೆ. ಅಚ್ಚರಿಯಾದರೂ ಇದು ಸತ್ಯ. ಇಷ್ಟು ಕಡಿಮೆ ಬೆಲೆಗೆ ಹೇಗೆ ಚಿಕನ್ ಬಿರಿಯಾನಿ ಕೊಡಲು ಸಾಧ್ಯ ಎಂಬ ಅನುಮಾನ ಕಾಡದೆ ಇರೋದಿಲ್ಲ.

[widget id=”custom_html-4″]

Advertisements

ಆದರೆ ನೀವು ಕೇಳಿದ್ದು ಸತ್ಯ. ತಮಿಳುನಾಡಿನ ಕೊಯಂಬುತ್ತೂರಿನಲ್ಲಿ ಮಹಿಳೆಯೊಬ್ಬರು ರುಚಿ ರುಚಿಯಾದ ಉತ್ತಮ ಕ್ವಾಲಿಟಿಯುಳ್ಳ ಬಿರಿಯಾಣ ಕೇವಲ ೨೦ರೂಪಾಯಿಗಳಿಗೆ ಮಾರುತ್ತಿದ್ದಾರೆ. ಬಡವರು ಹಾಗೂ ಭಿಕ್ಷುಕರು ಬಂದರೆ ಉಚಿತವಾಗಿಯೇ ಬಿರಿಯಾನಿಯನ್ನ ಕೊಡುತ್ತಾರೆ. ಅದಕ್ಕಾಗಿಯೇ ಬೋರ್ಡ್ ನಲ್ಲಿ ಹಣ ಇಲ್ಲದವರು ತೆಗೆದುಕೊಳ್ಳಿ ಎಂದು ಬರೆದಿದ್ದು ಬಿರಿಯಾನಿ ಕಟ್ಟಿದ ಪಟ್ಟಣಗಳನ್ನ ಇಟ್ಟಿದ್ದಾರೆ ಈ ಮಹಿಳೆ. ಕಡಿಮೆ ಖರ್ಚಿನಲ್ಲಿ ಉತ್ತಮವಾದ ಊಟವನ್ನ ನೀಡಬೇಕೆಂಬ ಮಾನವೀಯತೆಯಿಂದ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ಈ ಮಹಿಳೆ.

[widget id=”custom_html-4″]

ಈ ಮಹಿಳೆಯು ಕೊಯಂಬುತ್ತೂರಿನ ತಮ್ಮ ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಚಿಕನ್ ಬಿರಿಯಾನಿ ಮಾರಾಟ ಮಾಡುತ್ತಿದ್ದು ಹಸಿದು ಬಂದವರಿಗೆ ಕಡಿಮೆ ಹಣದಲ್ಲಿ ಉತ್ತಮವಾದ ಊಟ ಕೊಡಬೇಕೆಂಬುದು ನನ್ನ ಉದ್ದೇಶ ಎಂದು ಆ ಮಹಿಳೆ ಹೇಳುತ್ತಾರೆ. ಮಾನವೀಯತೆಗೆ ಈ ಮಹಿಳೆ ನೈಜ ನಿದರ್ಶನವಾಗಿದ್ದಾರೆ. ಇನ್ನು ಕೇವಲ ೨೦ರುಪಾಯಿಗೆ ಬಿರಿಯಾನಿ ಕೊಡುತ್ತಿರುವ ಹಣ ಇಲ್ಲದವರಿಗೆ ಉಚಿತವಾಗಿ ಬಿರಿಯಾನಿ ಪಟ್ಟಣ ಕೊಡುತ್ತಿರುವ ಈ ಮಹಿಳೆಯ ಮಾನವೀಯತೆಯ ಕೆಲಸಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ. ಒಟ್ಟಿನಲ್ಲಿ ಆ ಮಹಿಳೆ ಕಲಿಯುಗದ ಅನ್ನಪೂರ್ಣಯೇ ಸರಿ.